ಸಿನಿವಾಣಿ

ಸೌತ್​ ಬ್ಯೂಟಿ ತ್ರಿಷಾಗೆ ತಂದೆ, ಸಹೋದರ, ಅಂಕಲ್​, ಲವರ್​ ಆಗಿ ನಟಿಸಿದ ಏಕೈಕ ನಟ ಇವರೇ ನೋಡಿ... Trisha

ಚೆನ್ನೈ: ಬಹುಭಾಷಾ ನಟಿ ತ್ರಿಷಾ (Trisha) ಅವರನ್ನು ಪರಿಚಯಿಸುವ ಅಗತ್ಯವಿಲ್ಲ. ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್​ ನಟಿಯಾಗಿರುವ ತ್ರಿಷಾ ಇಳಯದಳಪತಿ ವಿಜಯ್​, ಸೂರ್ಯ, ವಿಕ್ರಮ್, ಪ್ರಭಾಸ್​, ಚಿರಂಜೀವಿ, ಅಜಿತ್ ಹಾಗೂ ಸಿಂಬು ಸೇರಿದಂತೆ ಸ್ಟಾರ್​ ನಟರ ಜೊತೆ ಅಭಿನಯಿಸಿದ್ದಾರೆ. ಕನ್ನಡದಲ್ಲೂ ದಿವಂಗತ ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅಭಿನಯದ ಪವರ್​ಸ್ಟಾರ್​ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.

ಕೊನೆಯದಾಗಿ ಬಿಡುಗಡೆಯಾದ ಅವರ ನಟನೆಯ ಪೊನ್ನಿಯನ್​ ಸೆಲ್ವನ್​ ಮತ್ತು ಲಿಯೋ ಸಿನಿಮಾ ಉತ್ತಮ ಯಶಸ್ಸು ಗಳಿಸಿತು. ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ತ್ರಿಷಾ ಬಿಜಿಯಾಗಿದ್ದಾರೆ. ಕಳೆದ ಸೆ.5ರಂದು ಬಿಡುಗಡೆಯಾದ ವಿಜಯ್​ ನಟನೆಯ ಗೋಟ್​ ಸಿನಿಮಾದ ಹಾಡೊಂದರಲ್ಲಿ ಅತಿಥಿ ಪಾತ್ರದಲ್ಲಿ ಸೊಂಟ ಬಳುಕಿಸಿದ್ದರು.

ಇನ್ನು ತ್ರಿಷಾ ಕುರಿತು ನಿಮಗೆ ಗೊತ್ತಿರದ ಒಂದು ಅಚ್ಚರಿಯ ಸಂಗತಿ ಇದೆ. ಅದೇನೆಂದರೆ, ಓರ್ವ ನಟ ಮಾತ್ರ ತ್ರಿಷಾಗೆ ತಂದೆಯಾಗಿ, ಅಂಕಲ್​ ಆಗಿ, ಸಹೋದರನಾಗಿ ಮತ್ತು ಲವರ್​ ಆಗಿ ನಟಿಸಿದ್ದಾರೆ. ಇದು ನಿಮಗೆ ಅಚ್ಚರಿ ಎನಿಸಿದರು ನಿಜ. ಆ ನಟ ಬೇರೆ ಯಾರೂ ಅಲ್ಲ ಅವರೇ ಪ್ರಕಾಶ್​ ರಾಜ್​.

ಅಂದಹಾಗೆ ಪ್ರಕಾಶ್ ರಾಜ್ ಅವರು ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ವಿಶಿಷ್ಟ ನಟನಾಗಿ ತಮ್ಮದೇಯಾದ ಇಮೇಜ್​ ಹೊಂದಿದ್ದಾರೆ. ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಪ್ರಕಾಶ್​ ರಾಜ್​, 5 ಭಾರತೀಯ ಭಾಷೆಗಳನ್ನು ಸುಲಭವಾಗಿ ಮಾತನಾಡುತ್ತಾರೆ. ಇದುವರೆಗೆ ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ತೆಲುಗು, ಮಲಯಾಳಂ, ಕನ್ನಡ, ತಮಿಳು ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ನಾಯಕನಾಗಿ, ಖಳನಾಯಕನಾಗಿ ಹಾಗೂ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಯಾವುದೇ ಪಾತ್ರಕ್ಕೂ ಜೀವು ತುಂಬುತ್ತಾರೆ. ಅವರು ಹೆಚ್ಚಾಗಿ ತಂದೆಯ ಪಾತ್ರಗಳಲ್ಲಿ ನಟಿಸಿದ್ದಾರೆ. ನಟನಾಗಿರುವುದರ ಜೊತೆಗೆ ನಿರ್ದೇಶಕರಾಗಿ, ನಿರ್ಮಾಪಕರಾಗಿಯೂ ಸಿನಿರಂಗದಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.

ಇನ್ನು ಚೆನ್ನೈ ಬ್ಯೂಟಿ ತ್ರಿಷಾ ಇಂಡಸ್ಟ್ರಿಗೆ ಬಂದು ಇಪ್ಪತ್ಮೂರು ವರ್ಷಗಳು ಕಳೆದರೂ ಇನ್ನು ಸ್ಟಾರ್​ ನಟಿಯ ಪಟ್ಟವನ್ನು ಉಳಿಸಿಕೊಂಡಿದ್ದಾರೆ. ವಯಸ್ಸು 41 ಆದರೂ ಇನ್ನೂ ಮದುವೆಯಾಗದೆ ಉಳಿದಿದ್ದಾರೆ. ಈಗಲೂ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಕೇವಲ ಹತ್ತು ವರ್ಷಗಳಲ್ಲೇ ಇಂಡಸ್ಟ್ರಿಯಿಂದ ನಾಪತ್ತೆಯಾಗುವ ಕಾಲಘಟ್ಟದಲ್ಲಿ 23 ವರ್ಷಗಳಿಂದ ಸ್ಟಾರ್​ ನಟಿಯಾಗಿ ನಿಂತಿದ್ದಾರೆ. ವೃತ್ತಿ ಜೀವನದಲ್ಲಿ ಏಳು-ಬೀಳು ಸಹಜ. ಈ ಮಧ್ಯೆ ಸ್ವಲ್ಪ ಹಿನ್ನಡೆ ಅನುಭವಿಸಿದ್ದರು. ಆದರೂ, ಪೊನ್ನಿಯನ್​ ಸೆಲ್ವನ್​ ಸಿನಿಮಾ ಮೂಲಕ ತ್ರಿಷಾ ಕಂಬ್ಯಾಕ್​ ಮಾಡಿದರು. ಮಣಿರತ್ನಂ ನಿರ್ದೇಶನದ ಈ ಚಿತ್ರವು ತ್ರಿಷಾ ಅವರ ವೃತ್ತಿಜೀವನವನ್ನು ಮತ್ತೆ ಬದಲಾಯಿಸಿತು.

ಇನ್ನು ನಿಜವಾದ ವಿಚಾರಕ್ಕೆ ಬಂದರೆ ತ್ರಿಷಾ ಮತ್ತು ಪ್ರಕಾಶ್ ರಾಜ್ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅಚ್ಚರಿಯ ಸಂಗತಿ ಏನೆಂದರೆ, ತ್ರಿಷಾಗೆ ಪ್ರೇಮಿಯಾಗಿ, ತಂದೆಯಾಗಿ, ಸಹೋದರನಾಗಿ ಮತ್ತು ಅಂಕಲ್​ ಆಗಿ ಪ್ರಕಾಶ್​ ರಾಜ್​ ನಟಿಸಿದ್ದಾರೆ. ನುವುವೋಸ್ತಾನಂಟೆ ನೆನೊಡ್ಡಂತಾನ ಹೆಸರಿನ ತೆಲುಗು ಚಿತ್ರದಲ್ಲಿ ತ್ರಿಷಾ ಪ್ರೀತಿಸುವ ಹುಡುಗನ ತಂದೆಯಾಗಿ, ಭಾವಿ ಸೊಸೆಯ ಒಳ್ಳೆಯತನವನ್ನು ಗುರುತಿಸುವ ಮಾವನಾನಿಗೆ ನಟಿಸಿದ್ದಾರೆ. ಇನ್ನು ಸೈನಿಕುಡು ಚಿತ್ರದಲ್ಲಿ ತ್ರಿಷಾ ಅಣ್ಣನಾಗಿ ನಟಿಸಿದ್ದಾರೆ.

ತಮಿಳಿನಲ್ಲಿ ವಿಜಯ್ ಅಭಿನಯದ ಗಿಲ್ಲಿ ಚಿತ್ರವು ತೆಲುಗಿನಲ್ಲಿ ಮಹೇಶ್ ಅಭಿನಯದ 'ಒಕ್ಕಡು' ಚಿತ್ರದ ರಿಮೇಕ್ ಆಗಿದೆ. ಇಲ್ಲಿ ಭೂಮಿಕಾ ನಾಯಕಿಯಾಗಿ ನಟಿಸಿದರೆ, ತಮಿಳಿನಲ್ಲಿ ತ್ರಿಷಾ ನಟಿಸಿದ್ದರು. ಇದರಲ್ಲಿ ತ್ರಿಷಾಳನ್ನು ಪ್ರೀತಿಸುವ ಖಳನಾಯಕನಾಗಿ ಪ್ರಕಾಶ್ ರಾಜ್ ನಟಿಸಿದ್ದಾರೆ. ಇನ್ನು ಕಳೆದ ವರ್ಷ ತೆರೆಕಂಡ ಪೊನ್ನಿಯನ್​ ಸೆಲ್ವನ್​ ಸಿನಿಮಾದಲ್ಲಿ ತ್ರಿಷಾ ತಂದೆಯಾಗಿ ಪ್ರಕಾಶ್​ ನಟಿಸಿದರು. ಈ ಎಲ್ಲ ಸಿನಿಮಾಗಳು ಸೂಪರ್​ ಡೂಪರ್​ ಹಿಟ್ ಎಂಬುದೇ ಗಮನಾರ್ಹ ಸಂಗತಿ. (ಏಜೆನ್ಸೀಸ್​)​