ಸುಶಾಂತ್ ಆತ್ಮಹತ್ಯೆ ಪ್ರಕರಣದಲ್ಲಿ ಅವರ ಅಭಿಮಾನಿಗಳು ಬೀದಿಗಿಳಿದಿದ್ದು ಗೊತ್ತೇ ಇದೆ. ಕಳೆದ ತಿಂಗಳು, ಕೆಲವರು ದೆಹಲಿಯ ಬೀದಿಬೀದಿಗಳಲ್ಲಿ ಹೋರ್ಡಿಂಗ್ಗಳನ್ನು ಹಾಕಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರ ಸಾವನ್ನು ಯಾಕೆ ಕಡೆಗಣಿಸಲಾಗುತ್ತಿದೆ ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ: ಇಂಡಿಪೆಂಡೆನ್ಸ್ ಡೇ ಪ್ರಯುಕ್ತ ‘ಶಿವಾಜಿ ಸುರತ್ಕಲ್’
ಇದೀಗ ಅಮೇರಿಕಾದಲ್ಲೂ ಸುಶಾಂತ್ ಅವರ ಅಭಿಮಾನಿಗಳು, ಜಸ್ಟೀಸ್ ಫಾರ್ ಸುಶಾಂತ್ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಈಗಾಗಲೇ ಕ್ಯಾಲಿಫೋರ್ನಿಯಾದ ಕೆಲವು ಕಡೆ ಜಸ್ಟೀಸ್ ಫಾರ್ ಸುಶಾಂತ್ ಎಂಬ ಬಿಲ್ಬೋರ್ಡ್ಗಳು ರಾರಾಜಿಸುತ್ತಿವೆ.
ಈ ಕುರಿತು ಸ್ವತಃ ಸುಶಾಂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಹಾಕಿಕೊಂಡಿದ್ದಾರೆ. ಭಾರತದಲ್ಲಿ ಶುರುವಾದ ಈ ಅಭಿಯಾನ, ಹೇಗೆ ಇಡೀ ಜಗತ್ತನ್ನು ವ್ಯಾಪಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ತಮ್ಮಇನ್ಸ್ಟಾಗ್ರಾಂನಲ್ಲಿ ಜಸ್ಟೀಸ್ ಫಾರ್ ಸುಶಾಂತ್ನ ಫೋಟೋ ಮತ್ತು ವಿಡಿಯೋ ಹಂಚಿಕೊಂಡಿರುವ ಶ್ವೇತಾ, 'ಗ್ರೇಟ್ ಮಾಲ್ ಪಾರ್ಕವೇಯ ಎಕ್ಸಿಟ್ನಲ್ಲಿ, ಭಾಯ್ ಕುರಿತು ಒಂದು ದೊಡ್ಡ ಬಿಲ್ಬೋರ್ಡ್ ಹಾಕಲಾಗಿದೆ. ಈ ಅಭಿಯಾನ ಇದೀಗ ಎಲ್ಲೆಡೆ ವ್ಯಾಪಿಸುತ್ತಿದೆ' ಎಂದು ಬರೆದಿದ್ದಾರೆ.
ಇನ್ನು ಸುಶಾಂತ್ ಸಿಂಗ್ ಪ್ರಕರಣದ ತನಿಖೆ ನಡೆಯುತ್ತಿದ್ದು, ಇತ್ತೀಚೆಗೆ ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್ ವಿಭಾಗವು, ಸುಶಾಂತ್ ಅವರ ಗೆಳತಿ ರಿಯಾ ಅವರನ್ನು ಕರೆಸಿ, ಎಂಟು ತಾಸುಗಳ ಕಾಲ ವಿಚಾರಣೆ ನಡೆಸಿದೆ.