ಸಿನಿವಾಣಿ

ಸುಶಾಂತ್​ ಕೊನೇ ಚಿತ್ರಕ್ಕೆ ಬಿಡುಗಡೆ ಡೇಟ್​ ಫಿಕ್ಸ್..

manjunathktgns

ಸುಶಾಂತ್​ ಸಿಂಗ್​ ಆತ್ಮಹತ್ಯೆಗೆ ಶರಣಾಗಿ ಮೂರು ವಾರಗಳಾಗುತ್ತ ಬಂತು. ಆ ಮೂರು ವಾರಗಳಲ್ಲಿ ಬಾಲಿವುಡ್​ನಲ್ಲಿ ಭಾರೀ ಬದಲಾವಣೆಗಳೇ ಆಗಿವೆ. ಇದೀಗ ಅದೆಲ್ಲದರ ನಡುವೆ ಸುಶಾಂತ್​ ನಟನೆಯ ಕೊನೇ ಸಿನಿಮಾ ದಿಲ್​ ಬೇಚಾರಾದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.

ಹೌದು, ಮುಖೇಶ್​ ಛಾಬ್ರಾ ನಿರ್ದೇಶನದಲ್ಲಿ ದಿಲ್​ ಬೇಚಾರ ಸಿನಿಮಾ ಸಿದ್ಧವಾಗಿದ್ದು, ಸಂಜನಾ ಸಿಂಘ್ವಿ ಮೊದಲ ಬಾರಿ ನಾಯಕಿಯಾಗಿ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದಾರೆ. ಈ ಚಿತ್ರ ಸ್ಟಾರ್ ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಜುಲೈ 7ಕ್ಕೆ ರಿಲೀಸ್​ ಆಗಲಿದೆ ಎಂದು ಎಂದು ನಿರ್ದೇಶಕರು ಚಿತ್ರದ ಪೋಸ್ಟರ್​ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ.

ನಿರ್ದೇಶಕರು ಪೋಸ್ಟರ್​ ಹಂಚಿಕೊಂಡಿದ್ದೇ ತಡ, ಸಿನಿಮಾ ಬಗ್ಗೆ ವ್ಯಾಪಕ ಕುತೂಹಲ ಸೃಷ್ಟಿಯಾಗಿದ್ದು, ನೊಡುವ ಕಾತರವನ್ನು ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ಈ ಚಿತ್ರದ ಟ್ರೇಲರ್​ ಸೋಮವಾರ ಬಿಡುಗಡೆಯಾಗಲಿದೆ. ಜಾನ್​ ಗ್ರೀನ್​ ಬರೆದ ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್ ಕಾದಂಬರಿಯಿಂದ ಪ್ರೇರಿತಗೊಂಡು ಈ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಮುಖೇಶ್​. (ಏಜೆನ್ಸೀಸ್​)