ಸಿನಿವಾಣಿ

ಶಾರುಖ್‌ಗೆ ವಿಮಾನ ನಿಲ್ದಾಣದಲ್ಲೇ ಮಧ್ಯರಾತ್ರಿಯಿಂದ ಬೆಳಗ್ಗೆವರೆಗೆ ‘ಬಂಧನ’; ಕಾರಣ ಮಾತ್ರ ವಿಚಿತ್ರ …

ಮುಂಬೈ: ಬಾಲಿವುಡ್​ ಬಾದ್​ಷಾ ಶಾರೂಖ್​ ಖಾನ್​ ಅವರನ್ನು ಇದುವರೆಗೂ ಕೆಲವು ಬಾರಿ ಬೇರೆಬೇರೆ ದೇಶಗಳ ಏರ್​ಪೋರ್ಟ್​ನಲ್ಲಿ ತಡೆಯಲಾಗಿದೆ. ಆದರೆ, ಶುಕ್ರವಾರ ರಾತ್ರಿ ಅವರನ್ನು ಮುಂಬೈ ಏರ್​ಪೋರ್ಟ್​ನಲ್ಲಿ ತಡೆಯಲಾಗಿದ್ದು, ಕೊನೆಗೆ ಕಸ್ಟಮ್ಸ್​ ತೆರಿಗೆ ಪಾವತಿಸಿದ ನಂತರ ಹೊರಬಿಡಲಾಗಿದೆ.

ವಿಷಯವೇನೆಂದರೆ, ಶಾರೂಖ್​ ಖಾನ್​ ಇತ್ತೀಚೆಗೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಶಾರ್ಜಾಗೆ ಹೋಗಿದ್ದರು. ಪ್ರೈವೇಟ್​ ಜೆಟ್​ನಲ್ಲಿ ಅವರು ವಾಪಸ್ಸಾಗಿದ್ದು, ಅವರ ಮತ್ತು ಅವರ ಸಿಬ್ಬಂದಿಯ ಬ್ಯಾಗ್​ಗಳಲ್ಲಿ 18 ಲಕ್ಷ ರೂ. ಬೆಲೆ ಬಾಳುವ ವಾಚ್​ಗಳು ಸಿಕ್ಕಿವೆ. ಈ ವಿಚಾರವಾಗಿ ಕಸ್ಟಮ್ಸ್​ ಅಧಿಕಾರಿಗಳು ಅವರನ್ನು ತಡ3ಎದು ವಿಚಾರಣೆ ನಡೆಸಿದ್ದಾರೆ. ಕೊನೆಗೆ ಶಾರೂಖ್​ ಖಾನ್​ ಅವರಿಗೆ 6.86 ಲಕ್ಷ ರೂ.ಗಳನ್ನು ತೆರಿಗೆಯನ್ನಾಗಿ ಪಾವತಿಸಿಕೊಂಡು ಅವರನ್ನು ಬಿಟ್ಟು ಕಳಿಸಿದ್ದಾರೆ.

ತಡರಾತ್ರಿ ಮುಂಬೈಗೆ ಬಂದ ಶಾರೂಖ್​ ಖಾನ್​, ಪೊಲೀಸರು ತಡೆದಿದ್ದರಿಂದ ಕೆಲವು ತಾಸುಗಳ ಕಾಲ ಏರ್​ಪೋರ್ಟ್​ನಲ್ಲೇ ಉಳಿದಿದ್ದಾರೆ. ಕೊನೆಗೆ ಬೆಳಗ್ಗಿನ ಜಾವದ ಹೊತ್ತಿಗೆ ಅವರು ತೆರಿಗೆ ಪಾವತಿಸಿ ಏರ್​ಪೋರ್ಟ್​ನಿಂದ ಹೊರ ನಡೆದಿದ್ದಾರೆ ಎಂದು ಹೇಳಲಾಗಿದೆ.

ಶಾರೂಖ್​ ಖಾನ್​, ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳಕ್ಕಾಗಿ ಶಾರ್ಜಾಗೆ ಹೋಗಿದ್ದರು. ಅವರಿಗೆ ಈ ಸಮಾರಂಭದಲ್ಲಿ ಗ್ಲೋಬಲ್​ ಐಕಾನ್​ ಆಫ್​ ಸಿನಿಮಾ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.