ಮುಂಬೈ: ಹಾಥರಸ್ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಸಿಗಬೇಕು ಎಂಬ ಕಾರಣಕ್ಕೆ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಭಾಗವಹಿಸಿದ್ದ ಬೆನ್ನಲ್ಲೇ ನೆಟ್ಟಿಗನೋರ್ವ ನಟಿಯ ಸಿನಿಮಾ ವೃತ್ತಾಂತವನ್ನು ಖಂಡಿಸಿದ್ದಾನೆ.
‘ಇಡೀ ದೇಶ ಇದೀಗ ತಲೆತಗ್ಗಿಸುವಂತಾಗಿದೆ. ಆದರೆ ಈ ನಟಿ ಸ್ವರಾ ಭಾಸ್ಕರ್ ರಸ್ಬರಿ ಚಿತ್ರದ ಮೂಲಕ ಸೆಕ್ಸ್ ಮತ್ತು ಕಾಮ ಪ್ರಚೋದಕ ರೀತಿಯಲ್ಲಿ ಕಾಣಿಸಿಕೊಂಡು ಅತ್ಯಾಚಾರ ಹೆಚ್ಚಾಗಲು ಕಾರಣರಾಗಿದ್ದಾರೆ’ ಎಂದು ಟ್ವೀಟ್ ಮಾಡಿದ್ದ.
ನೆಟ್ಟಿಗನ ಆ ಮಾತಿಗೆ ಪ್ರತಿಕ್ರಿಯಿಸಿರುವ ಸ್ವರಾ, ‘ಈ ನಿಮ್ಮ ಯೋಚನೆ ತಪ್ಪು. ಸಹಮತದ ಸೆಕ್ಸ್ ಬಗ್ಗೆ ನಾನಿಲ್ಲಿ ಮಾತನಾಡುತ್ತಿಲ್ಲ. ಅದು ಅತ್ಯಂತ ನೈಸರ್ಗಿಕ ವಿಚಾರ. ನೀವು ಹುಟ್ಟಿದ್ದೂ ಹೀಗೆ. ಆದರೆ, ಅತ್ಯಾಚಾರ ಹಾಗಲ್ಲ. ದುರುಪಯೋಗ ಮತ್ತು ಬಲವಂತದಿಂದ ಕೂಡಿದೆ. ಅಲ್ಲಿ ಸಹಮತ ಇರುವುದಿಲ್ಲ. ಈ ಎರಡರ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳಿ’ ಎಂದಿದ್ದಾರೆ.
ಇದನ್ನೂ ನೋಡಿ: ಸಂಭಾವನೆ ಕಡಿಮೆ ಮಾಡಿಕೊಂಡ ಶಾಹೀದ್ … ಹೊಸ ಸಂಭಾವನೆ ಎಷ್ಟು?
‘ಅತ್ಯಾಚಾರಗಳು ಹೆಚ್ಚಾಗುವುದಕ್ಕೆ ನಾನು ಮಾಡಿದ ಪಾತ್ರಗಳು ಕಾರಣವಲ್ಲ. ನಿಮ್ಮ ಮನಸ್ಥಿತಿ ಮತ್ತು ಚಿಂತನೆ ಕಾರಣ. ವಿಚಾರ ಮಾಡಿ ಮಾತನಾಡಿ’ ಎಂದೂ ಸ್ವರಾ ಹೇಳಿದ್ದಾರೆ. (ಏಜೆನ್ಸೀಸ್)