ಯಶ್ ಮತ್ತು ರಾಧಿಕಾ ಪಂಡಿತ್ ಆಗಾಗ ತಮ್ಮ ಮುದ್ದು ಮಕ್ಕಳ ಫೋಟೋಗಳನ್ನು ಸೋಷಿಯಲ್ ಮೀಡಿಯಾ ಮುಖಾಂತರ ಹಂಚಿಕೊಳ್ಳುತ್ತಲೇ ಇರುತ್ತಾರೆ. ಮಂಗಳವಾರ, ಮತ್ತೊಮ್ಮೆ ಯಶ್ ಮತ್ತು ರಾಧಿಕಾ ಅವರ ಮಕ್ಕಳ ಹೊಸ ಫೋಟೋಗಳು ಅನಾವರಣಗೊಂಡಿವೆ.
ಇದನ್ನೂ ಓದಿ: ಯುವರತ್ನ ಚಿತ್ರತಂಡದಿಂದ ನಾಯಕಿ ಸಾಯೇಷಾ ಲುಕ್ ರಿವೀಲ್
ಮಂಗಳವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬ ಇದ್ದಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಸಂಬಂಧ, ರಾಧಿಕಾ ಅವರು ತಮ್ಮ ಮಗನಿಗೆ ಕೃಷ್ಣನ ವೇಷ ಹಾಕಿ ಸಂಭ್ರಮಿಸಿದ್ದಾರೆ. ಜತೆಗೆ ಮಗಳಿಗೂ ಸಾಂಪ್ರದಾಯಿಕ ಉಡುಗೆ ತೊಡಿಸಿದ್ದಾರೆ. ಮಕ್ಕಳ ಫೋಟೋಗಳನ್ನು ರಾಧಿಕಾ ಶೇರ್ ಮಾಡಿದ್ದು, ಈ ಫೋಟೋಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಇದಕ್ಕೂ ಮುನ್ನ ರಾಧಿಕಾ ಪಂಡಿತ್, ರಕ್ಷಾ ಬಂಧನ ಹಬ್ಬವನ್ನೂ ಬಹಳ ಅದ್ಧೂರಿಯಾಗಿ ಆಚರಿಸಿದ್ದರು. ಐರಾ ತನ್ನ ತಮ್ಮನಿಗೆ ರಾಖಿ ಕೊಟ್ಟುವ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಈ ಫೋಟೋಗಳಿಗೂ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.
ಯಶ್ ಮತ್ತು ರಾಧಿಕಾ ಪಂಡಿತ್ ಅಷ್ಟೇ ಅಲ್ಲ, ರಿಷಭ್ ಶೆಟ್ಟಿ ಸಹ ಈ ಜನ್ಮಾಷ್ಟಮಿಗೆ ಪುತ್ರ ರಣ್ವಿತ್ಗೆ ಕೃಷ್ಣನ ವೇಷ ಹಾಕಿ, ಸಂಭ್ರಮಿಸಿದ್ದಾರೆ. ಆ ಬಾಲ ಕೃಷ್ಣನ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿಕೊಂಡು, ಎಲ್ಲರಿಗೂ ಜನ್ಮಾಷ್ಟಮಿ ಶುಭಾಶಯ ಕೋರಿದ್ದಾರೆ.