ನಟಿ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಚೂರು ಹೆಚ್ಚೇ ಸಕ್ರೀಯರು. ಏನೇ ಖುಷಿ ವಿಚಾರವಿರಲಿ ಅದನ್ನು ಅಭಿಮಾನಿಗಳ ಜತೆ ಹಂಚಿಕೊಂಡೇ ಮುಂದಿನ ಕೆಲಸ. ಇದೀಗ ಮನೆ ಕೆಲಸದ ಮಹಿಳೆಯ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿದ್ದಾರೆ ರಾಧಿಕಾ.
ಹೌದು, ಕಳೆದ 8 ವರ್ಷಗಳಿಂದ ರಾಧಿಕಾ ಮನೆಯಲ್ಲಿ ಕೆಲಸ ಮಾಡುತ್ತಿರುವ ಗೀತಾ ಅವರಿಗೆ ನಿನ್ನೆ ಜನ್ಮದಿನದ ಸಂಭ್ರಮ. ಆ ಖುಷಿಯನ್ನು ಅದ್ಯಾವ ಮಟ್ಟಿಗೆ ಸೆಲೆಬ್ರೆಟ್ ಮಾಡಿದ್ದಾರೆಂದರೆ, ಸ್ವತಃ ತಾವೇ ಕೇಕ್ ತಯಾರಿಸಿ ಗೀತಾ ಅವರಿಂದ ಕತ್ತರಿಸಿ ಸಂಭ್ರಮಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಗೀತಾ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ‘ನಮ್ಮನ್ನ ಕೇರ್ ಮಾಡೋ ಈ ವಿಶೇಷ ವ್ಯಕ್ತಿಗಳನ್ನು ನಾವು ಈ ಕರೊನಾ ಹೊತ್ತಿನಲ್ಲಿ ಅತೀ ಹೆಚ್ಚು ಕಾಳಜಿಯಿಂದ ನೋಡಿಕೊಳ್ಳಬೇಕು‘ ಎಂದಿದ್ದಾರೆ ರಾಧಿಕಾ.