ಸಿನಿವಾಣಿ

ನಾನಿನ್ನೂ ಜೀವಂತವಾಗಿದ್ದೇನೆ ಅಂದ್ರೆ ಈ ಇಬ್ಬರು ಕಾರಣ! ಚರ್ಚೆ ಹುಟ್ಟುಹಾಕಿದ ಸಮಂತಾ ಹೇಳಿಕೆ

ಹೈದರಾಬಾದ್​: ಕಳೆದ ಅಕ್ಟೋಬರ್​ 2ರಂದು ಸಮಂತಾ ಮತ್ತು ನಾಗಚೈತನ್ಯ ಅಧಿಕೃತವಾಗಿ ಡಿವೋರ್ಸ್​ ಘೋಷಣೆ ಮಾಡಿದ ದಿನದಿಂದಲೂ ಒಂದಲ್ಲ ಒಂದು ವಿಚಾರಕ್ಕೆ ಇಬ್ಬರು ಭಾರೀ ಸುದ್ದಿಯಾಗುತ್ತಲೇ ಇದ್ದಾರೆ. ಮಾಜಿ ತಾರಾದಂಪತಿ ಏನೇ ಮಾಡಿದರು, ಏನೇ ಮಾತನಾಡಿದರೂ ಸುದ್ದಿಯಾಗುತ್ತಿದೆ. ಇದೀಗ ಸಮಂತಾ ಹೇಳಿರುವ ಮಾತೊಂದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ನಾಗಚೈತನ್ಯ ಹೆಚ್ಚಾಗಿ ಜಾಲತಾಣದಲ್ಲಿ ಸಕ್ರಿಯವಾಗಿಲ್ಲ. ಆದರೆ, ಸಮಂತಾ ಮಾತ್ರ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದಾರೆ. ಪ್ರತಿನಿತ್ಯ ಒಂದಲ್ಲ ಒಂದು ಪೋಸ್ಟ್​ ಮಾಡುತ್ತಲೇ ಇರುತ್ತಾರೆ. ಅದು ಕ್ಷಣ ಮಾತ್ರಕ್ಕೆ ವೈರಲ್​ ಆಗುತ್ತದೆ. ಸದ್ಯ ಸಮಂತಾ ಸ್ವಿಟ್ಜರ್ಲೆಂಡ್​ ಪ್ರವಾಸದಲ್ಲಿದ್ದಾರೆ. ಇದಕ್ಕೆ ಸಂಬಂಧಪಟ್ಟ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡುತ್ತಿದ್ದು, ಎಲ್ಲವೂ ವೈರಲ್​ ಆಗುತ್ತಿವೆ.

ಇದರ ನಡುವೆ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಸಮಂತಾ ಶೇರ್​ ಮಾಡಿಕೊಂಡಿರುವ ಫೋಟೋ ಹಾಗೂ ಅವರು ಬರೆದಿರುವ ಪದ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇಬ್ಬರು ಸ್ಯಾಮ್ಸಂಗ್ ಸ್ಕೈ ಬೋಧಕರ ಫೋಟೋವನ್ನು ಶೇರ್​ ಮಾಡಿಕೊಂಡಿರುವ ಸಮಂತಾ, ನಾನು ಈವತ್ತು ಜೀವಂತವಾಗಿದ್ದೇನೆ ಅಂದರೆ ಅದಕ್ಕೆ ಕಾರಣ ಈ ಇಬ್ಬರು ಎಂದು ಬರೆದಿದ್ದಾರೆ.

ಯಾವ ಉದ್ದೇಶದಿಂದ ಸಮಂತಾ ಈ ರೀತಿ ಹೇಳಿದರೋ ಯಾರಿಗೂ ತಿಳಿದಿಲ್ಲ. ಆದರೆ, ಇದನ್ನು ಕೆಲವರು ಡಿವೋರ್ಸ್​ಗೆ ತಳುಕು ಹಾಕಿದ್ದಾರೆ. (ಏಜೆನ್ಸೀಸ್​)