More

    ಮಾರ್ಚ್​ 18ಕ್ಕೆ ಬಿಡುಗಡೆಯಾದ್ರೆ RRR ಸಿನಿಮಾಗೆ ಕರ್ನಾಟಕದಲ್ಲಿ ಎದುರಾಗಲಿದೆ ಭಾರೀ ಸಂಕಷ್ಟ

    ಹೈದರಾಬಾದ್​: ಸ್ಟಾರ್​ ನಿರ್ದೇಶಕ ಎಸ್​ಎಸ್​ ರಾಜಮೌಳಿ ಅವರ ಆರ್​ಆರ್​ಆರ್​ ಸಿನಿಮಾ ಜನವರಿ 7ರಂದೇ ಬಿಡುಗಡೆಯಾಗಬೇಕಿತ್ತು. ಆದರೆ, ಕರೊನಾ ಮೂರನೇ ಅಲೆ ಅದಕ್ಕೆ ಅಡ್ಡಗಾಲಾಯಿತು. ಚಿತ್ರವನ್ನು ಮುಂದೂಡಿದ್ದ ಚಿತ್ರತಂಡ ಇದೀಗ ಮಾರ್ಚ್​ 18 ಹಾಗೂ ಏಪ್ರಿಲ್​ 28 ಎರಡು ದಿನಾಂಕಗಳನ್ನು ಘೋಷಣೆ ಮಾಡಿದೆ.

    ಕರೊನಾ ಮೂರನೇ ಅಲೆ ನಿಯಂತ್ರಣಕ್ಕೆ ಬಂದು ಎಲ್ಲವೂ ಸರಿಹೋಗಿ ಚಿತ್ರಮಂದಿರಗಳು ತೆರೆದರೆ, ಮಾರ್ಚ್​ 18ಕ್ಕೆ ಆರ್​ಆರ್​ಆರ್​ ತೆರೆಗೆ ಅಪ್ಪಳಿಸಲಿದೆ. ಒಂದು ಪರಿಸ್ಥಿತಿ ಹೀಗೆ ಮುಂದುವರಿದರೆ, ಏಪ್ರಿಲ್​ 28ಕ್ಕೆ ಬಿಡುಗಡೆಯಾಗಲಿದೆ.

    ಒಂದು ವೇಳೆ ಆರ್​ಆರ್​ಆರ್​ ಚಿತ್ರ ಮಾರ್ಚ್​ 18ಕ್ಕೆ ಬಿಡುಗಡೆಯಾದರೆ, ಕರ್ನಾಟಕದಲ್ಲಿ ಚಿತ್ರಕ್ಕೆ ಭಾರೀ ಹೊಡೆತ ಬೀಳುವುದರಲ್ಲಿ ಸಂಶಯವೇ ಇಲ್ಲ. ಏಕೆಂದರೆ, ಮಾರ್ಚ್​ 17 ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಅಭಿನಯದ ಕೊನೆಯ ಚಿತ್ರ ಜೇಮ್ಸ್​ ತೆರೆಗೆ ಅಪ್ಪಳಿಸಲಿದೆ. ಕರ್ನಾಟಕದ ಬಹುತೇಕ ಚಿತ್ರಮಂದಿರಗಳು ಜೇಮ್ಸ್​ ಸಿನಿಮಾವನ್ನು ಪುನೀತ್​ಗೆ ಗೌರವಪೂರ್ವಕವಾಗಿ ಪ್ರದರ್ಶನ ಮಾಡಲಿವೆ. ಇದರಿಂದ ಆರ್​ಆರ್​ಆರ್​ ಚಿತ್ರದ ಕಲೆಕ್ಷನ್​ಗೆ ದೊಡ್ಡ ಪೆಟ್ಟು ಬೀಳಲಿದೆ.

    ಇನ್ನು ಜೇಮ್ಸ್​ ಚಿತ್ರ ಮಾರ್ಚ್​ 17 ಬಿಟ್ಟು ಬೇರೆ ದಿನಾಂಕದಲ್ಲಿ ಬಿಡುಗಡೆಯಾಗುವ ಸಾಧ್ಯತೆಯೇ ಇಲ್ಲ. ಏಕೆಂದರೆ, ಮಾರ್ಚ್​ 17 ಪುನೀತ್​ ಅವರ ಬರ್ತಡೇ ಆಗಿರುವುದರಿಂದ ಜೇಮ್ಸ್​ ಚಿತ್ರ ಅಂದೇ ಬಿಡುಗಡೆಯಾಗುವುದು ಖಚಿತ.

    ಮಾರ್ಚ್​ 18ಕ್ಕೆ ಆರ್​ಆರ್​ಆರ್​ ಬಿಡುಗಡೆಯಾದರೆ, ಕೇವಲ ಜೇಮ್ಸ್​ ಮಾತ್ರವಲ್ಲ ಹಿಂದಿಯಲ್ಲಿ ಅಕ್ಷಯ್​ ಕುಮಾರ್​ ಅವರ ಬಚ್ಚನ್​ ಪಾಂಡೆ ಸಿನಿಮಾ ಎದುರು ಸೆಣಸಾಡಬೇಕಾಗುತ್ತದೆ. ಇದರಿಂದ ಉತ್ತರ ಭಾಗದಲ್ಲಿ ಚಿತ್ರದ ಕಲೆಕ್ಷನ್​ಗೆ ಹೊಡೆತ ಬೀಳಲಿದೆ.

    ಹಾಗಾದರೆ, ಆರ್​ಆರ್​ಆರ್​ ತಯಾರಕರು ಈ ಸಮಸ್ಯೆಯನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಜೂನಿಯರ್ ಎನ್​ಟಿಆರ್​ ಮತ್ತು ರಾಮ್ ಚರಣ್ ಅಭಿನಯಿಸಿದ್ದಾರೆ. (ಏಜೆನ್ಸೀಸ್​)

    ಪುಷ್ಪ ಸಿನಿಮಾದಿಂದ ಪ್ರಭಾವಿತರಾಗಿ ಗ್ಯಾಂಗ್​ ಕಟ್ಟಿಕೊಂಡು ನೀಚ ಕೆಲಸ ಎಸಗಿದ ಅಪ್ರಾಪ್ತರು..!

    ಭಾರತದ ಎತ್ತರದ ಮನುಷ್ಯ ಧರ್ಮೇಂದ್ರ ಪ್ರತಾಪ್​ ಸಿಂಗ್ ಸಮಾಜವಾದಿ ಪಕ್ಷ ಸೇರ್ಪಡೆ ನಂತ್ರ ಹೇಳಿದ್ದು ಹೀಗೆ…

    ವರ್ಷಕ್ಕೆ 5 ಬಾರಿ ವೇತನ ಹೆಚ್ಚಳ!: ನಮ್ಮ ಮೆಟ್ರೊ ಅಧಿಕಾರಿಗಳಿಂದ ನಿಯಮ ಉಲ್ಲಂಘನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts