More

    ವರ್ಷಕ್ಕೆ 5 ಬಾರಿ ವೇತನ ಹೆಚ್ಚಳ!: ನಮ್ಮ ಮೆಟ್ರೊ ಅಧಿಕಾರಿಗಳಿಂದ ನಿಯಮ ಉಲ್ಲಂಘನೆ

    ದಿಗ್ವಿಜಯ ನ್ಯೂಸ್ ಬೆಂಗಳೂರು: ಸರ್ಕಾರಿ ಅಧಿಕಾರಿಗಳಿಗೆ ಸಾಮಾನ್ಯವಾಗಿ 6 ತಿಂಗಳಿ ಗೊಮ್ಮೆತುಟ್ಟಿಭತ್ಯೆ, ಮೂರು ವರ್ಷ ಕ್ಕೊಮ್ಮೆಯೋ ಅಥವಾ ಐದು ವರ್ಷಕ್ಕೊಮ್ಮೆಯೋ ವೇತನ ಏರಿಕೆಯಾಗು ತ್ತದೆ. ಆದರೆ, ಬಿಎಂಆರ್​ಸಿಎಲ್ ಅಧಿಕಾರಿಗಳಿಗೆ ಒಂದು ವರ್ಷದಲ್ಲಿ ಐದು ಬಾರಿ ವೇತನ ಏರಿಕೆಯಾಗಿದೆ! ನಮ್ಮ ಮೆಟ್ರೋದ ಮುಖ್ಯ ಹಣಕಾಸು ಅಧಿಕಾರಿ ಸೇರಿ 100ಕ್ಕೂ ಅಧಿಕ ಅಧಿಕಾರಿ ಗಳಿಗೆ ನಿಯಮಬಾಹಿರವಾಗಿ ವೇತನ ಹೆಚ್ಚಿಸಿರು ವುದು ಬೆಳಕಿಗೆ ಬಂದಿದೆ.

    ನಿಯಮದ ಪ್ರಕಾರ ನಿಗದಿತ ಶೇಕಡಾವಾರು ಪ್ರಮಾಣದಲ್ಲಿ ವೇತನ ಏರಿಕೆ ಮಾಡಬೇಕು. ಆದರೆ, ನಿಯಮಗಳನ್ನು ಗಾಳಿಗೆ ತೂರಿ ಮುಖ್ಯ ಹಣಕಾಸು ಅಧಿಕಾರಿ ಸೇರಿ ಹಲವು ಅಧಿಕಾರಿಗಳ ವೇತನವನ್ನು 2020ರ ಮಾರ್ಚ್​ನಿಂದ 2021ರ ಏಪ್ರಿಲ್​ವರೆಗೆ ಐದು ಬಾರಿ ಹೆಚ್ಚಿಸಿಕೊಂಡಿರುವುದಕ್ಕೆ ದಿಗ್ವಿಜಯ್ ನ್ಯೂಸ್​ಗೆ ದಾಖಲೆ ಸಿಕ್ಕಿದೆ. ನಷ್ಟದಲ್ಲಿರುವ ಬಿಎಂಆರ್​ಸಿಎಲ್​ಗೆ ಇದು ಮತ್ತೊಂದು ಹೊರೆಯಾಗಿದೆ. ಕಾರ್ಯನಿರ್ವಾಹಕ ನಿರ್ದೇಶಕ (ಹಣಕಾಸು)ರಿಗೆ 2020 ಮಾರ್ಚ್​ನಲ್ಲಿ 1.90 ಲಕ್ಷ ರೂ. ಇದ್ದ ವೇತನ ಈಗ 3.06 ಲಕ್ಷ ರೂ.ಗೆ ಏರಿಕೆಯಾಗಿದೆ. ಒಂದೇ ವರ್ಷದಲ್ಲಿ ಶೇ.62 ವೇತನ ಹೆಚ್ಚಳವಾಗಿದೆ. ಸಾಮಾನ್ಯವಾಗಿ ಕೇಂದ್ರ ಸರ್ಕಾರ ತುಟ್ಟಿಭತ್ಯೆ ಹೆಚ್ಚಳ ಮಾಡುತ್ತಿದ್ದಂತೆಯೇ ರಾಜ್ಯ ಸರ್ಕಾರ ಕೂಡ ಸ್ವಲ್ಪ ಕಾಲಾವಧಿ ತೆಗೆದುಕೊಂಡು ತನ್ನ ನೌಕರರಿಗೂ ವೇತನ ಹೆಚ್ಚಳ ಮಾಡುತ್ತದೆ. ಆದರೆ, ನಮ್ಮ ಮೆಟ್ರೋದಲ್ಲಿರುವ ಉನ್ನತಾಧಿಕಾರಿಗಳು ಮನಸೋಇಚ್ಛೆ ವೇತನ ಹೆಚ್ಚಳ ಮಾಡಿಕೊಂಡಿರುವುದು ಮಾಹಿತಿ ಹಕ್ಕು ಕಾಯ್ದೆ ಮೂಲಕ ಬಹಿರಂಗವಾಗಿದೆ.

    ವರ್ಷಕ್ಕೆ 5 ಬಾರಿ ವೇತನ ಹೆಚ್ಚಳ!: ನಮ್ಮ ಮೆಟ್ರೊ ಅಧಿಕಾರಿಗಳಿಂದ ನಿಯಮ ಉಲ್ಲಂಘನೆ

    ಅನುಮತಿ ಕೊಟ್ಟಿದ್ದು ಯಾರು?: ಕರೊನಾದಂತಹ ಸಂಕಷ್ಟದಲ್ಲಿ ಈ ರೀತಿ ವೇತನ ಹೆಚ್ಚಳ ಮಾಡಿಕೊಳ್ಳುವುದಕ್ಕೆ ಅಧಿಕಾರಿಗಳಿಗೆ ಅವಕಾಶ ಇದೆಯಾ? ವರ್ಷಕ್ಕೆ ಒಬ್ಬ ಅಧಿಕಾರಿಯ ವೇತನ 3 ಲಕ್ಷ ರೂ.ಗೆ ನಿಗದಿ ಮಾಡಿದ್ದು ಯಾರು? ಎಂಬ ಪ್ರಶ್ನೆಗಳು ಉದ್ಭವಿಸಿವೆ. ಈ ವಿಚಾರವಾಗಿ ಪ್ರತಿಕ್ರಿಯೆ ಪಡೆಯಲು ಮೆಟ್ರೋ ವ್ಯವಸ್ಥಾಪಕ ಅಧಿಕಾರಿ ಸಂಪರ್ಕಕ್ಕೆ ದೊರೆತಿಲ್ಲ.

    ವಾರಾಂತ್ಯ ಕರ್ಫ್ಯೂ ಇರದಿದ್ದರೂ ರಾಜ್ಯದಲ್ಲಿ ಇಂದು ಸೋಂಕಿತರ ಪ್ರಮಾಣದಲ್ಲಿ ಗಣನೀಯ ಇಳಿಕೆ!

    ಇವ ಸೆಂಟಿಮೆಂಟಲ್ ಕಳ್ಳ; ಅಬ್ಬಬ್ಬಾ.. ಕದಿಯೋದ್ರಲ್ಲೂ ಏನ್​ ಶಿಸ್ತು!: ಈತ ಅಂಥ ವಾಹನ ಕದಿಯುತ್ತಿರಲಿಲ್ಲ, ಕದ್ದಿದ್ದನ್ನು ಮಾರುತ್ತಿರಲಿಲ್ಲ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts