More

    ಇವ ಸೆಂಟಿಮೆಂಟಲ್ ಕಳ್ಳ; ಅಬ್ಬಬ್ಬಾ.. ಕದಿಯೋದ್ರಲ್ಲೂ ಏನ್​ ಶಿಸ್ತು!: ಈತ ಅಂಥ ವಾಹನ ಕದಿಯುತ್ತಿರಲಿಲ್ಲ, ಕದ್ದಿದ್ದನ್ನು ಮಾರುತ್ತಿರಲಿಲ್ಲ..!

    ಬೆಂಗಳೂರು: ಇವನನ್ನು ಸೆಂಟಿಮೆಂಟಲ್ ಕಳ್ಳ ಎಂದರೂ ತಪ್ಪೇನಿಲ್ಲ. ಸಂಬಂಧಿಗಳ ಬಗ್ಗೆ ಪ್ರೀತಿ(?) ಹೊಂದಿದ್ದ ಈತ ವಾಹನಗಳ ಕಳವು ಮಾಡುವುದರಲ್ಲೂ ಭಯಂಕರ ಶಿಸ್ತು. ಅದರಲ್ಲೂ ಕೆಲವು ವಾಹನಗಳನ್ನು ಈತ ಕಳವು ಮಾಡುತ್ತಿರಲಿಲ್ಲ. ಕದಿಯಬೇಕಾದ ವಾಹನಗಳ ಬಗ್ಗೆ ಪರಿಶೀಲನೆ ಮಾಡಿ ಆ ಒಂದು ಅಂಶವನ್ನು ಖಚಿತ ಪಡಿಸಿಕೊಳ್ಳುತ್ತಿದ್ದ ಈತ, ಇದುವರೆಗೆ ಕದ್ದಿರುವ ಒಂದೇ ಒಂದು ವಾಹನವನ್ನೂ ಮಾರಾಟ ಮಾಡಿರಲಿಲ್ಲ!

    ಇಂಥ ಸೆಂಟಿಮೆಂಟಲ್ ಕಳ್ಳನ ಹೆಸರು ಭರತ್ (32). ರಾಜಾಜಿನಗರ ನಿವಾಸಿಯಾಗಿರುವ ಈತನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಆರೋಪಿಯಿಂದ 7 ಸ್ಕೂಟರ್ ಜಪ್ತಿ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ಕಾರೊಳಗೇ ಯುವತಿ ಮೇಲೆ ಅತ್ಯಾಚಾರವೆಸಗಿದ ಶೋಕಿವಾಲಾ..!?

    ಆರೋಪಿ ಭರತ್ ನಗರದ ವಿವಿಧೆಡೆ ಸುತ್ತಾಡಿ ಮನೆ ಮುಂದೆ ನಿಲುಗಡೆ ಮಾಡುತ್ತಿದ್ದ ಸ್ಕೂಟರ್‌ಗಳನ್ನೇ ಟಾರ್ಗೆಟ್ ಮಾಡಿಕೊಂಡು ಕದಿಯುತ್ತಿದ್ದ. ಹೋಂಡಾ ಆ್ಯಕ್ಟಿವಾ, ಆ್ಯಕ್ಸೆಸ್ ಸ್ಕೂಟರ್‌ಗಳ ವಿವಿಧ ಬಗೆಯ ನಕಲಿ ಕೀ ಹೊಂದಿದ್ದ. ರಾತ್ರಿ ಹೊತ್ತು ಸಮಯ ಸಂದರ್ಭ ನೋಡಿಕೊಂಡು ನಕಲಿ ಕೀ ಬಳಸಿ ಸ್ಕೂಟರ್‌ಗಳನ್ನು ಕದಿಯುತ್ತಿದ್ದ. ರಾಜಾಜಿನಗರ, ಬಸವೇಶ್ವರನಗರ, ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೈಚಳಕ ತೋರಿಸಿದ್ದ.

    ಇದನ್ನೂ ಓದಿ: ಹೆಣ್ಣೂರಲ್ಲೇ ಹೆಣ್ಣಿಗೆ ಅನ್ಯಾಯ!; ದೂರು ನೀಡಲು ಹೋದರೆ ಲಂಚ ಕೇಳಿದ, ಮಂಚಕ್ಕೂ ಕರೆದ ಪೊಲೀಸ್ ಇನ್​ಸ್ಪೆಕ್ಟರ್​…

    ಕದ್ದ ಸ್ಕೂಟರ್‌ಗಳನ್ನು ನೇರವಾಗಿ ತಂದು ತನ್ನ ಮನೆ ಮುಂದೆ ನಿಲುಗಡೆ ಮಾಡುತ್ತಿದ್ದ. ಇಷ್ಟೊಂದು ಸ್ಕೂಟರ್‌ಗಳನ್ನು ಕಂಡು ಯಾರಾದರೂ ವಿಚಾರಿಸಿದರೆ ನಾನು ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದು, ರಿಪೇರಿಗೆ ಬಂದ ದ್ವಿಚಕ್ರವಾಹನಗಳಿವು ಎನ್ನುತ್ತಿದ್ದ. ಆದರೆ, ಇದುವರೆಗೆ ಕಳ್ಳತನ ಮಾಡಿದ ಒಂದು ಸ್ಕೂಟರ್‌ ಕೂಡ ಮಾರಾಟ ಮಾಡಿರಲಿಲ್ಲ. ಬದಲಾಗಿ ಸಂಬಂಧಿಕರಿಗೆ ಉಚಿತವಾಗಿ ನೀಡುತ್ತಿದ್ದ. ಕದ್ದಿರುವ ಸ್ಕೂಟರ್‌ಗಳ ಪೈಕಿ 4 ಸ್ಕೂಟರ್‌ನ್ನು ಆರೋಪಿಯೇ ಇಟ್ಟುಕೊಂಡಿದ್ದ. ಇನ್ನುಳಿದ ತಲಾ 1 ಸ್ಕೂಟರ್‌ನ್ನು ಪತ್ನಿ, ಸಹೋದರಿ, ಸಹೋದರ ಸಂಬಂಧಿಗೆ ಉಚಿತವಾಗಿ ಕೊಟ್ಟಿದ್ದ. ಅಲ್ಲದೆ, ಹಲವು ಸಂಬಂಧಿಕರಿಗೆ ಉಚಿತವಾಗಿ ಸ್ಕೂಟರ್ ಕೊಡುವುದಾಗಿ ಭರವಸೆ ನೀಡಿದ್ದ. ಆರೋಪಿ ಹಣಕ್ಕಿಂತ ಸಂಬಂಧಗಳಿಗೆ ಹೆಚ್ಚು ಮಹತ್ವ ಕೊಡುತ್ತಿದ್ದ. ಸಂಬಂಧಿಕರ ಹೊಗಳುವಿಕೆಗೆ ಮನಸೋತಿದ್ದ. ಹೆಸರು ಗಳಿಸೋ ಖಯಾಲಿಗೆ ಬಿದ್ದಿದ್ದ ಎನ್ನಲಾಗಿದೆ.

    ಇದನ್ನೂ ಓದಿ: ಹೆಂಡತಿಯೊಂದಿಗೆ ಜಗಳವಾಡಿದ ಡಾಕ್ಟರ್​ ಸಾವು; ಬೆಡ್​ರೂಮ್​ನಲ್ಲಿ ಹೊತ್ತಿ ಉರಿದ ಬೆಂಕಿ..!

    ಕದ್ದ ಸ್ಕೂಟರ್‌ಗೆ ಸೂಕ್ತ ದಾಖಲೆ ಇಲ್ಲದ ಹಿನ್ನೆಲೆಯಲ್ಲಿ ಅದನ್ನು ಮಾರಾಟ ಮಾಡಿದರೆ ಸಿಕ್ಕಿ ಬೀಳಬಹುದು ಎಂಬ ಆತಂಕದಿಂದಲೂ ಮಾರಾಟ ಮಾಡಲು ಹಿಂದೇಟು ಹಾಕಿರುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ನಿಯಮ ಉಲ್ಲಂಘಿಸಿದ ಸ್ಕೂಟರ್ ಮುಟ್ಟುತ್ತಿರಲಿಲ್ಲ 

    ಭರತ್ ತನ್ನ ಮೊಬೈಲ್‌ ಫೋನ್​ನಲ್ಲಿ ಸಂಚಾರ ಪೊಲೀಸ್ ವಿಭಾಗದ ಬಿಟಿಪಿ ಆ್ಯಪ್​ ಡೌನ್‌ಲೋಡ್ ಮಾಡಿಕೊಂಡಿದ್ದ. ತಾನು ಕಳ್ಳತನ ಮಾಡಲು ಗುರುತಿಸಿದ ಸ್ಕೂಟರ್‌ನ ವಾಹನದ ನಂಬರನ್ನು ಬಿಟಿಪಿ ಆ್ಯಪ್​ನಲ್ಲಿ ಹಾಕಿ ಪರಿಶೀಲಿಸುತ್ತಿದ್ದ. ಆ ಸ್ಕೂಟರ್ ಮಾಲೀಕರು ಸಂಚಾರ ನಿಯಮ ಉಲ್ಲಂಘಿಸಿ ದಂಡ ಪಾವತಿಸಲು ಬಾಕಿ ಉಳಿಸಿಕೊಂಡಿದ್ದರೆ, ಅದನ್ನು ಕದಿಯುತ್ತಿರಲಿಲ್ಲ. ಸಂಚಾರ ನಿಯಮ ಉಲ್ಲಂಘನೆ ಸಂಬಂಧ ದಂಡ ಪಾವತಿಸಲು ಬಾಕಿ ಇಲ್ಲದ ವಾಹನಗಳನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದ.

    ಇದನ್ನೂ ಓದಿ: ಈ ಊರಲ್ಲಿ ರಾತ್ರಿ ಮನೆಗಳ ದೀಪ ಆರಿದ್ರೆ ಕುರಿಮೇಕೆಗಳೇ ಮಾಯ!; ನಿನ್ನೆ ಮನೆಯವರು ಒಳಗಿದ್ದಾಗಲೇ ಹೊರಗಿನಿಂದ ಚಿಲಕ ಬಿತ್ತು!

    ನಗರದಲ್ಲಿ ಅಲ್ಲಲ್ಲಿ ಸಂಚಾರ ಪೊಲೀಸರು ವಾಹನ ತಪಾಸಣೆ ನಡೆಸುತ್ತಾರೆ. ಅವರ ಕೈಗೆ ಸಿಕ್ಕಿ ಬಿದ್ದರೆ ಸಂಚಾರ ನಿಯಮ ಉಲ್ಲಂಘಿಸಿರುವುದನ್ನು ಪರಿಶೀಲಿಸಿ ಬಾಕಿ ದಂಡವನ್ನೂ ವಸೂಲು ಮಾಡುತ್ತಾರೆ. ಒಂದು ವೇಳೆ ಬಾಕಿ ದಂಡ ಪಾವತಿಸದಿದ್ದರೆ ಅಂತಹ ವಾಹನವನ್ನು ಜಪ್ತಿ ಮಾಡುತ್ತಾರೆ. ಜಪ್ತಿ ಮಾಡಿದ ಸ್ಕೂಟರ್‌ನ ಮಾಲೀಕರು ಯಾರೆಂದು ಪರಿಶೀಲಿಸುವಾಗ, ತಾನು ಕಳ್ಳತನ ಮಾಡಿರುವ ಸಂಗತಿ ಬೆಳಕಿಗೆ ಬರಬಹುದು ಎಂಬ ಆತಂಕಗೊಂಡಿದ್ದೆ. ಹೀಗಾಗಿ ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿದ್ದ ಸ್ಕೂಟರ್‌ಗಳನ್ನು ಕದಿಯುತ್ತಿರಲಿಲ್ಲ ಎಂದು ವಿಚಾರಣೆ ವೇಳೆ ಭರತ್ ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ.

    ಸಿಕ್ಕಿಬಿದ್ದಿದ್ದು ಹೇಗೆ?

    ರಾಜಾಜಿನಗರದ ನಿವಾಸಿ ನರೇಶ್ ಜ.16ರಂದು ರಾತ್ರಿ 10 ಗಂಟೆಗೆ ತಮ್ಮ ಮನೆ ಮುಂದೆ ಸ್ಕೂಟರ್ ನಿಲುಗಡೆ ಮಾಡಿದ್ದರು. ಜ.17ರಂದು ಬೆಳಗ್ಗೆ ದ್ವಿಚಕ್ರ ವಾಹನ ಇರಲಿಲ್ಲ. ಈ ಬಗ್ಗೆ ರಾಜಾಜಿನಗರ ಪೊಲೀಸ್ ಠಾಣೆಗೆ ನರೇಶ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದಾಗ ಆರೋಪಿ ಭರತ್ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ 7 ಸ್ಕೂಟರ್ ಕದ್ದಿರುವ ಬಗ್ಗೆ ಮಾಹಿತಿ ನೀಡಿದ್ದ. ಭರತ್ ದೂರದ ಸಂಬಂಧಿ ಗುತ್ತಿಗೆದಾರರಾಗಿದ್ದು, ಈ ಹಿಂದೆ ಅವರ ಬಳಿ ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಕೆಲಸ ತೊರೆದು ಸ್ಕೂಟರ್ ಕಳ್ಳತನಕ್ಕೆ ಇಳಿದಿದ್ದ.

    ‘ಇವತ್ತು ಹುಟ್ಟಿದ ದಿನ, ಬೇಡ..’ ಎಂದರೂ ಕೇಳದೆ ಮನೆಯಿಂದ ಹೋದಳು: ಜನ್ಮದಿನವೇ ಸಾವಿನ ದಿನವಾಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts