More

    ಈ ಊರಲ್ಲಿ ರಾತ್ರಿ ಮನೆಗಳ ದೀಪ ಆರಿದ್ರೆ ಕುರಿಮೇಕೆಗಳೇ ಮಾಯ!; ನಿನ್ನೆ ಮನೆಯವರು ಒಳಗಿದ್ದಾಗಲೇ ಹೊರಗಿನಿಂದ ಚಿಲಕ ಬಿತ್ತು!

    ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿ ರಾತ್ರಿ ಮನೆಗಳ ದೀಪ ಆರಿಸುತ್ತಿದ್ದಂತೆ ಟಾಟಾಏಸ್‌ನ ಹೆಡ್​ಲೈಟ್‌ಗಳು ಆನ್ ಆಗುತ್ತವೆ. ಕೊಟ್ಟಿಗೆಗಳಲ್ಲಿನ ಕುರಿ ಮೇಕೆಗಳು ಕಣ್ಮರೆಯಾಗುತ್ತವೆ.

    ಅರೇ.. ಮನೆಗಳ ದೀಪ ಆರೋದಕ್ಕೂ, ಟಾಟಾಏಸ್ ಹೆಡ್‌ಲೈಟ್ ಆನ್ ಆಗೋದಕ್ಕೂ ಕುರಿಮೇಕೆ ಕಣ್ಮರೆಯಾಗೋದಕ್ಕೂ ಏನು ಸಂಬಂಧ ಅಂತೀರಾ..! ಸಂಬಂಧ ಖಂಡಿತಾ ಇದೆ. ಕಳೆದೊಂದು ತಿಂಗಳಿಂದ ಕುರಿಮೇಕೆ ಕಳ್ಳರ ಗ್ಯಾಂಗ್‌ವೊಂದು ಸಕ್ರಿಯವಾಗಿದ್ದು, ರಾತ್ರಿ ವೇಳೆ ಕಾರ್ಯಾಚರಣೆಗಿಳಿಯುತ್ತಿದೆ. ಗ್ರಾಮದ ಯಾವುದೇ ಮೂಲೆಯ ಕೊಟ್ಟಿಗೆಯಲ್ಲಿ ಕುರಿ-ಮೇಕೆಗಳಿದ್ದರೂ ಕ್ಷಣಾರ್ಧದಲ್ಲಿ ಹೊತ್ತೊಯ್ದು ಬಿಡುತ್ತಾರೆ.

    ಇದನ್ನೂ ಓದಿ: ಅಪ್ಪುವನ್ನು ದಿನವೂ ನೆನಪಿಸಿಕೊಳ್ಳುವಂತಾಗಲಿ ಎಂದು ಅಭಿಮಾನಿಗಳು ಹೀಗೆ ಮಾಡಿದರು..

    ಮೇಕೆ ಕಳ್ಳರ ಹೆಡೆಮುರಿ ಕಟ್ಟಲು ಗ್ರಾಮದ ಮುಖಂಡರು ಏನೆಲ್ಲಾ ಕಸರತ್ತು ನಡೆಸುತ್ತಿದ್ದರೂ ಚಾಲಾಕಿ ಕಳ್ಳರು ಗ್ರಾಮಸ್ಥರಿಗೆ ಚಳ್ಳೆಹಣ್ಣು ತಿನ್ನಿಸುತ್ತಲೇ ಬಂದಿದ್ದಾರೆ. ಮೊದಮೊದಲು ಯಾವುದೋ ಕಾಡುಪ್ರಾಣಿ ದಾಳಿ ಇರಬಹುದು ಎಂದೇ ಜನ ಭಾವಿಸಿದ್ದರು. ಆದರೆ ಇತ್ತೀಚಿಗೆ ರಾತ್ರಿ ಮನೆಗಳ ದೀಪ ಆರಿಸಿದ ಬಳಿಕ ಅಪರಿಚಿತ ವಾಹನವೊಂದು ಗ್ರಾಮದಲ್ಲಿ ಸುತ್ತುತ್ತಿರುವುದು ಗಮನಕ್ಕೆ ಬಂದಿದೆ. ಕೆಲವರು ಅದು ಬಿಳಿಬಣ್ಣದ ಟಾಟಾಏಸ್ ಗಾಡಿಯೆಂದು ಗುರುತಿಸಿದ್ದರೂ ಅದರ ನೋಂದಣಿ ಸಂಖ್ಯೆ ಗೋಚರವಾಗಿಲ್ಲ ಎನ್ನಲಾಗಿದೆ. ಇದೀಗ ಕುರಿ ಮೇಕೆ ಕಳ್ಳತನ ಪ್ರಕರಣ ದೊಡ್ಡಬೆಳವಂಗಲ ಠಾಣೆ ಮೆಟ್ಟಿಲೇರಿದ್ದು ಖಾಕಿ ಪಡೆಯಾದರೂ ಕಳ್ಳರ ಸೆರೆಹಿಡಿದು ಕುರಿಮೇಕೆಗಳ ಅಪಹರಣಕ್ಕೆ ಮುಕ್ತಿಕೊಡಲಿದ್ದಾರೆಯೇ ಕಾದುನೋಡಬೇಕಿದೆ.

    ಇದನ್ನೂ ಓದಿ: ಕಾರೊಳಗೇ ಯುವತಿ ಮೇಲೆ ಅತ್ಯಾಚಾರವೆಸಗಿದ ಶೋಕಿವಾಲಾ..!?

    ಶುಕ್ರವಾರವೂ 5 ಮೇಕೆ ಅಪಹರಣ: ಕಳೆದೊಂದು ತಿಂಗಳಿಂದ ಕೊಟ್ಟಿಗೆಗಳಲ್ಲಿ ಕೂಡಿಹಾಕಿದ್ದ 30ಕ್ಕೂ ಹೆಚ್ಚು ಕುರಿಮೇಕೆಗಳು ಕಣ್ಮರೆಯಾಗಿವೆ ಎನ್ನಲಾಗಿದ್ದು, ಶುಕ್ರವಾರ ತಡರಾತ್ರಿಯೂ ಗ್ರಾಮದ ಪ್ರವೀಣ್‌ಕುಮಾರ್ ಎಂಬುವರ ಮನೆಯ ಕೊಟ್ಟಿಗೆಯಲ್ಲಿದ್ದ 5 ಮೇಕೆಗಳು ಕಳ್ಳರ ಪಾಲಾಗಿವೆ. ತಡರಾತ್ರಿ ಅಪರಿಚಿತ ವಾಹನದ ಸದ್ದು ಕೇಳಿ ಬಾಗಿಲು ತೆಗೆಯಲು ಮುಂದಾದ ಪ್ರವೀಣ್ ಕುಟುಂಬಕ್ಕೆ ಶಾಕ್ ಆಗಿದೆ. ಹೊರಗಿನಿಂದ ಬಾಗಿಲಿನ ಚಿಲಕಕ್ಕೆ ಬೀಗ ಹಾಕಲಾಗಿದೆ. ಜೋರಾಗಿ ಕೂಗಿ ನೆರೆಹೊರೆಯವರನ್ನು ಎಚ್ಚರಿಸುವ ಹೊತ್ತಿಗೆ ಕೊಟ್ಟಿಗೆಯಲ್ಲಿದ್ದ ಮೇಕೆಗಳು ಕಣ್ಮರೆಯಾಗಿವೆ.

    ‘ಇವತ್ತು ಹುಟ್ಟಿದ ದಿನ, ಬೇಡ..’ ಎಂದರೂ ಕೇಳದೆ ಮನೆಯಿಂದ ಹೋದಳು: ಜನ್ಮದಿನವೇ ಸಾವಿನ ದಿನವಾಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts