ಅಪ್ಪುವನ್ನು ದಿನವೂ ನೆನಪಿಸಿಕೊಳ್ಳುವಂತಾಗಲಿ ಎಂದು ಅಭಿಮಾನಿಗಳು ಹೀಗೆ ಮಾಡಿದರು..

Puneeth
Published on

ಬೆಂಗಳೂರು: ಪವರ್​ ಸ್ಟಾರ್ ಪುನೀತ್ ರಾಜಕುಮಾರ್ ಎಲ್ಲರನ್ನೂ ಅಗಲಿ ತಿಂಗಳುಗಳೇ ಕಳೆದರೂ ಅವರ ಕುರಿತ ನಾನಾ ವಿಚಾರಗಳು ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಲೇ ಇವೆ. ಇನ್ನು ಅಭಿಮಾನಿಗಳು ಕೂಡ ಅವರನ್ನು ಒಂದಲ್ಲ ಒಂದು ರೀತಿಯಲ್ಲಿ ಸ್ಮರಿಸಿಕೊಳ್ಳುವ ಕೆಲಸವನ್ನು ಮಾಡುತ್ತಲೇ ಇದ್ದಾರೆ. ಅದೇ ರೀತಿಯ ಒಂದು ಕೆಲಸವನ್ನು ಇಲ್ಲೊಂದು ಅಭಿಮಾನಿಗಳ ದಂಡು ಮಾಡಿದೆ.

ಅಖಿಲ ಕರ್ನಾಟಕ ಡಾ.ಶಿವರಾಜ್​ಕುಮಾರ್ ಸೇನಾ ಸಮಿತಿಯ ಸದಸ್ಯರು ಹಾಗೂ ಪವರ್​ ಸ್ಟಾರ್ ಪುನೀತ್ ಅಭಿಮಾನಿಗಳು ಇದೀಗ ಅಪ್ಪುವನ್ನು ಅವರಷ್ಟೇ ಅಲ್ಲದೆ ಇತರರು ಕೂಡ ನಿತ್ಯವೂ ನೆನಪಿಸಿಕೊಳ್ಳುವಂತೆ ಮಾಡುವ ಕೆಲಸವೊಂದನ್ನು ಮಾಡಿದ್ದಾರೆ. ಆ ಮೂಲಕ ಪುನೀತ್ ಸ್ಮರಣೆ ಸದಾ ನಡೆಯುವಂತೆ ಮಾಡಲು ಪ್ರಯತ್ನಿಸಿದ್ದಾರೆ.

ಹೌದು.. ಪುನೀತ್ ರಾಜಕುಮಾರ್ ನೆನಪು ದಿನವೂ ಆಗಲಿ ಎಂಬ ದೃಷ್ಟಿಯಿಂದ ಈ ಅಭಿಮಾನಿಗಳು ಪುನೀತ್​ ಫೋಟೋಗಳಿರುವ, ಅಪ್ಪು ಕುರಿತ ವಿಚಾರಗಳಿರುವ 2022ರ ಕ್ಯಾಲೆಂಡರ್​ ರೂಪಿಸಿ ಬಿಡುಗಡೆ ಮಾಡಿದ್ದಾರೆ. ಈ ವಿಶೇಷ ಕ್ಯಾಲೆಂಡರ್​ ಬಿಡುಗಡೆ ಕಾರ್ಯಕ್ರಮ ಇಂದು ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸ್ಮಾರಕ ಬಳಿಯೇ ನೆರವೇರಿತು. 'ಮೈಲಾರಿ', 'ಟಗರು', 'ಸಲಗ' ಮುಂತಾದ ಸಿನಿಮಾಗಳ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಈ ಕ್ಯಾಲೆಂಡರ್ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಡಾ.ರಾಜ್​ ಕುಟುಂಬದ ಅಭಿಮಾನಿಗಳು ನೆರೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net