ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರ ಬಹುನಿರೀಕ್ಷಿತ ಸಿನಿಮಾ "ಬಚ್ಚನ್ ಪಾಂಡೆ" ಮಾರ್ಚ್ 18ರಂದು ತೆರೆಗೆ ಅಪ್ಪಳಿಸಲಿದೆ. ನಿನ್ನೆಯಷ್ಟೇ (ಫೆ.18) ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಅದರಲ್ಲಿರುವ ಕ್ರೋಚ್-ಗ್ರ್ಯಾಬಿಂಗ್ ದೃಶ್ಯ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.
ಅಕ್ಷಯ್ ಕುಮಾರ್ ತಮ್ಮ ಟ್ವಿಟರ್ನಲ್ಲಿ ಟ್ರೈಲರ್ ಅನ್ನು ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಅದರಲ್ಲಿರುವ ಕ್ರೋಚ್-ಗ್ರ್ಯಾಬಿಂಗ್ ದೃಶ್ಯವನ್ನು ಗುರುತಿಸಿ ಟ್ರೋಲ್ ಮಾಡುತ್ತಿದ್ದಾರೆ. ಈ ದೃಶ್ಯವನ್ನು ಪ್ರಖ್ಯಾತ ಮೀಮ್ಸ್ನಿಂದ ಸ್ಫೂರ್ತಿ ಪಡೆದು ನಕಲಿ ಮಾಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಿತ್ರದ ಪೋಸ್ಟರ್ ಕೂಡ ನಕಲಿ ಮಾಡಲಾಗಿದೆ ಎಂದು ಇನ್ನು ಕೆಲವು ತಿಳಿಸಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಇಬ್ಬರು ಸ್ಟ್ರಾ ಮೂಲಕ ಎಳನೀರು ಕುಡಿಯುತ್ತಿರುವ ಪೋಸ್ಟರ್ ಅನ್ನು ಬೇರೊಂದು ಚಿತ್ರದಿಂದ ಕಾಪಿ ಮಾಡಲಾಗಿದೆ ಎಂದಿದ್ದಾರೆ.
ಆದರೆ, ಅಕ್ಷಯ್ ಮತ್ತು ಪಂಕಜ್ ತ್ರಿಪಾಠಿ ನಡುವಿನ ಕ್ರೋಚ್-ಗ್ರ್ಯಾಬಿಂಗ್ ಮೀಮ್ಸ್ ದೃಶ್ಯ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಫರ್ಹಾದ್ ಸಾಮ್ಜಿ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಕೃತಿ ಸನೋನ್ ಮತ್ತು ಅರ್ಷದ್ ವಾರ್ಸಿ ಕೂಡ ನಟಿಸಿದ್ದಾರೆ. (ಏಜೆನ್ಸೀಸ್)