More

    ಕೆಪಿಎಸ್​ಸಿ 2011ರ ಬ್ಯಾಚ್ ಸಿಂಧು: 362 ಹುದ್ದೆಗಳ ನೇಮಕ ಊರ್ಜಿತ; ವಿಧೇಯಕ ಮಂಡನೆ ಮಾಡಿದ ಸರ್ಕಾರ

    ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ 2011ನೇ ಸಾಲಿನ 362 ಗ್ರೂಪ್ ಎ ಮತ್ತು ಬಿ ಹುದ್ದೆಗಳ ನೇಮಕ ಆದೇಶ ಸಿಂಧುಗೊಳಿಸುವ ಮತ್ತು ಆಯ್ಕೆ ಪಟ್ಟಿಯನ್ನು ಕಾನೂನುಬದ್ಧಗೊಳಿಸುವ ಹಿನ್ನೆಲೆಯಲ್ಲಿ ಕರ್ನಾಟಕ ಸಿವಿಲ್ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರರ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

    ಕೆಂಪುಕೋಟೆ ಮೇಲೆ ಭಗವಾಧ್ವಜ ಹಾರಿಸುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಧರಣಿ ನಡೆಸುತ್ತಿರುವ ಸಂದರ್ಭದಲ್ಲೇ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಈ ವಿಧೇಯಕ ಮಂಡಿಸಿದರು. ಕರ್ನಾಟಕ ಲೋಕಸೇವಾ ಆಯೋಗದ ಮೂಲಕ 2011ನೇ ಗೆಜೆಟೆಡ್ ಪ್ರೊಬೆಷನರ್​ಗಳಿಗೆ ಸರ್ಕಾರ ನೀಡಿರುವ ನೇಮಕಾತಿ ಆದೇಶ ಸಿಂಧುಗೊಳಿಸಲು ಈ ವಿಧೇಯಕ ತರಲಾಗಿದೆ. ಸುಪ್ರೀಂ ಕೋರ್ಟ್, ಹೈಕೋರ್ಟ್, ಕೆಎಟಿ ಆದೇಶ ಹಾಗೂ ಸಿಐಡಿ ತನಿಖಾ ವರದಿಯ ಬೆಳವಣಿಗೆಗಳ ಮಾಹಿತಿಯನ್ನು ಈ ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.

    ಯಾವುದೇ ಅಪರಾಧ ಸಾಬೀತಾಗಿಲ್ಲ: ಅಧಿವಿಚಾರಣಾ ನ್ಯಾಯಾಲಯದಲ್ಲಿ ಅಭ್ಯರ್ಥಿಗಳ ಮೇಲೆ ಹೊರಿಸಿದ ಆರೋಪ ಗಳು ರ್ತಾಕ ಅಂತ್ಯ ತಲುಪಿವೆ. ಕರ್ನಾಟಕ ಲೋಕಸೇವಾ ಆಯೋಗದ ಯಾರೇ ಸದಸ್ಯರಾಗಲಿ ಅಥವಾ ಅಭ್ಯರ್ಥಿಯಾಗಲಿ ಯಾವುದೇ ಅಪರಾಧದ ಅಪರಾಧಿ ಎಂದು ಸಾಬೀತಾಗದಿರುವುದರಿಂದ ಹಾಗೂ ಯಾವುದೇ ಅಧಿವಿಚಾರಣಾ ನ್ಯಾಯಾಲಯದಲ್ಲಿ ಅಪರಾಧ ನಿರ್ಣಿತವಾಗದಿರುವುದರಿಂದ 2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್​ಗಳಿಗೆ ಸರ್ಕಾರ ನೇಮಕ ಆದೇಶ ನೀಡಿರುವುದನ್ನು ಸಿಂಧುಗೊಳಿಸುವುದು ಮತ್ತು ಆಯ್ಕೆ ಪಟ್ಟಿಯನ್ನು ಕಾನೂನುಬದ್ಧಗೊಳಿಸುವುದು ಅವಶ್ಯವೆಂದು ಪರಿಗಣಿಸಲಾಗಿದೆ.

    ಸಂವಿಧಾನದ ಉಲ್ಲಂಘನೆಗೆ ದಾರಿ: ಉಚ್ಛ ನ್ಯಾಯಾಲ ಯದ ನಿರ್ಣಯವು ಭಾರತ ಸಂವಿಧಾನದ 14ನೇ ಮತ್ತು 16ನೇ ಅನುಚ್ಛೇದಗಳ ಉಲ್ಲಂಘನೆಗೆ ದಾರಿ ಮಾಡಿಕೊಡು ತ್ತದೆ ಎಂದು ನಿರೂಪಿಸುವುದು ಸಹ ಪ್ರಸ್ತುತವಾಗಿದೆ ಎಂದು ವಿಧೇಯಕದ ಉದ್ದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

    ನೇಮಕ ಪ್ರಕ್ರಿಯೆ

    • 2011ನೇ ಸಾಲಿನಲ್ಲಿ 362 ಗೆಜಿಟೆಡ್ ಪ್ರೊಬೇಷನರ್​ಗಳಿಗೆ ನೇಮಕ ಪ್ರಕ್ರಿಯೆ
    • 2012 ಏ.22ರಂದು ಪ್ರಾರಂಭಿಕ ಲಿಖಿತ ಪರೀಕ್ಷೆ
    • 2012 ಡಿಸೆಂಬರ್ 15ರಿಂದ ಜನವರಿ 6ರವರೆಗೆ ಮುಖ್ಯ ಲಿಖಿತ ಪರೀಕ್ಷೆ
    • 2013 ಮಾರ್ಚ್ 21ರಂದು ಫಲಿತಾಂಶ ಪ್ರಕಟ
    • 2013 ಮೇ 7ರಿಂದ 27ರವರೆಗೆ ಮೌಖಿಕ ಸಂದರ್ಶನ. ಈ ವೇಳೆ ಡಾ.ಎಚ್.ಪಿ.ಎಸ್.ಮೈತ್ರಿ ಎಂಬ ಅಭ್ಯರ್ಥಿ ಈ ನೇಮಕದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ದೂರು ಸಲ್ಲಿಕೆ.
    • ಸರ್ಕಾರದಿಂದ ಸಿಬಿಐ ತನಿಖೆಗೆ ಒಪ್ಪಿಗೆ. ಸದಸ್ಯರೊಬ್ಬರ ವಿರುದ್ಧ ಕ್ರಮ.

    ಸರ್ಕಾರದ ಸಮರ್ಥನೆ ಏನು?

    • ಕಳಂಕಿತ ಅಭ್ಯರ್ಥಿಗಳನ್ನು ಪ್ರತ್ಯೇಕಗೊಳಿಸದ ಮತ್ತು ಸವಿವರವಾಗಿ ತನಿಖೆ ನಡೆಸದ ಹಾಗೂ ಯುಕ್ತ ವಿಚಾರಣೆಯ ನಂತರ ನ್ಯಾಯಾಲಯದಲ್ಲಿ ಅಪರಾಧಿಗಳೆಂದು ಸಾಬೀತಾಗದ ಹೊರತು ಪರೀಕ್ಷೆ ನಿರರ್ಥಕ ವೆಂದು ನಿರ್ಣಯಿಸುವುದು ಸೂಕ್ತವಲ್ಲ.
    • ಕಳಂಕಿತರಲ್ಲದ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಅವರ ಪ್ರಾಮಾಣಿಕ ಪರಿಶ್ರಮವನ್ನು ಗೌರವಿಸಬೇಕಾಗುತ್ತದೆ. ನೇಮಕ ಸಂದರ್ಭದಲ್ಲಿ ಅವರ ನ್ಯಾಯ ಯುತ ನಿರೀಕ್ಷೆಯನ್ನು ಗೌರವಿಸಬೇಕು.

    ಮುಂದೇನು?

    • ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರವಾಗಿ, ಪರಿಷತ್​ನಲ್ಲಿ ಅಂಗೀಕಾರವಾಗಬೇಕು.
    • ಆನಂತರ ರಾಜ್ಯಪಾಲರು ಅಂಕಿತ ಹಾಕಬೇಕು.
    • ರಾಜ್ಯಪಾಲರ ಅಂಕಿತವಾದ ನಂತರ ಕಾಯ್ದೆಯಾಗುತ್ತದೆ.
    • ಕಾಯ್ದೆ ಆದ ನಂತರ 362 ಜನರ ಆಯ್ಕೆ ಸಿಂಧುವಾಗುತ್ತದೆ.
    • ಕಾಯ್ದೆಯನ್ನು ಪ್ರಶ್ನಿಸಿ ಯಾರಾದರೂ ನ್ಯಾಯಾಲಯದ ಮೆಟ್ಟಿಲು ಹತ್ತಿದರೆ ಕಾನೂನು ಹೋರಾಟ ಮುಂದುವರಿಯುತ್ತದೆ.

    ಗಣಿಗಾರಿಕೆ ರಾಜಧನ ಪ್ರಾಧಿಕಾರಕ್ಕೆ ಜಮೆ: ಗ್ರಾಮ ಪಂಚಾಯಿತಿಗಳು ಇನ್ನುಮುಂದೆ ಗಣಿಗಾರಿಕೆಯಿಂದ ಸಂಗ್ರಹವಾಗುವ ರಾಜಧನದ ಮೊತ್ತವನ್ನು ತಪ್ಪದೆ ಸೂಕ್ತ ಪ್ರಾಧಿಕಾರಕ್ಕೆ ನಿಗದಿತ ಸಮಯದಲ್ಲಿ ಜಮೆ ಮಾಡುವಂತೆ ಕರ್ನಾಟಕ ವಿಧಾನಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಮಿತಿ ಶಿಫಾರಸು ಮಾಡಿದೆ. ವಿಧಾನಮಂಡಲದ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ ತನ್ನ 35ನೇ ವರದಿಯಲ್ಲಿ ಈ ಶಿಫಾರಸು ಸಲ್ಲಿಸಿದೆ. ಸಮಿತಿ ಅಧ್ಯಕ್ಷ ಜಿ.ಸೋಮಶೇಖರ ರೆಡ್ಡಿ ವಿಧಾನಸಭೆಯಲ್ಲಿ ವರದಿ ಮಂಡಿಸಿದರು. 1980ರಿಂದ 2012ರವರೆಗೆ ಮಂಡ್ಯ ಜಿಲ್ಲೆ ಚಿನಕುರಳಿ ಮತ್ತು ಹೊನಗನಹಳ್ಳಿ ಗ್ರಾಪಂಗಳಿಗೆ ವಿಧಿಸಿರುವ ದಂಡವನ್ನು ಒಳಗೊಂಡ ರಾಜಧನವನ್ನು ಮನ್ನಾ ಮಾಡಲು ಕ್ರಮ ಕೈಗೊಳ್ಳುವಂತೆ ಸಮಿತಿ ಶಿಫಾರಸು ಮಾಡಿದೆ.

    ಇತರ ಶಿಫಾರಸುಗಳು

    • ಗ್ರಾಪಂಗಳು ವಸೂಲಿ ಮಾಡಿದ ವಿವಿಧ ಸ್ತರದ ಕರವನ್ನು ಕಡ್ಡಾಯವಾಗಿ ಸರ್ಕಾರಕ್ಕೆ ಜಮೆ ಮಾಡಬೇಕು.
    • ಕರ ಜಮೆ ವಿಫಲತೆಯ ನ್ಯೂನತೆ ಸರಿಪಡಿಸಲು ವಿಶೇಷ ನಿಯಮ ರೂಪಿಸಬೇಕು.
    • ದುಂದು ವೆಚ್ಚ ಮಾಡಿದಲ್ಲಿ ಅಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು.

    ಇಂಧನ ನೀತಿ ಪ್ರಸ್ತಾವನೆ ಸಿದ್ಧ

    ಪರಿಸರ ಸ್ನೇಹಿ ಕ್ರಮ ಹಾಗೂ ವಿದ್ಯುತ್ ಉತ್ಪಾದನೆ ಕಡಿತಗೊಳಿಸುವ ಮೂಲಕ ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮ ತಡೆಯಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದ್ದು, ‘ಇಂಧನ ಸಂರಕ್ಷಣೆ ಹಾಗೂ ಇಂಧನ ನೀತಿ-2021-26’ ಪ್ರಸ್ತಾವನೆ ಸಿದ್ಧಪಡಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನೀತಿ ಬಗ್ಗೆ ವಿಸõತ ಚರ್ಚೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಐದು ವರ್ಷಗಳ ಅವಧಿಯಲ್ಲಿ ಈ ನೀತಿ ಅನುಷ್ಠಾನದ ಮೂಲಕ 744 ದಶಲಕ್ಷ ಯೂನಿಟ್ ವಿದ್ಯುತ್ ಉಳಿತಾಯದ ಜತೆಗೆ 6,10,08 ಟನ್ ಇಂಗಾಲದ ಡೈಆಕ್ಸೆ ೖಡ್ ಹೊರಸೂಸುವಿಕೆ ಕಡಿಮೆ ಮಾಡುವ ಗುರಿಯಿಟ್ಟುಕೊಳ್ಳಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

    ಉದ್ದೇಶ

    • ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಪ್ರಮಾಣವನ್ನು 2005ರ ಮಟ್ಟಕ್ಕೆ ಇಳಿಸುವುದು ರಾಷ್ಟ್ರೀಯ ಗುರಿ
    • ರಾಷ್ಟ್ರೀಯ ಹವಾಮಾನವ ಬದಲಾವಣೆ ಕ್ರಿಯಾ ಯೋಜನೆ ಪ್ರಕಾರ ಇಂಧನ ಸಂರಕ್ಷಣೆ ಮತ್ತು ದಕ್ಷತೆ ಭಾಗವಾಗಿ ಕಟ್ಟಡ, ಕೈಗಾರಿಕೆ, ಕೃಷಿ ಇತ್ಯಾದಿ ಕ್ಷೇತ್ರಗಳಲ್ಲಿ ವಿದ್ಯುತ್ ಬಳಕೆ ತಗ್ಗಿಸುವುದು
    • ರಾಜ್ಯ ಸರ್ಕಾರದ 2001ರ ವಿದ್ಯುತ್ ಕಾಯ್ದೆ ಅನುಷ್ಠಾನದ ಬದ್ಧತೆ

    ಕೆಪಿಎಸ್​ಸಿ 2011ರ ಬ್ಯಾಚ್ ಸಿಂಧು: 362 ಹುದ್ದೆಗಳ ನೇಮಕ ಊರ್ಜಿತ; ವಿಧೇಯಕ ಮಂಡನೆ ಮಾಡಿದ ಸರ್ಕಾರಪ್ರಸ್ತಾವಿತ ನೀತಿಯ ಲಕ್ಷ್ಯ

    • ಇಂಧನ ಪಳೆಯುಳಿಕೆ ಆಧಾರಿತ 454 ಮೆಗಾ ವಾಟ್ ವಿದ್ಯುತ್ ಉತ್ಪಾದನೆ ತಪ್ಪಿಸುವುದು
    • 744 ದಶಲಕ್ಷ ಕಿಲೋ ವಾಟ್ ವಿದ್ಯುತ್ ಬಳಕೆ ಕಡಿತ
    • ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ (ಸಿಒ2)ಯನ್ನು 6,10,080 ಟನ್​ಗಳಷ್ಟು ತಗ್ಗಿಸುವುದು

    ನೀತಿಯ ಮುಖ್ಯಾಂಶಗಳು

    • ಪರಿಸರ ಹಾಗೂ ಸಮುದಾಯದ ಅನುಕೂಲತೆಗೆ ಇಂಧನ ದಕ್ಷತೆ ಮತ್ತು ಸಂರಕ್ಷಣೆ
    • ಇಂಧನ ಭದ್ರತೆ ಮತ್ತು ಸುಸ್ಥಿರತೆಗಾಗಿ ಸಂರಕ್ಷಣೆ ಹಾಗೂ ದಕ್ಷತೆಗೆ ಉತ್ತೇಜಿಸುವ ಉಪಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಮುಂದಾಳತ್ವವಹಿಸುವುದು
    • ಹೊರಸೂಸುವಿಕೆ ಪ್ರಮಾಣ ತಗ್ಗಿಸಲು ಉದ್ದೇಶಿತ ರಾಷ್ಟ್ರೀಯ ಗುರಿ ಸಾಧನೆಯಲ್ಲಿ ಪಾಲುದಾರಿಕೆ
    • ನೀತಿ ಜಾರಿಗಾಗಿ ವಿವಿಧ ಭಾಗಿದಾರರಿಗೆ ಜವಾಬ್ದಾರಿ ಚೌಕಟ್ಟು ನಿಗದಿ
    • ಇಂಧನ ಸಂರಕ್ಷಣೆ, ದಕ್ಷತೆಗೆ ಸಂಬಂಧಿಸಿದ ಯೋಜನೆ, ಕಾರ್ಯಕ್ರಮಗಳು ಇನ್ನಿತರ ಚಟುವಟಿಕೆಗಳ ಮೇಲ್ವಿಚಾರಣೆಗೆ ಉನ್ನತಮಟ್ಟದ ಸಮಿತಿ ರಚನೆ
    • ಕೃಷಿ, ಕೈಗಾರಿಕೆ, ವಾಣಿಜ್ಯ ಮತ್ತು ಗೃಹ ಬಳಕೆ ವಿದ್ಯುತ್ ಸರಬರಾಜು ವಿಕೇಂದ್ರೀಕರಿಸುವ ಮೂಲಕ ಲಾಭದಾಯಕವಾಗಿಸುವ ಜತೆಗೆ ಇಂಧನ ಮೂಲಗಳ ಸಮರ್ಥ ಬಳಕೆ
    • ಅಗತ್ಯ ಜಾಗೃತಿ ಮೂಡಿಸಿ ಸಮುದಾಯದ ಸಹಭಾಗಿತ್ವ, ಒಳಗೊಳ್ಳುವಿಕೆ ಮುಖೇನ ಇಂಧನ ಸಂರಕ್ಷಣೆ ಹಾಗೂ ದಕ್ಷತೆ ನೀತಿ ಜಾರಿಗೆ ತರುವುದು.

    ಬೇಕಾದ ಮೊತ್ತ: ಐದು ವರ್ಷಗಳ ಅವಧಿಯ ಈ ನೀತಿಯಡಿ ನಿಗದಿತ ಗುರಿ ಸಾಧಿಸಲು 372 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಸಂಬಂಧಿಸಿದ ಇಲಾಖೆಗಳ ಬಜೆಟ್, ಸರ್ಕಾರದ ಅನುದಾನ/ ಧನಸಹಾಯ, ನವೀನ ವ್ಯಾಪಾರ ಮಾದರಿಯ ಅಭಿವೃದ್ಧಿ ಮತ್ತು ವಿನ್ಯಾಸದ ಮೂಲಕ ಖಾಸಗಿ ಸಹಭಾಗಿತ್ವ ಪಡೆದು ಈ ವೆಚ್ಚ ಸರಿದೂಗಿಸುವ ಮಾಗೋಪಾಯವನ್ನೂ ತಿಳಿಸಲಾಗಿದೆ.

    ಕ್ರಿಮಿನಲ್ ಕಾನೂನು ವಿಧೇಯಕ ಮಂಡನೆ: ಆರ್ಥಿಕ ಅಪರಾಧಗಳಿಗೆ ಒಳಗಾದ ಸಂತ್ರಸ್ಥರ (ಸರ್ಕಾರೇತರ) ಸ್ವತ್ತುಗಳನ್ನು ವಶಪಡಿಸಿಕೊಳ್ಳುವುದು ಸೇರಿದಂತೆ ವಿವಿಧ ಕ್ರಿಮಿನಲ್ ಕಾನೂನು ತಿದ್ದುಪಡಿಗೆ ಸರ್ಕಾರ ಹೆಜ್ಜೆ ಇಟ್ಟಿದೆ. ಕ್ರಿಮಿನಲ್ ಕಾನೂನು ತಿದ್ದುಪಡಿ ಅಧ್ಯಾದೇಶ, 1944 (ಕರ್ನಾಟಕ ತಿದ್ದುಪಡಿ) ವಿಧೇಯಕ-2022 ಅನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. ರಾಜ್ಯದಲ್ಲಿ ಪ್ರತಿ ವರ್ಷ ಬಹಳಷ್ಟು ದೊಡ್ಡ ಸಂಖ್ಯೆಯ ಆರ್ಥಿಕ ಅಪರಾಧಗಳ ಪ್ರಕರಣಗಳನ್ನು ನೋಂದಾಯಿಸಿಕೊಳ್ಳುತ್ತಿದೆ. ಪ್ರಸ್ತುತ ಲಭ್ಯವಿರುವ ಕಾನೂನುಗಳಲ್ಲಿ ಜಪ್ತಿ ಉಪಬಂಧಗಳು ಇಲ್ಲದೇ ಇರುವುದರಿಂದ ಅಸಹಾಯಕರಾಗಿದ್ದೇವೆ. ಈ ದೃಷ್ಟಿಯಿಂದ ಉದ್ದೇಶಿತ ತಿದ್ದುಪಡಿ ಸಹಕಾರಿಯಾಗಲಿದೆ ಎಂಬ ಉದ್ದೇಶ ವನ್ನಿಟ್ಟುಕೊಂಡು ಗೃಹ ಸಚಿವ ಆರಗ ಜ್ಞಾನೇಂದ್ರ ಈ ವಿಧೇಯಕ ಮಂಡಿಸಿದ್ದಾರೆ.

    ಅತಿಥಿ ಶಿಕ್ಷಕರ ನೇಮಕ ಕಾಯಂ ಸಾಧ್ಯವಿಲ್ಲ: ಅತಿಥಿ ಶಿಕ್ಷಕರನ್ನು ತಾತ್ಕಾಲಿಕ ಅವಧಿಗೆ ನೇಮಕ ಮಾಡಿಕೊಂಡಿದ್ದು, ಕಾಯಂಗೊಳಿಸಲು ನಿಯಮಾನುಸಾರ ಅವಕಾಶವಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಪರಿಷತ್​ನಲ್ಲಿ ಕೆ.ಟಿ.ಶ್ರೀಂಠೇಗೌಡ ಪ್ರಶ್ನೆಗೆ ಉತ್ತರಿಸಿ, ಕೋರ್ಟ್ ಆದೇಶದಂತೆ ಅತಿಥಿ ಶಿಕ್ಷಕರ ಮನವಿಗಳನ್ನು ಪರಿಶೀಲನೆ, ಪೂರ್ಣಕಾಲಿಕ ಶಿಕ್ಷಕರನ್ನಾಗಿ ಕಾಯಂಗೊಳಿಸಲು ನಿಯಮಾನುಸಾರ ಅವಕಾಶವಿರುವುದಿಲ್ಲ ಎಂದು ಹಿಂಬರಹ ನೀಡಿದೆ. ಹೀಗಾಗಿ ಕಾಯಂಗೆ ಅವಕಾಶವಿಲ್ಲ. ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ 826 ವಸತಿ ಶಾಲೆ, ಕಾಲೇಜುಗಳಲ್ಲಿ 2,213 ಅತಿಥಿ ಶಿಕ್ಷಕರು, ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

    ಪ್ರಾಣ ಬೆದರಿಕೆ ಇದೆ, ರಕ್ಷಣೆ ನೀಡಿ

    ವಿಧಾನಪರಿಷತ್​ನಲ್ಲಿ ಶುಕ್ರವಾರ ಕಲಾಪ ಆರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ‘ನನಗೆ ಪ್ರಾಣ ಬೆದರಿಕೆಯಿದ್ದು, ರಕ್ಷಣೆ ನೀಡಬೇಕು’ ಎಂದು ಸಭಾಪತಿಗಳಿಗೆ ಮನವಿ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹರಿಪ್ರಸಾದ್, ‘ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ತಮ್ಮ ಪಕ್ಷದವರಿಗೆ ಹರಿಪ್ರಸಾದ್ ಎದುರಿಸುವ ಸಾಮರ್ಥ್ಯ ಬೆಳಸಿಕೊಳ್ಳಿ’ ಎಂದು ಸೂಚನೆ ನೀಡಿದ್ದಾರೆ. ‘ಎದುರಿಸುವುದು’ ಎಂದರೆ, ಯಾವ ರೀತಿ, ಹಲವಾರು ರೀತಿಯಲ್ಲಿ ನನ್ನನ್ನು ಅಟ್ಯಾಕ್ ಮಾಡಬಹುದು. ನನಗೆ ಪ್ರಾಣ ಬೆದರಿಕೆ ಇದೆ. ರಕ್ಷಣೆ ನೀಡುವಂತೆ ಸಭಾಪತಿಗೆ ಮೌಖಿಕವಾಗಿ ಮನವಿ ಮಾಡಿದ್ದೇನೆ. ಮುಂದೆ ಪತ್ರದ ಮುಖೇನವೂ ಮನವಿ ಮಾಡುತ್ತೇನೆ’ ಎಂದು ತಿಳಿಸಿದರು.

    ಕೊತ್ವಾಲ್ ರಾಮಚಂದ್ರ ಶಿಷ್ಯರು ಕಾಂಗ್ರೆಸ್​ನಲ್ಲಿದ್ದಾರೆ ಎಂಬ ಹೇಳಿಕೆ ರಾಜಕೀಯ ದುರುದ್ದೇಶದ್ದು. 40 ವರ್ಷಗಳ ಹಿಂದೆ ತೀರಿಕೊಂಡ ಕೊತ್ವಾಲ್ ಮೂಲತಃ ಶಿವಮೊಗ್ಗ ಜಿಲ್ಲೆಯವರು. ಅವರ ಶಿಷ್ಯರು ಬಿಜೆಪಿಯಲ್ಲಿದ್ದಾರೆ. ಈ ಹಿಂದೆ ಗಡಿಪಾರಾಗಿದ್ದವರು ಈಗ ಕೇಂದ್ರ ಗೃಹ ಸಚಿವರಾಗಿದ್ದು, ಸಿ.ಟಿ.ರವಿಗೆ ಧೈರ್ಯವಿದ್ದರೆ ಆ ಬಗ್ಗೆ ಮಾತನಾಡಲಿ.

    | ಕೆ.ರಾಮಲಿಂಗಾರೆಡ್ಡಿ ಕೆಪಿಸಿಸಿ ಕಾರ್ಯಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts