ವಿಜಯವಾಣಿ ಸುದ್ದಿಜಾಲ ಬೆಂಗಳೂರು
"ವಿಜಯದಶಮಿ', "ತವರಿಗೆ ಬಾ ತಂಗಿ' ಸೇರಿ ಹಲವಾರು ಚಿತ್ರಗಳಿಗೆ ಕಥೆ, ಚಿತ್ರಕಥೆ ಬರೆದಿರುವ ಖ್ಯಾತಿ ಕಥೆಗಾರ ಅಜಯ್ ಕುಮಾರ್ ಅವರಿಗೆ ಸಲ್ಲುತ್ತದೆ. ಇದೀಗ ಅವರ ಪುತ್ರ ಅರ್ಜುನ್ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದ ಹೆಸರು "ಗನ್ಸ್ ಆ್ಯಂಡ್ ರೋಸಸ್'. ಹಲವು ವರ್ಷಗಳಿಂದ ಸಹ&ನಿರ್ದೇಶಕನಾಗಿ ಅನುಭವ ಪಡೆದಿರುವ ಶ್ರೀನಿವಾಸ್ ಕುಮಾರ್ ಆ್ಯಕ್ಷನ್-ಕಟ್ ಹೇಳುತ್ತಿರುವ ಮೊದಲ ಚಿತ್ರವಿದು.
ಇದನ್ನೂ ಓದಿ : ಹೊಸ ಲೈಲಾ, ಮಜ್ನು ಕಥೆ ; ಅವಳು ಲೈಲಾ ಅಲ್ಲ, ನಾನು ಮಜ್ನು ಅಲ್ಲ ಚಿತ್ರದ ರೊಮ್ಯಾಂಟಿಕ್ ಸಾಂಗ್ ಬಿಡುಗಡೆ
ಇತ್ತೀಚೆಗಷ್ಟೆ ಚಿತ್ರದ ಮುಹೂರ್ತ ನಡೆಯಿತು. ನಾಯಕ ಅರ್ಜುನ್ಗೆ ಯಶ್ವಿಕ ನಿಷ್ಕಲ ನಾಯಕಿಯಾಗಿದ್ದಾರೆ. "ಶೀರ್ಷಿಕೆಯೇ ಹೇಳುವಂತೆ ಅಂಡರ್ವರ್ಲ್ಡ್ ಮತ್ತು ಪ್ರೇಮಕಥೆ ಎರಡು ಟ್ರಾ$್ಯಕ್ಗಳಲ್ಲಿ ಚಿತ್ರದ ಕಥೆ ಸಾಗುತ್ತದೆ' ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಶರತ್ ತಿಳಿಸಿದರು. ಚಿತ್ರ ನಿಗದಿತ ಸಮಯಕ್ಕೆ ಮುಗಿಯಬೇಕು ಎಂಬ ಕಂಡೀಶನ್ ಮೇಲೆ ಸಿನಿಮಾ ನಿರ್ಮಿಸುತ್ತಿರುವುದಾಗಿ ಬಿಲ್ಡರ್ ನಟರಾಜ್ ತಿಳಿಸಿದರು.
ಚಿತ್ರಕ್ಕೆ ಶಶಿಕುಮಾರ್ ಸಂಗೀತ, ಜನಾರ್ಧನ್ ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿರಲಿದೆ. ಅರ್ಜುನ್, ಯಶ್ವಿಕ ಜತೆ ಜೀವನ್ ರಿಚಿ, ಹರೀಶ್ ಪ್ರಮುಖ ತಾರಾಗಣದಲ್ಲಿದ್ದಾರೆ.