Rashmika Mandanna : ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟು ಮೊದಲ ಚಿತ್ರದಲ್ಲೇ ಭರ್ಜರಿ ಯಶಸ್ಸು ಪಡೆದ ನಟಿ ರಶ್ಮಿಕಾ ಮಂದಣ್ಣ ಇದೀಗ ಪ್ಯಾನ್ ಇಂಡಿಯಾ ನಟಿಯಾಗಿ ಬೆಳೆದಿದ್ದಾರೆ. ಈಗಾಗಲೇ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಸೂಪರ್‌ಸ್ಟಾರ್‌ಗಳೊಂದಿಗೆ ನಟಿಸಿದ್ದಾರೆ.
ರಶ್ಮಿಕಾ ಈ ಹಿಂದೆ ತಮ್ಮ ಕ್ರಶ್ ಬಗ್ಗೆ ಮಾತನಾಡಿದ್ದ ವಿಡಿಯೋ ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಾಲ್ಯದಿಂದಲೂ ದಳಪತಿ ವಿಜಯ್ ಮೇಲೆ ಕ್ರಶ್ ಇತ್ತು ಎಂದು ರಶ್ಮಿಕಾ ಹೇಳಿದ್ದಾರೆ. 2020ರಲ್ಲಿ ಬಿಡುಗಡೆಯಾದ ತೆಲುಗು ಚಿತ್ರ 'ಭೀಷ್ಮ' ಪ್ರಚಾರದ ಸಂದರ್ಭದಲ್ಲಿ ರಶ್ಮಿಕಾ ಈ ಮಾತನ್ನು ಆಡಿದ್ದರು. ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ರಶ್ಮಿಕಾಗೆ ಅಸಂಖ್ಯಾತ ಅಭಿಮಾನಿಗಳ ಬಳಗವಿದ್ದು, ಆಗಾಗ ರಶ್ಮಿಕಾಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುವುದು ಸಹಜ.
ಭೀಷ್ಮ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ರಶ್ಮಿಕಾಗೆ ಸ್ನೇಹಿತೆ, ಪ್ರೇಮಿ ಮತ್ತು ಪತಿಯಾಗಿ ನಟರಲ್ಲಿ ಯಾರನ್ನು ಆಯ್ಕೆ ಮಾಡುತ್ತೀರಿ ಎಂದು ಪ್ರಶ್ನಿಸಲಾಗುತ್ತದೆ. ಅದಕ್ಕೆ ಉತ್ತರಿಸುವ ರಶ್ಮಿಕಾ, ಭೀಷ್ಮ ಚಿತ್ರದ ನಾಯಕ ನಿತಿನ್ ಅವರನ್ನು ತನ್ನ ಸ್ನೇಹಿತನನ್ನಾಗಿ ಆಯ್ಕೆ ಮಾಡುತ್ತಾರೆ. ಇದೇ ವೇಳೆ ದಳಪತಿ ವಿಜಯ್ ಅವರನ್ನು ತಮ್ಮ ಪ್ರೇಮಿಯನ್ನಾಗಿ ಆಯ್ಕೆ ಮಾಡುತ್ತಾರೆ.
ರಶ್ಮಿಕಾ ಅವರು ಬಾಲ್ಯದಿಂದಲೂ ವಿಜಯ್ ಅವರನ್ನು ಪ್ರೀತಿಸುತ್ತಿದ್ದರಂತೆ ಮತ್ತು ಇನ್ನೂ ಅವರನ್ನು ತಮ್ಮ ಕನಸಿನ ಸಂಗಾತಿ ಎಂದು ಪರಿಗಣಿಸುತ್ತೇನೆಂದು ರಶ್ಮಿಕಾ ಹೇಳಿದ್ದಾರೆ. ಅಂದಹಾಗೆ, 2023 ರಲ್ಲಿ ಬಿಡುಗಡೆಯಾದ 'ವಾರಿಸು' ಚಿತ್ರದಲ್ಲಿ ವಿಜಯ್ಗೆ ನಾಯಕಿಯಾಗಿ ರಶ್ಮಿಕಾ ನಟಿಸಿದರು. ಈ ವೇಳೆ ಮಾತನಾಡಿದ್ದ ರಶ್ಮಿಕಾ, ದೀರ್ಘಕಾಲದ ಕನಸು ನನಸಾಯಿತು ಎಂದು ಹೇಳಿಕೊಂಡಿದ್ದರು.
ಅಂದಹಾಗೆ, ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಅನೇಕ ದಿನಗಳಿಂದ ಹರಿದಾಡುತ್ತಿದೆ. ಆದರೆ, ಈ ವಿಷಯಕ್ಕೆ ಇಬ್ಬರೂ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಇಬ್ಬರು ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳು 2023ರ ಜನವರಿಯಲ್ಲಿ ಹುಟ್ಟಿಕೊಂಡವು. ಮಾಲ್ಡೀವ್ಸ್‌ನಲ್ಲಿ ಇಬ್ಬರೂ ರಜೆ ಕಳೆಯುತ್ತಿರುವ ಫೋಟೋಗಳು ಈ ಹಿಂದೆ ಲೀಕ್ ಆಗಿದ್ದವು. ಕಳೆದ ವರ್ಷ, ಶ್ರೀಲಂಕಾದಲ್ಲಿ ಇಬ್ಬರೂ ಒಟ್ಟಿಗೆ ಊಟ ಮಾಡುತ್ತಿರುವ ಚಿತ್ರಗಳು ಸಹ ವದಂತಿಗಳನ್ನು ಬಲಪಡಿಸಿದವು. (ಏಜೆನ್ಸೀಸ್)