ನನ್ನ ಬಳಿ ಹಣವಿಲ್ಲ... ಟಾಟಾ ಕಚೇರಿ ಎದುರು ಮಲಗಿಕೊಂಡು ಉದ್ಯೋಗಿ ಪ್ರತಿಭಟನೆ! TCS ಹೇಳಿದ್ದೇನು?

untitled-design-2025-08-04t230510384-6890f026e81c3
Published on

ಮಾಸಿಕ ಸಂಬಳ ನೀಡಿಲ್ಲ ಎಂದು ಆರೋಪಿಸಿ TCS ಉದ್ಯೋಗಿಯೊಬ್ಬರು ಪುಣೆಯ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(TCS) ಕಚೇರಿ ಎದುರು ಫುಟ್ಬಾತ್​ ಮೇಲೆ ಮಲಗಿಕೊಂಡು ಪ್ರತಿಭಟನೆ ಮಾಡುತ್ತಿದ್ದರು ಎನ್ನಲಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದ್ದವು. ಇದೀಗ TCS ಕಂಪನಿ ಆತನ ಸಂಪರ್ಕಕ್ಕೆ ಬಂದಿದ್ದು, ಇದರ ಬಗ್ಗೆ ಸ್ಪಷ್ಟನೆ ನೀಡಿದೆ ಎಂದು ಸೋಮವಾರ ವರದಿಯಾಗಿದೆ.

ಉದ್ಯೋಗಿ ಹೇಳಿದ್ದೇನು?

ಸೌರವ್​​ ಮೊರೆ ಎಂಬ ಉದ್ಯೋಗಿ, ಟಿಸಿಎಸ್ ತನ್ನ ಸಂಬಳವನ್ನು ತಿಂಗಳುಗಳಿಂದ ಪಾವತಿಸಿಲ್ಲ ಎಂದು ಹೇಳಿಕೊಂಡಿದ್ದಾರೆ. ಪಾದಚಾರಿ ಮಾರ್ಗದಲ್ಲಿ ತನ್ನ ಪಕ್ಕದಲ್ಲಿನ ಕೈಬರಹದ ಪತ್ರದಲ್ಲಿ, "ನನ್ನ ಬಳಿ ಹಣವಿಲ್ಲದ ಕಾರಣ ನಾನು ಟಿಸಿಎಸ್ ಹೊರಗೆ ಫುಟ್‌ಪಾತ್‌ನಲ್ಲಿ ಮಲಗಲು ಮತ್ತು ವಾಸ ಮಾಡಲು ಕಾರಣವಾಗಿದೆ. ಇದನ್ನು ನಾನು (ಎಚ್​ಆರ್​) ಮಾನವ ಸಂಪನ್ಮೂಲ ಅಧಿಕಾರಿಗೆ ತಿಳಿಸಿದ್ದೇನೆ." ಎಂದು ಉದ್ಯೋಗಿ ಬರೆದಿದ್ದಾರೆ.

TCS ಸ್ಪಷ್ಟನೆ ಏನು?

HT.com ಜತೆ TCS ಹಂಚಿಕೊಂಡ ಹೇಳಿಕೆಯಲ್ಲಿ, ''ಉದ್ಯೋಗಿ ಕೆಲಸಕ್ಕೆ ಅನಧಿಕೃತವಾಗಿ ಗೈರುಹಾಜರಾದ ಕಾರಣ ಅವರ ವೇತನವನ್ನು ಅಮಾನತುಗೊಳಿಸಲಾಗಿದೆ ಎಂದು TCS ತಿಳಿಸಿದೆ. ಅಂದಿನಿಂದ ಅವರಿಗೆ ವಸತಿ ಒದಗಿಸಲಾಗಿದೆ ಮತ್ತು ಅವರು ಇನ್ನು ಮುಂದೆ ಕಚೇರಿಯ ಹೊರಗೆ ಬಿಡಾರ(ಪ್ರತಿಭಟನೆ) ಹೂಡುವುದಿಲ್ಲ ಎಂದು ಐಟಿ ಕಂಪನಿ ತಿಳಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net