AR Rahman At The 'Marvel Anthem' Launch 
ಸಿನಿವಾಣಿ

ಮತ್ತೊಮ್ಮೆ ವಿವಾದದಲ್ಲಿ ರೆಹಮಾನ್ ; ಸರ್ಜನ್ಸ್ ಅಸೋಸಿಯೇಷನ್‌ಗೆ ಲೀಗಲ್ ನೋಟಿಸ್

ಕೆಲವು ದಿನಗಳ ಹಿಂದಷ್ಟೇ ಚೆನ್ನೈನಲ್ಲಿ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದರು. ಆ ವೇಳೆ ಕೆಲವು ಕಿಡಿಗೇಡಿಗಳು ಎಳೆದಾಡಿದರು, ಹೆಣ್ಣುಮಕ್ಕಳಿಗೆ ರಕ್ಷಣೆ ಇರಲಿಲ್ಲ, ಪಾಸ್ ಇದ್ದರೂ ಬೌನ್ಸರ್‌ಗಳು ಕಾರ್ಯಕ್ರಮ ನೋಡಲು ಬಿಡಲಿಲ್ಲ ಎಂದು ಹಲವು ದೂರುಗಳು ಬಂದಿದ್ದವು. ಅದಕ್ಕೆ ಖುದ್ದು ರೆಹಮಾನ್ ಕ್ಷಮೆಯಾಚಿಸಿದ್ದರು.

LAS VEGAS, NV - JANUARY 05: Composer A.R. Rahman performs during a keynote address by Intel Corp. CEO Brian Krzanich at CES 2016 at The Venetian Las Vegas on January 5, 2016 in Las Vegas, Nevada. CES, the world's largest annual consumer technology trade show, runs from January 6-9 and is expected to feature 3,600 exhibitors showing off their latest products and services to more than 150,000 attendees. (Photo by Ethan Miller/Getty Images)

ಅದರ ಬೆನ್ನಲ್ಲೇ, ಇದೀಗ ಅವರು ಮತ್ತೊಂದು ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. 2018ರಲ್ಲಿ ರೆಹಮಾನ್, ಸಂಗೀತ ಕಾರ್ಯಕ್ರಮ ನೀಡುವುದಾಗಿ 29 ಲಕ್ಷ ರೂ. ಹಣ ಪಡೆದಿದ್ದರು. ಆದರೆ, ಕಾರ್ಯಕ್ರಮ ನೀಡದೇ, ಹಣವನ್ನೂ ಮರಳಿಸದೇ ಸತಾಯಿಸುತ್ತಿದ್ದಾರೆಂದು ಸರ್ಜನ್ಸ್ ಅಸೋಸಿಯೇಷನ್ ಆ್ ಇಂಡಿಯಾ ಕಳೆದ ಸೆ. 27ರಂದು ದೂರು ನೀಡಿದೆ.

AR Rahman At The 'Marvel Anthem' Launch

ಆ ಆರೋಪಗಳನ್ನು ಅಲ್ಲಗಳೆದಿರುವ ರೆಹಮಾನ್ ಪರ ವಕೀಲರು, ಮೂರು ದಿನಗಳ ಒಳಗೆ ದೂರು ವಾಪಸ್ ಪಡೆಯಬೇಕು. ರೆಹಮಾನ್ ಅವರ ತೇಜೋವಧೆ ಮಾಡಿರುವ ಕಾರಣ ಬೇಷರತ್ ಕ್ಷಮೆಯಾಚಿಸಬೇಕು. ಹಾಗೇ 10 ಕೋಟಿ ರೂ. ಪರಿಹಾರ ನೀಡಬೇಕು ಎಂದಿದ್ದಾರೆ. ಇಲ್ಲದಿದ್ದರೆ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.
-ಏಜೆನ್ಸೀಸ್