ಟ್ರೋಲ್‌ಗಳಿಗೆ ತಿರುಗೇಟು; ಹೃತಿಕ್ ಡೇಟ್ ಮಾಡುತ್ತಿರುವ ಸಬಾ ಉತ್ತರ

saba
Published on

ಇತ್ತೀಚೆಗಷ್ಟೆ ಬಿಡುಗಡೆಯಾದ ‘ಹೂ ಇಸ್ ಯುವರ್ ಗೈನಾಕ್’ ಸರಣಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಸಬಾ ಆಜಾದ್ ಬಾಲಿವುಡ್ ನಟ ಹೃತಿಕ್ ರೋಷನ್ ಡೇಟ್ ಮಾಡುತ್ತಿರುವ ವಿಷಯ ಗೊತ್ತಿರುವಂಥದ್ದು. ಹೃತಿಕ್ ಮತ್ತು ಪತ್ನಿ ಸುಸೇನ್ ಖಾನ್ ವಿಚ್ಛೇದನದ ಬಳಿಕ ಕಳೆದ ವರ್ಷದಿಂದ ಸಬಾ ಜತೆ ಡೇಟಿಂಗ್‌ನಲ್ಲಿದ್ದು, ಒಟ್ಟಿಗೆ ಪ್ರವಾಸಕ್ಕೂ ಹೋಗಿದ್ದರು.

ಆದರೆ, ಇತ್ತೀಚೆಗೆ ಇವರಿಬ್ಬರು ಮದುವೆ ಆಗಲಿದ್ದಾರೆ, ಲಿವಿನ್‌ನಲ್ಲಿ ಇರಲಿದ್ದಾರೆ ಎಂದೆಲ್ಲ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಸಾಕಷ್ಟು ಟ್ರೋಲ್ ಕೂಡ ಆಗಿತ್ತು. ಈ ಬಗ್ಗೆ ಮೌನ ಮುರಿದ ಸಬಾ, ‘ನನ್ನ ಮತ್ತು ಹೃತಿಕ್ ಸಂಬಂಧದ ಬಗ್ಗೆ ಜಾಲತಾಣದಲ್ಲಿ ಸಾಕಷ್ಟು ನಕಾರಾತ್ಮಕ ಚರ್ಚೆಗಳಾಗಿವೆ. ಅವುಗಳನ್ನು ಕಂಡಾಗ ನನಗೆ ಬೇಸರವೂ ಆಗಿದೆ. ಯಾರಿಗೆ ನಾನು ಕೆಟ್ಟದ್ದನ್ನು ಮಾಡಿದ್ದೇನೆ? ನನ್ನ ಪಾಡಿಗೆ ಜೀವನ ನಡೆಸುತ್ತಿದ್ದೇನೆ.. ಎಂದೆಲ್ಲ ಬಹಳಷ್ಟು ಬಾರಿ ಯೋಚನೆ ಬಂದಿದೆ. ಎಷ್ಟೆಂದರೂ ನಾನೂ ಮನುಷ್ಯಳೇ, ಕಲ್ಲಲ್ಲ. ಆದರೆ, ಒಂದು ಹಂತದ ಬಳಿಕ ಜನರು ಏನು ಯೋಚಿಸುತ್ತಾರೆ ಎನ್ನುವುದಕ್ಕೆ ನಾನು ಜವಾಬ್ದಾರಳಲ್ಲ ಎನ್ನುವ ತೀರ್ಮಾನಕ್ಕೆ ಬಂದಿದ್ದೇನೆ. ಆ ಬಳಿಕ ನೆಮ್ಮದಿ ಇಂದ ಇದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net