ಸಿನಿವಾಣಿ

ಹನಿಮೂನ್​ನಲ್ಲಿ ಕಪ್ಪು ಬಿಕಿನಿ ತೊಟ್ಟ ಮೌನಿ ರಾಯ್! ಪಡ್ಡೆ ಹುಡುಗರು ಫಿದಾ...

ಕಳೆದ ತಿಂಗಳು ಸೂರಜ್ ನಂಬಿಯಾರ್ ಅವರೊಂದಿಗೆ ವಿವಾಹವಾದ KGF ಐಟಂ ಬೆಡಗಿ ಮೌನಿ ರಾಯ್, ಸದ್ಯ ಕಾಶ್ಮೀರದಲ್ಲಿ ಪತಿ ಸೂರಜ್ ನಂಬಿಯಾರ್ ಅವರೊಂದಿಗೆ ಹನಿಮೂನ್‌ನಲ್ಲಿದ್ದಾರೆ. ಕಾಶ್ಮೀರದಲ್ಲಿ ಗಟ್ಟಿಯಾಗಿ ಮತ್ತು ವೇಗವಾಗಿ ಹಿಮ ಬೀಳುತ್ತಿರುವ ಈ ಸಂದರ್ಭದಲ್ಲಿ, ಮೌನಿ ಅವರು ಕಪ್ಪು ಮೊನೊಕಿನಿ ಬಿಕಿನಿಯಲ್ಲಿ ಒಂದಿಷ್ಟು ಸೊಗಸಾದ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಅಭಿಮಾನಿಗಳಿಗೆಂದು ಶೇರ್ ಮಾಡಿಕೊಂಡಿದ್ದಾರೆ.
ಹಿಮದ ಬಹುಕಾಂತೀಯ ಹಿನ್ನೆಲೆಯಲ್ಲಿ, ಮೌನಿ ಕಪ್ಪು ಮೊನೊಕಿನಿಯಲ್ಲಿ ಪೋಸ್ ನೀಡಿದ್ದು, ನಟಿಯ ಈ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ ಎಂದರೆ ತಪ್ಪಾಗುವುದಿಲ್ಲ. ಇದಿಷ್ಟೇ ಅಲ್ಲದೇ, ಬೇರೆ ಬೇರೆಯ ಸುಂದರವಾದ ಉಡುಪುಗಳು ತೊಟ್ಟು ಮೌನಿ ತಮ್ಮ ಇನ್​ಸ್ಟಾಗ್ರಾಂ ಅನ್ನು ಫೋಟೋಗಳು ಮತ್ತು ವಿಡಿಯೋಗಳಿಂದ ತುಂಬಿಸಿಕೊಂಡಿದ್ದಾರೆ. ಮೌನಿಯ ಈ ಫೋಟೋಗಳಿಗೆ ಮಿಲಿಯನ್ ಗಟ್ಟಲೇ ಲೈಕ್ಸ್ ಹಾಗೂ ಸಾವಿರಾರು ಕಾಮೆಂಟ್​ಗಳು ಬಂದಿವೆ.