ಇತ್ತೀಚೆಗೆ, ನಟಿ ಶ್ರೀಲೀಲಾ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಮುಂದಿನ #SSMB28 ನೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ, ಇದೀಗ ನಟಿ ಶ್ರೀಲೀಲಾ ಅವರ ಸಂಭಾವನೆ ಕೇಳಿ ಈ ಸಿನಿಮಾದ ಮೇಕರ್ಸ್ಗೆ ಶಾಕ್ ಆಗಿದೆಯಂತೆ. ಹೌದು, ಚಿತ್ರದಲ್ಲಿ ಎರಡನೇ ನಾಯಕಿಯಾಗಿ ನಟಿಸಲು ನಟಿ ಶ್ರೀಲೀಲಾ ಬರೋಬ್ಬರಿ ಒಂದು ಕೋಟಿ ಸಂಭಾವನೆಯನ್ನು ಕೇಳಿದ್ದಾರಂತೆ. ಇನ್ನು, ಶ್ರೀಲೀಲಾಗೆ ಇಷ್ಟೊಂದು ಸಂಭಾವನೆ ನೀಡಲು ಚಿತ್ರ ತಂಡ ಸಿದ್ಧ ಇಲ್ಲವಂತೆ. ಹಾಗಾಗಿ, ಶ್ರೀಲೀಲಾ ಅವರನ್ನು ಸಿನಿಮಾದಿಂದ ಔಟ್ ಮಾಡಿದೆಯಂತೆ ಚಿತ್ರತಂಡ.