ಇತ್ತೀಚೆಗೆ ಇನ್ಸ್ಟಾಗ್ರಾಂ, ಫೇಸ್ಬುಕ್, ಟ್ವಿಟರ್ನಲ್ಲಿ 'ಕಚ್ಚಾ ಬಾದಾಮ್' ಹಾಡು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಟ್ರೆಂಡಿಂಗ್ನಲ್ಲಿರುವ ಈ ಹಾಡಿಗೆ ಬಹಳಷ್ಟು ಟಿವಿ ಸೆಲೆಬ್ರಿಟಿಗಳು, ಸಿನಿಮಾ ಸೆಲೆಬ್ರಿಟಿಗಳು, ಕ್ರಿಕೆಟಿಗರು ಡ್ಯಾನ್ಸ್ ಮಾಡಿ ರೀಲ್ಸ್ ವಿಡಿಯೋಗಳನ್ನು ಅಪ್ಲೋಡ್ ಮಾಡಿ ದಿಲ್ ಖುಷ್ ಆಗುತ್ತಿದ್ದಾರೆ. ಇದೀಗ, ಟಾಲಿವುಡ್ನ ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್ ಮಗಳು ಅರ್ಹಾ ಕೂಡಾ ಈ ಹಾಡಿಗೆ ಕುಣಿದು ಕುಪ್ಪಳಿಸಿದ್ದು, ಅದನ್ನು ಕಂಡ ನೆಟ್ಟಿಗರು ಅರ್ಹಾಗೆ ಫಿದಾ ಆಗಿದ್ದಾರೆ.