ಬಾಲಿವುಡ್ ನಟ ಮಿಲಿಂದ್ ಸೋಮನ್ ಫಿಟ್ನೆಸ್ಗೆ ಹೆಸರಾದವರು. ಇದೀಗ ಇದೇ ನಟನ ತಾಯಿ ಸಹ ಫಿಟ್ನೆಸ್ ಬಗ್ಗೆ ಯುವಕರಿಗೆ ಪಾಠ ಮಾಡಿದ್ದಾರೆ. ಅದ್ಯಾವ ರೀತಿ ಅಂದರೆ, ತಮ್ಮ 81ನೇ ಜನ್ಮದಿನದ ಪ್ರಯುಕ್ತ ಪುಷ್ ಅಪ್ಸ್ ಹೊಡೆದು, ಯುವಕರೇ ನಾಚುವಂತೆ ಮಾಡಿದ್ದಾರೆ!
ಉಷಾ ಸೋಮನ್ಗೆ 81ರ ಇಳಿವಯಸ್ಸು. ಈ ಇಳಿವಯಸಲ್ಲೂ ಅವರನ್ನು ಸೋಲಿಸುವುದು ಕಷ್ಟ. ಓಟಕ್ಕೂ ಸೈ, ಒಂಟಿಗಾಲಿನ ಓಟಕ್ಕೂ ಜೈ.. ಪುಷ್ ಅಪ್ಸ್ ಸಹ ಇವರಿಗೆ ಸಲೀಸು. ಇನ್ನು ಮಿಲಿಂದ್ ಸೋಮನ್ ಅವರ ಸೋಷಿಯಲ್ ಮೀಡಿಯಾ ಖಾತೆಗಳು ತೆರೆದರೆ ಅಲ್ಲಿ ಅಮ್ಮನ ವಿಡಿಯೋಗಳೇ ಹೆಚ್ಚು ಕಾಣಿಸುತ್ತವೆ. ನಿತ್ಯ ಅಮ್ಮ ಮಾಡುವ ವರ್ಕೌಟ್ಗಳನ್ನು ಶೇರ್ ಮಾಡಿಕೊಂಡು, ಇತರರಿಗೂ ಸ್ಫೂರ್ತಿ ತುಂಬುತ್ತಿದ್ದಾರೆ ಮಿಲಿಂದ್.
‘ಜುಲೈ 3ಕ್ಕೆ ಬರೋಬ್ಬರಿ 81 ವರ್ಷ ಆಯ್ತು. ಲಾಕ್ಡೌನ್ನಲ್ಲಿ ಜನ್ಮದಿನ ಆಚರಿಸಿಕೊಳ್ಳಲಾಗುತ್ತಿದೆ. 15 ಪುಷ್ಅಪ್ಸ್ ಹೊಡೆಯುವುದೇ ಪಾರ್ಟಿ. ಬಾದಾಮ್ ಕೇಕ್ ಸಿದ್ಧವಾಗಿದೆ. ಹ್ಯಾಪಿ ಬರ್ತಡೇ ಆಯಿ. ಸದಾ ನಗುತ್ತೀರಿ‘ ಎಂದು ಮಿಲಿಂದ್ ಟ್ವಿಟ್ ಮಾಡಿ ಅಮ್ಮನಿಗೆ ಶುಭಾಶಯ ತಿಳಿಸಿದ್ದಾರೆ.
ಇದನ್ನೂ ಓದಿ: ‘ಅಕಟಕಟ’ಕ್ಕೆ ಬೈಕ್ ರೇಸರ್ ಶೋಗನ್ ಗ್ರೀನ್ ಸಿಗ್ನಲ್
ಸದ್ಯ ಈ ವಿಡಿಯೋಗಳನ್ನು ವೀಕ್ಷಣೆ ಮಾಡುವ ನೆಟ್ಟಿಗರು, ಅಮ್ಮನ ಫಿಟ್ನೆಸ್ಗೆ ಫಿದಾ ಆಗಿದ್ದಾರೆ. ಬಾಲಿವುಡ್ನ ಶಿಲ್ಪಾ ಶೆಟ್ಟಿ, ಅರ್ಜುನ್ ರಾಂಪಾಲ್ ಸೇರಿ ಸಾಕಷ್ಟು ಕಲಾವಿದರು ಸಲಾಂ ಎಂದಿದ್ದಾರೆ. (ಏಜೆನ್ಸಿಸ್)