ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕೋಮಲ್ ಕುಮಾರ್ ಅಭಿನಯದ ಚಿತ್ರ "ನಮೋ ಭೂತಾತ್ಮ'. ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ಆ್ಯಕ್ಷನ್ ಕಟ್ ಹೇಳಿದ್ದ ಮೊದಲ ಚಿತ್ರವಿದು. 2014ರಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಇದೀಗ ಒಂಬತ್ತು ವರ್ಷಗಳ ನಂತರ ಕೋಮಲ್ ಮತ್ತು ಮುರಳಿ ಜೋಡಿ ಚಿತ್ರದ ಸೀಕ್ವಲ್ ಜತೆ ಮತ್ತೆ ವಾಪಸ್ಸಾಗಿದ್ದಾರೆ.
ಮೊದಲ ಚಿತ್ರದಲ್ಲಿ ಹಾರರ್ ಅಂಶಗಳು ಹೆಚ್ಚಿದ್ದವು. ಹೀಗಾಗಿಯೇ "ನಮೋ ಭೂತಾತ್ಮ 2' ಚಿತ್ರ ಹಾರರ್ಗಿಂತಲೂ ಹಾಸ್ಯಪ್ರಧಾನವಾಗಿರಲಿದೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಜಾಲತಾಣದಲ್ಲಿ ವೈರಲ್ ಆಗಿದೆ. ಕೋಮಲ್ ಕುಮಾರ್ ಜತೆ ಲೇಖಚಂದ್ರ, ವರುಣ್ ರವಿ, ಮೋನಿಕಾ ಗೌಡ, ಗೋವಿಂದೇಗೌಡ, ಮಹಾಂತೇಶ್ ಹಿರೇಮಠ್ ಪ್ರಮುಖ ತಾರಾಗಣದಲ್ಲಿದ್ದಾರೆ.
ಚಿತ್ರಕ್ಕೆ ಅರುಣ್ ಆ್ಯಂಡ್ರ್ಯೂ ಸಂಗೀತ ನಿರ್ದೇಶನ, ಹಾಲೇಶ್ ಛಾಯಾಗ್ರಹಣ, ಅಮಿತ್ ಸಂಕಲನ, ಸತೀಶ್ ಕಲಾನಿರ್ದೇಶನವಿರಲಿದೆ. ನೃತ್ಯ ನಿರ್ದೇಶಕ ಸಂತೋಷ್ ಶೇಖರ್ "ನಮೋ ಭೂತಾತ್ಮ 2' ನಿರ್ಮಿಸಿದ್ದು, ಸಿನಿಮಾ ಇದೇ ಆ. 4ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.