ಚೆನ್ನೈ: ಕಾಲಿವುಡ್ ನಟ ಪಾರ್ಥಿಬನ್ ನಿರ್ದೇಶನದ ಇರವಿನ್ ನಿಹಾಲ್ ಸಿನಿಮಾದಲ್ಲಿ ಬೆತ್ತಲೆ ದೃಶ್ಯದಲ್ಲಿ ನಟಿಸುವ ಮೂಲಕ ಭಾರೀ ಸುದ್ದಿಯಾಗಿದ್ದ ನಟಿ ರೇಖಾ ನಾಯರ್ ಇದೀಗ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದ್ದಾರೆ. ಅಂದಹಾಗೆ ರೇಖಾ ಅವರಿಗೆ ವಿವಾದಗಳು ಹೊಸದೇನಲ್ಲ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುವಾಗ ಎಡವಟ್ಟು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಮಹಿಳೆಯರು ತುಂಬಾ ಸೆಕ್ಸಿಯಾಗಿರುವಂತಹ ಉಡುಗೆಗಳನ್ನು ಧರಿಸುತ್ತಾರೆ. ನಿಮ್ಮ ಬಗ್ಗೆ ಏನು? ಎಂದು ಸಂದರ್ಶನದಲ್ಲಿ ಆ್ಯಂಕರ್ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ರೇಖಾ, ತುಂಬಾ ಹಾಟ್ ಆಗಿರುವಂತಹ ಉಡುಪು ಧರಿಸಿದ ಸಂದರ್ಭದಲ್ಲಿ ಯಾರಾದರೂ ಹುಡುಗರು ಅವರ ಸೊಂಟದ ಮೇಲೆ ಕೈ ಇಟ್ಟರೆ, ದೂರು ನೀಡುವ ಬದಲು ಅದನ್ನು ಅನುಭವಿಸಿ, ಎಂಜಾಯ್ ಮಾಡಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದೀಗ ಅವರ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.
ಅಂದಹಾಗೆ ರೇಖಾ ಅವರು ಕೆಲ ಸಿನಿಮಾ ಮತ್ತು ಟೆಲಿವಿಷನ್ ಶೋಗಳಲ್ಲಿ ನಟಿಸಿದ್ದಾರೆ. ವಿವಾದಗಳಿಂದಲೇ ಆಗಾಗ ರೇಖಾ ಸದ್ದು ಮಾಡುತ್ತಿರುತ್ತಾರೆ. ಇರವಿನ್ ನಿಹಾಲ್ ಸಿನಿಮಾದಲ್ಲಿ ಪಾರ್ಥಿಬನ್ ತಾಯಿಯ ಪಾತ್ರ ಮಾಡಿರುವ ನಟಿ ರೇಖಾ ನಾಯರ್, ತಮ್ಮ ಎದೆಯ ಭಾಗವನ್ನು ತೋರಿಸುವ ದೃಶ್ಯವೊಂದರಲ್ಲಿ ನಟಿಸಿದ್ದಾರೆ. ಇದೇ ದೃಶ್ಯದಿಂದಾಗಿ ನಟ-ವಿಮರ್ಶಕ ಬೈಲ್ವಾನ್ ರಂಗನಾಥನ್ ಅವರು ರೇಖಾ ನಾಯರ್ ಅವರನ್ನು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಕಟುವಾಗಿ ಟೀಕಿಸಿದ್ದರು. ಇದರ ಬೆನ್ನಲ್ಲೇ ರಂಗನಾಥನ್ ಅವರು ಮುಂಜಾನೆ ಜಾಗಿಂಗ್ ಮಾಡುವಾಗ ಸಾರ್ವಜನಿಕ ಸ್ಥಳದಲ್ಲಿ ಎದುರಾದ ಅವರನ್ನು ರೇಖಾ ನಾಯರ್ ತರಾಟೆಗೆ ತೆಗೆದುಕೊಂಡಿದ್ದರು. ಇದು ಭಾರೀ ಸುದ್ದಿಯಾಗಿತ್ತು. (ಏಜೆನ್ಸೀಸ್)