ಸಿನಿವಾಣಿ

ಪುನೀತ್​ ಫ್ಯಾನ್ಸ್​ಗೆ ‘ಜೇಮ್ಸ್​’ ಕ್ರೇಜ್ ಹೇಗಿದೆ ಗೊತ್ತಾ? ಫೋಟೋ ವೈರಲ್

ನಟ ಪುನೀತ್ ರಾಜ್​ಕುಮಾರ್ ಅವರನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅವರು ಹೀರೋ ಆಗಿ ನಟಿಸಿದ ಕೊನೆಯ ಚಿತ್ರ ‘ಜೇಮ್ಸ್’ ಬಗ್ಗೆ ಎಲ್ಲರಿಗೂ ಸಖತ್ ನಿರೀಕ್ಷೆ ಇದೆ. ಮಾ.17 ರಂದು ಪುನೀತ್ ಜನ್ಮದಿನ. ಆ ದಿನದಂದೇ ಅವರ ಕೊನೆಯ ಚಿತ್ರವಾದ ‘ಜೇಮ್ಸ್’ ರಿಲೀಸ್ ಆಗಲಿದೆ. ಈ ಸಿನಿಮಾವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಪುನೀತ್ ರಾಜ್​ಕುಮಾರ್ ಅಭಿಮಾನಿಗಳು ರಾಜ್ಯಾದ್ಯಂತ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದೀಗ, ಅಭಿಮಾನಿಗಳಲ್ಲಿ ಯಾವ ಪರಿಯ ಕ್ರೇಜ್ ಈ ಸಿನಿಮಾ ಸೃಷ್ಟಿ ಮಾಡಿದೆ ಎಂಬುದಕ್ಕೆ ಸಾಕ್ಷಿಯಾಗಿ ರಾಜ್ಯದಾದ್ಯಂತ ಹಲವು ಘಟನೆಗಳು ನಡೆಯುತ್ತಿವೆ. ಆದರೆ, ಸದ್ಯ ‘ಜೇಮ್ಸ್’ ಶೀರ್ಷಿಕೆಯ ಟ್ಯಾಟೂ ಫೋಟೋಗಳು ಎಲ್ಲರ ಗಮನ ಸೆಳೆಯುತ್ತಿದ್ದು, ಅವು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ ತೊಡಗಿವೆ.
ಕೆಲವು ಅಭಿಮಾನಿಗಳು ಮೈಮೇಲೆ ‘ಜೇಮ್ಸ್’ ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ಆ ಮೂಲಕ ಅಪ್ಪು ಮೇಲೆ ತಮಗೆ ಇರುವ ಅಭಿಮಾನ ಎಂಥದ್ದು ಎಂಬುದನ್ನು ಮತ್ತೆ ಮತ್ತೆ ಸಾಬೀತು ಪಡಿಸುತ್ತಿದ್ದಾರೆ. ಹೀಗೆ, ಅಭಿಮಾನಿಯೊಬ್ಬರು ಅವರ ಕುತ್ತಿಗೆಯ ಮೇಲೆ ‘ಜೇಮ್ಸ್’ ಸಿನಿಮಾದ ಟೈಟಲ್​ಅನ್ನು ಇಂಗ್ಲಿಷ್​ ಅಕ್ಷರದಲ್ಲಿ ಹಾಕಿಸಿಕೊಂಡಿದ್ದು, ಈ ಅಭಿಮಾನಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ. ಪವರ್ ಸ್ಟಾರ್ ನಟ ಪುನೀತ್​ ರಾಜ್​ಕುಮಾರ್​ ಅವರನ್ನು ಬೆಳ್ಳಿ ಪರದೆಯ ಮೇಲೆ ಹೀರೋ ಆಗಿ ಕಾಣಲು ‘ಜೇಮ್ಸ್’ ಮೂಲಕ ಕೊನೆಯ ಬಾರಿಗೆ ಅಭಿಮಾನಿಗಳಿಗೆ ಅವಕಾಶ ಸಿಗುತ್ತಿದೆ. ಹಾಗಾಗಿ ಅಭಿಮಾನಿಗಳ ಪಾಲಿಗೆ ‘ಜೇಮ್ಸ್’ ಬರೀ ಸಿನಿಮಾ ಆಗಿ ಉಳಿಯದೆ, ಬದಲಿಗೆ ಒಂದು ಎಮೋಷನ್ ಆಗಿದೆ ಎಂದು ಹೇಳಬಹುದು.