ಸಿನಿವಾಣಿ

ಮೆಡಿಕಲ್​ ಮಾಫಿಯಾ ವಿರುದ್ಧ ಪ್ರಿಯಾಮಣಿ ಫೈಟ್​!

chetannadiger

ಬೆಂಗಳೂರು: ಪ್ರಿಯಾಮಣಿ ಅಭಿನಯದ ಕನ್ನಡ ಚಿತ್ರವೊಂದು ಬಿಡುಗಡೆಯಾಗಿ ಮೂರು ವರ್ಷಗಳೇ ಆಗಿವೆ. ಅವರ ಕೊನೆಯ ಕನ್ನಡ ಚಿತ್ರ ಬಿಡುಗಡೆಯಾಗಿದ್ದು 2019ರಲ್ಲಿ. ಈಗ ಅವರು ಹೊಸ ಚಿತ್ರದೊಂದಿಗೆ ವಾಪಸ್ಸಾಗುತ್ತಿದ್ದಾರೆ. ಅಷ್ಟೇ ಅಲ್ಲ, ಈ ಬಾರಿ ಅವರು ಮೆಡಿಕಲ್​ ಮಾಫಿಯಾ ವಿರುದ್ಧ ಸಮರ ಸಾರಿದ್ದಾರೆ.

ಪ್ರಿಯಾಮಣಿ ಅಭಿನಯಿಸಿರುವ ಹೊಸ ಚಿತ್ರದ ಹೆಸರು 'ಡಾ. 56'. ಮೂರು ವರ್ಷಗಳ ಹಿಂದೆಯೇ ಪ್ರಾರಂಭವಾದ ಈ ಚಿತ್ರ ಈಗ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಇತ್ತೀಚೆಗೆ ಟ್ರೈಲರ್​ ಸಹ ಬಿಡುಗಡೆಯಾಗಿದೆ. ಕನ್ನಡವಲ್ಲದೆ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಈ ಚಿತ್ರ ಬಿಡುಗಡೆಯಾಗುತ್ತಿದೆ.

'ಡಾ. 56' ಬಗ್ಗೆ ಮಾತನಾಡುವ ಪ್ರಿಯಾಮಣಿ, 'ನಾನು ಮೊದಲು ಕಥೆ ಕೇಳಿದಾಗ, ನೀವು ಹೇಳಿದ ಹಾಗೆ ಸಿನಿಮಾ ಮಾಡಿದರೆ ಹಿಟ್ ಆಗಲಿದೆ ಎಂದು ಹೇಳಿದ್ದೆ‌. ಚಿತ್ರದ ಮೂಲಕ ಒಂದೊಳ್ಳೆy ಸಂದೇಶ ಹೇಳಲಾಗಿದೆ. ಕಥೆಯೇ ಪವರ್ ಹೌಸ್ ಹೊರತು ನಾನಲ್ಲ' ಎನ್ನುತ್ತಾರೆ.

ಈ ಚಿತ್ರವನ್ನು ನಿರ್ಮಿಸುವುದರ ಜತೆಗೆ ನಾತಕನಾಗಿಯೂ ಕಾಣಿಸಿಕೊಂಡಿದ್ದಾರೆ ಪ್ರವೀಣ್​ ರೆಡ್ಡಿ. ಅವರು ಈ ಕಥೆಯನ್ನು ಪ್ರಿಯಾಮಣಿಗೆ ಹೇಳಿದಾಗ, ಅವರು ಮೊದಲು ಏನೂ ಹೇಳಲಿಲ್ಲವಂತೆ. 'ಪ್ರಿಯಾಮಣಿ ಕಥೆ ಕೇಳಿ ಸುಮ್ಮನೆ ಇದ್ದರು. ಅವರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂದನಿಸಿತ್ತು. ನಂತರ ಚಿತ್ರದಲ್ಲಿ ನಟಿಸಲು ಅವರು ಒಪ್ಪಿದರು. ಅವರಿಲ್ಲದಿದ್ದರೆ, ಚಿತ್ರವನ್ನು ಎಲ್ಲಾ ಕಡೆ ತಲುಪಿಸಲು ಆಗುತ್ತಿರಲಿಲ್ಲ' ಎನ್ನುತ್ತಾರೆ.

ಈ ಚಿತ್ರವನ್ನು ರಾಜೇಶ್ ಆನಂದ್ ಲೀಲಾ ನಿರ್ದೇಶನ ಮಾಡಿದ್ದಾರೆ. ರಾಕೇಶ್ ಸಿ ತಿಲಕ್ ಛಾಯಾಗ್ರಹಣ, ವಿಶ್ವ ಅವರ ಸಂಕಲನ ಈ ಚಿತ್ರಕ್ಕಿದೆ.