ಸಿನಿವಾಣಿ

ದಂತಕಥೆಯ ಮೊದಲ ನೋಟ ; ವಚನ್​ ನಿರ್ದೇಶನದ ಚಿತ್ರಕ್ಕೆ ರವಿಚಂದ್ರನ್​ ಸಾಥ್​

ಹರ್ಷವರ್ಧನ್ ಬ್ಯಾಡನೂರು

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಇತಿಹಾಸದ ಅಪರೂಪದ ಟನೆಗಳನ್ನು ಆಧಾರವಾಗಿಟ್ಟುಕೊಂಡಿರುವ, ಜಾನಪದ ಸಾಹಿತ್ಯದ ಪ್ರಕಾರವಾದ ಸಿನಿಮಾ "ದಂತಕಥೆ'. ಈ ಹಿಂದೆ "ಯೂ&ರ್ಟನ್​' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ವಚನ್​ ಚೊಚ್ಚಲ ಬಾರಿಗೆ ಆ್ಯಕ್ಷನ್​-ಕಟ್​ ಹೇಳುತ್ತಿರುವ ಚಿತ್ರವಿದು. ಇದೊಂದು ಸಸ್ಪೆನ್ಸ್​ ಥ್ರಿಲ್ಲರ್​ ಜಾನರ್​ನ ಸಿನಿಮಾ ಆಗಿದ್ದು, ಒಂದು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ನಡೆಯುವ ಇನ್ವೆಸ್ಟಿಗೇಷನ್​ ಸುತ್ತ ಕಥೆ ಸಾಗುತ್ತದೆ.

ಇತ್ತೀಚೆಗಷ್ಟೆ ರವಿಚಂದ್ರನ್​ ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ರು ಮುಖರ್ಜಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರಿಗೆ "ಪದವಿಪೂರ್ವ' ಮತ್ತು "ಮಾನ್ಸೂನ್​ ರಾಗ' ಚಿತ್ರಗಳಲ್ಲಿ ನಟಿಸಿರುವ ಯಶಾ ಶಿವಕುಮಾರ್​ ನಾಯಕಿಯಾಗಿದ್ದಾರೆ. ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ಕಿಶೋರ್​ ಬಣ್ಣ ಹಚ್ಚಲಿದ್ದಾರೆ.

ಉಳಿದಂತೆ ರವಿಶಂಕರ್​, ವಿನಯ್​ ಕೃಷ್ಣಮೂರ್ತಿ, ಪ್ರಶಾಂತ್​ ಸಿದ್ದಿ, ವಿನೋದ್​ ಗೊಬ್ಬರಗಾಲ, ಶಿವ ಮಂಜು, ಗಿರೀಶ್​ ಶಿವಣ್ಣ, ನಾಗಮಂಗಲ ಜಯರಾಮ್​ ಹಾಗೂ ಕುರಿ ರಂಗ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ನವೀನ್​ ಕುಮಾರ್​ ಛಾಯಾಗ್ರಹಣ, ಅರ್ಜುನ್​ ಜನ್ಯ ಸಂಗೀತ, ಮಾಸ್ತಿ ಸಂಭಾಷಣೆ, ಹರೀಶ್​ ಕೊಮ್ಮೆ ಸಂಕಲನವಿರಲಿದೆ.