ಸಿನಿವಾಣಿ

ಸುದೀಪ್​ ಆಯ್ತು ಈಗ ದರ್ಶನ್​ ಸರದಿ: ದಚ್ಚು ವಾಸವಿರೋ ಅಪಾರ್ಟ್​ಮೆಂಟ್​ನಲ್ಲಿ ಕರೊನಾ ಪತ್ತೆ

ಬೆಂಗಳೂರು: ಸ್ಯಾಂಡಲ್​ವುಡ್​ ಸ್ಟಾರ್ ನಟರಿಗೂ ಇದೀಗ ಕರೊನಾ ಭಯ ಆವರಿಸಿದೆ. ನಿನ್ನೆಯಷ್ಟೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪಕ್ಕದ ಮನೆಯಲ್ಲೇ ಸೋಂಕು ಪತ್ತೆಯಾಗಿತ್ತು. ಇದೀಗ ದರ್ಶನ್ ವಾಸವಿರುವ ಅಪಾರ್ಟ್​ಮೆಂಟ್​ನಲ್ಲಿ ಕರೊನಾ ಪಾಸಿಟಿವ್​ ವರದಿಯಾಗಿದೆ.

ಹೊಸಕರೆಹಳ್ಳಿಯಲ್ಲಿರುವ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್​ನಲ್ಲಿ ಸಾಕಷ್ಟು ವರ್ಷದಿಂದ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ವಾಸವಿದ್ದಾರೆ. ಇದೀಗ ಕರೊನಾ ಸೋಂಕು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಸುಶಾಂತ್ ವ್ಯಕ್ತಿತ್ವ ಎಂಥದ್ದು ಎನ್ನುವುದಕ್ಕೆ ಲಾರೆನ್ ಗಾಟ್ಲೀಬ್ ನಡುವಿನ ವಾಟ್ಸ್​ಆ್ಯಪ್ ಚಾಟ್​ ಸಾಕ್ಷಿ

ಇದೇ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್​ನಲ್ಲಿ ನಟ ರವಿಶಂಕರ್ ಗೌಡ ಕೂಡ ವಾಸವಿದ್ದಾರೆ. ನಟಿ ಪೂಜಾಗಾಂದಿ ಕೂಡ ಅಪಾರ್ಟ್‌ಮೆಂಟ್​ನಲ್ಲಿ ಮನೆ ಹೊಂದಿದ್ದಾರೆ.

ನಿನ್ನೆಯಷ್ಟೇ ಜೆಪಿ ನಗರದ ಸುದೀಪ್ ಮನೆ ಪಕ್ಕದಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿತ್ತು.‌ ಇದುವರೆಗೂ ದಕ್ಷಿಣ ವಲಯದಲ್ಲಿ 209 ಕೇಸ್​ಗಳು ಕಾಣಿಸಿಕೊಂಡಿದ್ದು, ಅದರಲ್ಲಿ ಸುದೀಪ್ ಮನೆ, ರವಿಶಂಕರ್ ಗೌಡ, ವಿಜಯಲಕ್ಷ್ಮೀ ದರ್ಶನ್ ಮನೆ ಕೂಡ ಇಲ್ಲೆ ಇವೆ. (ದಿಗ್ವಿಜಯ ನ್ಯೂಸ್​) ಇದನ್ನೂ ಓದಿ: ಫೇಸ್​ಬುಕ್​ನಲ್ಲಿ ಅಪರಿಚಿತ ಮಹಿಳೆ ಜತೆ ಸ್ನೇಹ ಬೆಳೆಸಿದವನ ಧರ್ಮಸಂಕಟ ಹೇಳ ತೀರದು…!