ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನೊಂದಿಗೆ ಆರಂಭವಾದ ಬಾಲಿವುಡ್ ಡ್ರಗ್ಸ್ ಪ್ರಕರಣ ಹಲವಾರು ತಿರುವುಗಳನ್ನು ಪಡೆದುಕೊಂಡಿದೆ. ನಟಿ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್ರಂತಹ ಪ್ರಸಿದ್ಧರನ್ನೂ ಸಹ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇದೀಗ ಮತ್ತೋರ್ವ ಪ್ರಸಿದ್ಧ ಹಾಸ್ಯ ನಟಿ ಮತ್ತು ಆಕೆಯ ಪತಿಯನ್ನು ಎನ್ಸಿಬಿ ವಿಚಾರಣೆಗೆ ವಳಪಡಿಸಿದೆ.
ಶನಿವಾರ ಬೆಳಗ್ಗೆ ಭಾರ್ತಿ ಅವರ ಮನೆಯ ಮೇಲೆ ಎನ್ಸಿಬಿ ದಾಳಿ ನಡೆಸಿದೆ. ಡ್ರಗ್ಸ್ ಪೆಡ್ಲರ್ ಒಬ್ಬರ ಬಾಯಿಯಲ್ಲಿ ಭಾರ್ತಿ ಅವರ ಪತಿ ಹರ್ಷ್ ಅವರ ಹೆಸರು ಕೇಳಿಬಂದಿದೆ. ಅದೇ ಹಿನ್ನೆಲೆಯಲ್ಲಿ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಮನೆಯಲ್ಲಿ ಶೋಧ ನಡೆಸಿದಾಗ ಸಣ್ಣ ಪ್ರಮಾಣದ ಕನ್ನಾಬಿಸ್ ಸಿಕ್ಕಿರುವುದಾಗಿ ತಿಳಿಸಲಾಗಿದೆ. ಆ ಕಾರಣ ದಂಪತಿಯನ್ನು ಎನ್ಸಿಬಿ ತಮ್ಮ ಕಚೇರಿಗೆ ವಿಚಾರಣೆಗೆ ಕರೆದೊಯ್ದಿದೆ.
ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ಸಾಕಷ್ಟು ನಟ ನಟಿಯರನ್ನು ಎನ್ಸಿಬಿ ವಿಚಾರಿಸಿದೆ. ಈ ಹಿಂದೆ ಅರ್ಜುನ್ ರಾಂಪಲ್ ಅವರ ಮನೆಯಲ್ಲಿ ಶೋಧ ನಡೆಸಿ ಅವರನ್ನೂ ವಿಚಾರಣೆ ನಡೆಸಲಾಗಿತ್ತು. (ಏಜೆನ್ಸೀಸ್)