ಬಿಕಿನಿಯಲ್ಲಿ ಮಗಳು, ಫೋಟೋ ಕ್ಲಿಕ್ಕಿಸಿದ ಅಪ್ಪ; ವಿಟಮಿನ್-ಡಿಗಾಗಿ ಮೈಯೊಡ್ಡಿದ ನಟಿ...

Untitled-1
Published on

ಬೆಂಗಳೂರು: ನಟಿಯರು, ರೂಪದರ್ಶಿಯರು ಬಿಕಿನಿಯಲ್ಲಿ ಕಾಣಿಸಿಕೊಳ್ಳುವುದು ಹೊಸದೇನಲ್ಲ, ಅದು ಅಪರೂಪವೂ ಅಲ್ಲ. ನಟಿ ರಾಕುಲ್ ಪ್ರೀತ್ ಸಿಂಗ್ ಕೂಡ ಈಗ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲ ತಾವು ಹಾಗೆ ಬಿಕಿನಿಯಲ್ಲಿರುವ ಫೋಟೋ ಕೂಡ ಹಂಚಿಕೊಂಡಿದ್ದಾರೆ.

ರಜೆ ಮೂಡ್​ನಲ್ಲಿರುವ ರಾಕುಲ್ ಪ್ರೀತ್​ ಸಿಂಗ್ ತಮ್ಮ ಫ್ಯಾಮಿಲಿ ಜತೆ ಮಾಲ್ಡೀವ್ಸ್​ ಪ್ರವಾಸದಲ್ಲಿದ್ದಾರೆ. ಅಲ್ಲಿಂದಲೇ ಒಂದೊಂದೇ ಫೋಟೋ ಕೂಡ ಹಂಚಿಕೊಂಡು ಅಭಿಮಾನಿಗಳನ್ನು ರಂಜಿಸುತ್ತಲೂ ಇದ್ದಾರೆ. ವಿಶೇಷವೆಂದರೆ ಬಿಕಿನಿಯಲ್ಲಿರುವ ಫೋಟೋವೊಂದನ್ನು ಹಂಚಿಕೊಂಡಿರುವ ರಾಕುಲ್​, ಅದಕ್ಕೊಂದು ವಿಶೇಷವಾದ ಕ್ಯಾಪ್ಷನ್​ ಕೂಡ ಕೊಟ್ಟಿದ್ದಾರೆ.

ವಿಶೇಷವೆಂದರೆ ಅವರು ಬಿಕಿನಿಯಲ್ಲಿರುವ ಚಿತ್ರವನ್ನು ಅವರ ತಂದೆಯೇ ಕ್ಲಿಕ್ಕಿಸಿದ್ದಾರೆ. ತಂದೆಗೆ ನಗುತ್ತಲೇ ಪೋಸ್​ ನೀಡಿರುವ ರಾಕುಲ್​ ಆ ಚಿತ್ರಕ್ಕೆ, 'ನಗು ಸಾಂಕ್ರಾಮಿಕ, ಅದನ್ನು ಹರಡಿ.. ಫೋಟೋ ಕ್ಲಿಕ್ಕಿಸಿದ್ದು ಡ್ಯಾಡಿ ದಿ ಗ್ರೇಟ್​' ಎಂಬ ಕ್ಯಾಪ್ಷನ್​ ನೀಡಿ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಇನ್ನೊಮ್ಮೆ ಬಿಕಿನಿಯಲ್ಲೇ ಮೈಬಾಗಿಸಿ ಬಿಸಿಲಿನಲ್ಲಿ ಆಕಾಶವನ್ನು ನೋಡುತ್ತ ಫೋಟೋ ತೆಗೆಸಿಕೊಂಡಿದ್ದಾರೆ. ಆ ಫೋಟೋವನ್ನು ಕೂಡ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ರಾಕುಲ್​, 'ವಿಟಮಿನ್ ಡಿ ಡೋಸ್ ತೆಗೆದುಕೊಳ್ಳುತ್ತಿದ್ದೇನೆ' ಎಂಬ ಕ್ಯಾಪ್ಷನ್​ ಹಾಕಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net