ಹಂಪ್​ನಲ್ಲಿ ಅಮ್ಮನ ಕೈಯಿಂದ ಕೆಳಕ್ಕೆ ಬಿದ್ದು 1 ವರ್ಷದ ಮಗು ಸಾವು; ಮದ್ವೆ ಮುಗಿಸಿ ಬೈಕ್​ನಲ್ಲಿ ಮರಳುತ್ತಿದ್ದಾಗ ಅವಘಡ

Untitled-2
Published on

ಮಂಡ್ಯ: ಹಂಪ್​ನಲ್ಲಿ ಆದ ಜಂಪ್​ಗೆ ಬೈಕ್​ನಲ್ಲಿದ್ದ ತಾಯಿಯ ಕೈತಪ್ಪಿ ಕೆಳಗೆ ಬಿದ್ದ ಒಂದು ವರ್ಷದ ಮಗು ಮೃತಪಟ್ಟಿದೆ. ಚಲಿಸುತ್ತಿರುವ ಬೈಕ್​ನಿಂದ ಕೆಳಕ್ಕೆ ಬಿದ್ದಿದ್ದರಿಂದ ಗಂಭೀರವಾಗಿ ಗಾಯಗೊಂಡ ಮಗುವನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದಾಗ್ಯೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.

ಮಂಡ್ಯ ತಾಲೂಕಿನ ಕಿರಗಂದೂರು ಗ್ರಾಮದ ಬಳಿ ಈ ಅವಘಡ ಸಂಭವಿಸಿದೆ. ಚಂದಗಾಲು ಗ್ರಾಮದ ಶಿವಕುಮಾರ್ ಮತ್ತು ರಂಜಿತಾ ದಂಪತಿ ಮಗುವಿನೊಂದಿಗೆ ಮದುವೆಗೆ ತೆರಳಿದ್ದು, ಸಮಾರಂಭ ಮುಗಿಸಿಕೊಂಡು ಮರಳುತ್ತಿದ್ದಾಗ ಹಂಪ್​ನಲ್ಲಿ ಬೈಕ್ ಜಂಪ್​ ಆಗಿದೆ. ಆಗ ತಾಯಿ ಆಯತಪ್ಪಿದ್ದರಿಂದ ಕೈಯಲ್ಲಿದ್ದ ಮಗು ಕೆಳಕ್ಕೆ ಬಿದ್ದಿದೆ.

ಮಗು ಸಾವಿನಿಂದ ತಂದೆ-ತಾಯಿ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಕುಟುಂಬ ಆಘಾತಕ್ಕೊಳಗಾಗಿ ತೀವ್ರ ಶೋಕದಲ್ಲಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net