ಸಿನಿವಾಣಿ

ಚಿರು ಆ್ಯಕ್ಟ್ ಮಾಡದ ಚಿತ್ರದ ಟ್ರೇಲರ್​ ಬಿಡುಗಡೆ!

chetannadiger

ಕೆಲವು ವರ್ಷಗಳ ಹಿಂದೆ ಚಿರಂಜೀವಿ ಸರ್ಜಾ ಅಭಿನಯದಲ್ಲಿ, ಹರಿಸಂತೋಷ್​ ಅಲಿಯಾಸ್​ ಅಲೆಮಾರಿ ಸಂತು ಒಂದು ಚಿತ್ರವನ್ನು ನಿರ್ದೇಶಿಸಬೇಕಿತ್ತು. ಅದರ ಹೆಸರು ದೊಡ್ಡೋರು - ಹಿಸ್ಟರಿ ರಿಪೀಟ್ಸ್​. ಕಾರಣಾಂತರಗಳಿಂದ ಆ ಚಿತ್ರ ಸೆಟ್ಟೇರಲಿಲ್ಲ. ಚಿರು ಅಭಿನಯದಲ್ಲಿ ಒಂದು ಚಿತ್ರ ನಿರ್ದೇಶಿಸಬೇಕು ಎಂಬ ಸಂತು ಕನಸು ನನಸಾಗಲೇ ಇಲ್ಲ.

ದೊಡ್ಡೋರು ಚಿತ್ರಕ್ಕೆ ಸಂತು ಒಂದಿಷ್ಟು ಕೆಲಸ ಮಾಡಿದ್ದರು. ಚಿತ್ರ ಹೇಗಿರುತ್ತದೆ ಎಂಬ ರೆಫರೆನ್ಸ್​ ಟ್ರೈಲರ್​ ಸಹ ಮಾಡಿಕೊಂಡಿದ್ದರು. ವಿಜ್ಜು ಸಂಗೀತದಲ್ಲಿ ಚಂದನ್​ ಶೆಟ್ಟಿ ಹಾಡಿದರೆ, ಹರಿ ಸಂತು ಮತ್ತು ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದರು. ಈ ಟೈಟಲ್ ಹಾಡಿಗೆ ಚಿರು ಅವರ ಹಲವು ಚಿತ್ರಗಳ‌ ತುಣುಕುಗಳು ಹಾಗೂ ಇತರೆ ಆ ಜಾನರ್ ಚಿತ್ರಗಳ ತುಣುಕುಗಳನ್ನ ಆಯ್ಕೆ ಮಾಡಿಕೊಂಡು ಹರಿ ಸಂತೋಷ್ ಮತ್ತು ತಂಡ ಈ ಟ್ರೈಲರ್ ನ‌ ಕಟ್ ಮಾಡಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರವೇ ಸೆಟ್ಟೇರಲಿಲ್ಲ.

ಈಗ ಸಂತು ಮತ್ತು ಚಿತ್ರತಂಡವು, ಆ ಟ್ರೈಲರ್​ ಬಿಡುಗಡೆ ಮಾಡುವ ಮೂಲಕ ಅಕಾಲಿಕವಾಗಿ ಅಗಲಿದ ತಮ್ಮ ಚಿತ್ರದ ನಾಯಕನಿಗೆ ಕಂಬನಿ ಮಿಡಿದಿದೆ. ಆ ಟ್ರೈಲರ್​ನ್ನು ಇದೀಗ ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಲಾಗಿದ್ದು, ಟ್ರೈಲರ್​ ನೋಡಿದವರೆಲ್ಲಾ ಚಿರು ಅವರನ್ನು ಮಿಸ್​ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಅಲ್ಲಿಗೆ ಚಿರು ಅಭಿನಯಸದ ಒಂದು ಚಿತ್ರದ ಟ್ರೈಲರ್​ ಇದೀಗ ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿದೆ. ಟ್ರೈಲರ್​ ನೋಡಿ ಮೆಚ್ಚಿಕೊಂಡಿರುವ ಕೆಲವರು, ಈ ಚಿತ್ರವನ್ನು ನಿಲ್ಲಿಸಬೇಡಿ ಎಂದು ಸಲಹೆ ನೀಡಿದರೆ, ಈ ಟ್ರೈಲರ್​ನಷ್ಟೇ ಸಿನಿಮಾ ಸಹ ಮೂಡಿ ಬಂದರೆ, ಚಿತ್ರ ಸೂಪರ್​ ಹಿಟ್​ ಆಗುತ್ತದೆ ಎಂದು ಹೇಳಿದ್ದಾರೆ.