ಚಿರು ಹಾಲು- ತುಪ್ಪ ಕಾರ್ಯದಲ್ಲಿ ನಿಲ್ಲದ ಮೇಘನಾ ಕಣ್ಣೀರು..

collage (4)
Published on

ಬೆಂಗಳೂರು: ಸ್ಯಾಂಡಲ್​ವುಡ್ ನಟ ಚಿರು ಸರ್ಜಾ ನಿಧನರಾಗಿ ಮೂರು ದಿನ ಕಳೆದ ಬೆನ್ನಲ್ಲೆ, ಕುಟುಂಬಸ್ಥರು ಕನಕಪುರ ರಸ್ತೆಯ ನೆಲಗುಳಿಯಲ್ಲಿನ ಬೃಂದಾವನ ಫಾರ್ಮ್​ಹೌಸ್​ಗೆ ತೆರಳಿ, ಅಲ್ಲಿನ ಸಮಾಧಿ ಬಳಿ ಬೆಳಗ್ಗೆ ಹಾಲು ತುಪ್ಪ ಕಾರ್ಯ ನೆರವೇರಿಸಿದರು.

ಈ ವೇಳೆ ಪತ್ನಿ ಮೇಘನಾ ಸರ್ಜಾ, ಧ್ರುವ ಸರ್ಜಾ, ತಂದೆ ವಿಜಯ್​ಕುಮಾರ್ ಸೇರಿ ಕುಟುಂಬದವರೆಲ್ಲ ಅಗಲಿದ ಚಿರುವಿಗೆ ಹಾಲು ತುಪ್ಪ ಅರ್ಪಿಸಿದರು. ಅಂತ್ಯಸಂಸ್ಕಾರದ ವಿಧಿ ವಿಧಾನ ನೆರವೇರಿಸಿದ್ದ ಮೋಹನ್​ ಪುರೋಹಿತರ ಸಮ್ಮುಖದಲ್ಲಿ ಹಾಲು ತುಪ್ಪ ಕಾರ್ಯ ನಡೆಯಿತು.

ಕಳೆದ ಎರಡು ದಿನದಿಂದ ದುಃಖದ ಮಡುವಿನಲ್ಲೇ ಇದ್ದ ಮೇಘನಾ, ಈ ಕಾರ್ಯದ ಸಂದರ್ಭದಲ್ಲೂ ಕಣ್ಣೀರಾಗಿದ್ದರು. ಧ್ರುವ ಸರ್ಜಾ ಅಣ್ಣನ ಸಮಾಧಿ ಸುತ್ತಲೇ ಅತ್ತಿಂದಿತ್ತ ಓಡಾಡುತ್ತ ಅಣ್ಣನ ನೆನಪಲ್ಲೇ ಮೌನವಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net