ಸಿನಿವಾಣಿ

ಹಿಗ್ಗಾಮುಗ್ಗಾ ಟ್ರೋಲ್ ಆದ ಬಾಲಿವುಡ್ ನಟಿ! ಕಾರಣ ಶಾಕಿಂಗ್​...

ಸಿನಿ ತಾರೆಯರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಸಖತ್ ಸಕ್ರಿಯವಾಗಿರುತ್ತಾರೆ. ಆದರೆ, ಅವರು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಯಾವುದೋ ಒಂದು ವಿಚಾರಕ್ಕೆ ಟೀಕಿಗಳನ್ನು ಅನುಭವಿಸುವುದರ ಜತೆಗೆ ಹಿಗ್ಗಾಮುಗ್ಗಾ ಟ್ರೋಲ್ ಕೂಡ ಆಗುತ್ತಾರೆ. ಸದ್ಯ, ಬಾಲಿವುಡ್​ನ ಖ್ಯಾತ ನಟಿಯಾದ ತಿಲೋತಮಾ ಶೋಮೆ ಶೇರ್ ಮಾಡಿಕೊಂಡ ಒಂದು ಫೋಟೋಗೆ ಅವರು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಇಲ್ಲಿ ಬೇಸರದ ವಿಷಯವೆನೆಂದರೆ ನಟಿಯನ್ನು ಅವರ ಅಭಿಮಾನಿಗಳು ಸಹ ಈ ಫೋಟೋ ಕಂಡು ನಾನಾ ರೀತಿಯ ಕಾಮೆಂಟ್​ಗಳನ್ನು ಮಾಡಿದ್ದಾರೆ.
ಹಾಗಾದರೆ, ಯಾವುದು ಆ ಫೋಟೋ ಅಂತೀರಾ?.. ನಟಿ ತಿಲೋತಮಾ ಶೋಮೆ ಅವರು ‘ಮಾನ್ಸೂನ್​ ವೆಡ್ಡಿಂಗ್​’, ‘ಇಂಗ್ಲಿಷ್​ ಮೀಡಿಯಮ್​’ ಎಂಬಂತೆ ಹಲವು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದು, ಬಹಳಷ್ಟು ಖ್ಯಾತಿ ಗಳಿಸಿದ್ದಾರೆ. ಜತೆಗೆ, ಇವರು ಬರೋಬ್ಬರಿ 5 ಭಾಷೆಗಳಲ್ಲಿ ಅಂದರೆ ಇಂಗ್ಲಿಷ್​, ಹಿಂದಿ, ಬೆಂಗಾಲಿ, ನೇಪಾಳಿ, ಪಂಜಾಬಿ ಭಾಷೆಗಳಲ್ಲಿ ನಟಿಸಿ, ತೆರೆ ಮೇಲೆ ಸಿಕ್ಕಾಪಟ್ಟೆ ಮಿಂಚಿದ್ದಾರೆ. ಇನ್​ಸ್ಟಾಗ್ರಾಂ​ನಲ್ಲಿ ಅವರು 92 ಸಾವಿರ ಅನುಯಾಯಿಗಳನ್ನು ಹೊಂದಿದ್ದಾರೆ. ಹಾಗಾಗಿ, ಅವರು ಹಂಚಿಕೊಂಡ ಫೋಟೋದಲ್ಲಿ ಕಂಕುಳ ಕೂದಲು ಕಾಣಿಸಿರುವುದು ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಹೌದು, ತಿಲೋತಮಾ ಅವರು ತಮ್ಮ ನಗುತ್ತಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರ ಎರಡೂ ಕೈಗಳನ್ನು ತಲೆಯ ಹಿಂಭಾಗದಲ್ಲಿ ಇಟ್ಟುಕೊಂಡಿದ್ದಾರೆ. ಹೀಗಾಗಿ, ಅವರ ಕಂಕುಳದ ಭಾಗಗಳಲ್ಲಿ ಕೂದಲನ್ನು ತೆಗೆಸಿಲ್ಲ ಎಂಬುದು ಕಾಣುತ್ತಿದೆ. ಹಾಗಾಗಿ, ಕೆಲವು ವ್ಯಕ್ತಿಗಳ ದೃಷ್ಟಿ ಇದರ ಮೇಲೆ ನೆಟ್ಟಿದೆ ಎನ್ನಬಹುದು. ನಟಿಯ ಈ ಫೋಟೋ ಕೆಳಗೆ ‘ಕಂಕುಳ ಕೂದಲನ್ನು ತೆಗೆದಿಲ್ಲ, ಅದು ಕೆಟ್ಟದಾಗಿ ಕಾಣುತ್ತಿದೆ’ ಎಂದು ತುಂಬಾ ಜನ ಕಮೆಂಟ್​ ಮಾಡಿದ್ದಾರೆ. ಹಾಗೆ ಕಾಮೆಂಟ್ ಮಾಡಿದ ವ್ಯಕ್ತಿಗಳಲ್ಲಿ ಬಹುತೇಕರು ಮಹಿಳೆಯರೇ ಇರುವುದು ಗಮನ ಸೆಳೆಯುತ್ತಿದೆ. ನಟಿಯ ಈ ಫೋಟೋಗೆ 7000ಕ್ಕೂ ಹೆಚ್ಚು ಲೈಕ್ಸ್ ಇದ್ದು, 150ಕ್ಕೂ ಹೆಚ್ಚು ಕಾಮೆಂಟ್​ಗಳು ಇದ್ದಾವೆ.