ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಮತ್ತು ಅವರ ಸಹೋದರ ನಟ ಅಪರಶಕ್ತಿ ಖುರಾನಾ ಇಬ್ಬರೂ ಸೇರಿ ಮುಂಬೈನಲ್ಲಿ ತಮಗಾಗಿ ಒಂದು ಭರ್ಜರಿ ಆಸ್ತಿಯನ್ನು ಖರೀದಿಸಿದ್ದಾರೆ. ಹಲವು ಸುದ್ದಿಗಳ ಪ್ರಕಾರ, ಆಯುಷ್ಮಾನ್ ಖುರಾನಾ ಮತ್ತು ಸಹೋದರ ಅಪರಶಕ್ತಿ ಮುಂಬೈನ ಒಂದೇ ಜಾಗದಲ್ಲಿ ಸುಮಾರು 19 ಕೋಟಿ ಮತ್ತು 7 ಕೋಟಿ ರೂಪಾಯಿಗಳಿಗೆ ಆಸ್ತಿಯನ್ನು ಖರೀದಿಸಿದ್ದಾರೆ ಎನ್ನಲಾಗಿದೆ.
ಆಯುಷ್ಮಾನ್ ಅವರ ಹೊಸ ಮನೆ ಡೆವಲಪರ್ ವಿಂಡ್ಸರ್ ರಿಯಾಲ್ಟಿ ಪ್ರೈವೇಟ್ ಲಿಮಿಟೆಡ್‌ನಿಂದ ಅಂಧೇರಿ ವೆಸ್ಟ್‌ನ ಲೋಖಂಡ್‌ವಾಲಾ ಕಾಂಪ್ಲೆಕ್ಸ್‌ನ ವಿಂಡ್ಸರ್ ಗ್ರಾಂಡೆ ರೆಸಿಡೆನ್ಸಸ್‌ನಲ್ಲಿ 20ನೇ ಮಹಡಿಯಲ್ಲಿ ಎರಡು ಘಟಕಗಳನ್ನು ಹೊಂದಿದೆ. ಅದರ ಬೆಲೆ 19.30 ಕೋಟಿ ರೂ. ಎಂದು ಹೇಳಲಾಗುತ್ತಿದೆ. ಈ ಮನೆಯ ಪತ್ರವನ್ನು ನವೆಂಬರ್ 29, 2021 ರಂದು ನೋಂದಾಯಿಸಲಾಗಿದ್ದು, ಅದಕ್ಕೆ ನಟ 96.50 ಲಕ್ಷ ರೂ. ಸ್ಟ್ಯಾಂಪ್ ಡ್ಯೂಟಿ ಪಾವತಿಸಿದ್ದಾರಂತೆ. ನಟನ ಈ ಮನೆಯ ಒಟ್ಟು ಗಾತ್ರ 4,027 ಚದರ ಅಡಿಯಾಗಿದ್ದು, ನಾಲ್ಕು ಕಾರ್ಗಳನ್ನು ಪಾರ್ಕಿ ಮಾಡುವಷ್ಟು ಜಾಗವನ್ನು ಹೊಂದಿದೆ.
ಇನ್ನು, ಮತ್ತೊಂದೆಡೆ ಅದೇ ಸ್ಥಳದಲ್ಲಿ 1,745 ಚದರ ಅಡಿ ವಿಸ್ತೀರ್ಣದ ಮೊತ್ತೊಂದು ಮನೆಯನ್ನು 7.25 ಕೋಟಿ ರೂ.ಗೆ ಆಯುಷ್ಮಾನ್ ಸಹೋದರ ನಟ ಅಪರಶಕ್ತಿ ಖರೀದಿಸಿದ್ದು, ಅವರು ಮನೆಗೆ 36.25 ಲಕ್ಷ ರೂ. ಸ್ಟ್ಯಾಂಪ್ ಡ್ಯೂಟಿ ಪಾವತಿಸಿದ್ದಾರೆ. ಇನ್ನು, ಅಪರಶಕ್ತಿ ಅವರ ಮನೆಯನ್ನು ಡಿಸೆಂಬರ್ 7, 2021 ರಂದು ನೋಂದಾಯಿಸಿದ್ದಾರೆ. ಅಪರಶಕ್ತಿ ಮನೆ ಎರಡು ಕಾರ್ಗಳನ್ನು ಪಾರ್ಕಿ ಮಾಡುವಷ್ಟು ಜಾಗವನ್ನು ಹೊಂದಿದೆಯಂತೆ. ಈ ಹಿಂದೆ, 2020 ರಲ್ಲಿ ಇದೇ ನಟ ಆಯುಷ್ಮಾನ್ ಮತ್ತು ನಟ ಅಪರಶಕ್ತಿ ಒಟ್ಟಾಗಿ ಚಂಡೀಗಢದಲ್ಲಿಯೂ ಅವರ ಕುಟುಂಬಕ್ಕಾಗಿಯೂ ಪಂಚಕುಲದಲ್ಲಿ 9 ಕೋಟಿ ರೂಪಾಯಿ ಮೌಲ್ಯದ ಒಂದು ಮನೆಯನ್ನು ಖರೀದಿಸಿದರು.
ಈಗ ಖರೀದಿಸಿದ ಹೊಸ ಮನೆಗಳ ಒಳಾಂಗಣ ವಿನ್ಯಾಸ ಪೂರ್ತಿಯದ ಬಳಿಕ ಈ ಸಹೋದರರು ತಮ್ಮ ಮನೆಗಳಿಗೆ ಪ್ರವೇಶ ಮಾಡಲಿದ್ದಾರಂತೆ. ನಟರು ಖರೀದಿಸಿರುವ ಮನೆಗಳಲ್ಲಿ ಐದಕ್ಕೂ ಹೆಚ್ಚು ಬೆಡ್ರೂಮ್ಗಳು ಇವೆ ಎಂದು ತಿಳಿದುಬಂದಿದೆ. ಇವರಿಬ್ಬರ ಹೊಸ ಮನೆಗಳಲ್ಲಿ ಇನ್ನೂ ಬಹಳಷ್ಟು ಬೇರೆ ಬೇರೆ ವಿಶೇಷತೆಗಳು ಇವೆ ಎನ್ನಲಾಗಿದೆ. ಆದರೆ, ನಟರು ಗೃಹ ಪ್ರವೇಶ ಮಾಡಿದ ಬಳಿಕವೇ ಕೋಟಿ ಕೋಟಿ ಬೆಲೆ ಬಾಳುವ ಈ ಮನೆಗಳ ಪೂರ್ಣ ಮಾಹಿತಿ ಹೊರಬಿಳಲಿದೆ.