ಬೆಂಗಳೂರು: ಕನ್ನಡದ ರಾಪ್ ಲೋಕದಲ್ಲಿ ಅಲೋಕ್ ಬಾಬು ಅಲಿಯಾಸ್ ಆಲ್ ಓಕೆ ದೊಡ್ಡ ಹೆಸರು. ಈಗಾಗಲೇ ಅಲೋಕ್, ಆಲ್ ಓಕೆ ಹೆಸರಿನಲ್ಲಿ ಹಲವು ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ ಮತ್ತು ಆ ಹಾಡುಗಳು ಸಾಕಷ್ಟು ಜನಪ್ರಿಯವೂ ಆಗಿದೆ. ಈಗ ಸಂತ ಶಿಶುನಾಳ ಶರೀಫರ 'ಸೋರುತಿಹುದು ಮನೆಯ ಮಾಳಿಗಿ ...' ಹಾಡಿಗೆ ರಾಪ್ ಸ್ಪರ್ಶ ಕೊಟ್ಟಿದ್ದಾರೆ.
’ಸೋರುತಿವುದು ಮನೆಯ ಮಾಳಿಗಿ’ ಹಾಡಿನಲ್ಲಿ ಅಜ್ಞಾನದ ಕುರಿತು ಪ್ರತಿಯೊಬ್ಬರಿಗೂ ಪ್ರೇರಣೆ ತುಂಬುವಂತಹ ಸಾಹಿತ್ಯವಿದೆ. ಈ ಹಾಡಿಗೆ ಆಲ್ ಓಕೆ ಹಾಡಿರುವುದಷ್ಟೇ ಅಲ್ಲ, ಸಂಗೀತ ಸಂಯೋಜಿಸಿ, ನಿರ್ಮಾಣ ಮತ್ತು ನಟನೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಜತೆಗೆ ಹೆಚ್ಚುವರಿ ಸಾಹಿತ್ಯವನ್ನೂ ರಚಿಸಿದ್ದಾರೆ.
ಈ ಹಾಡನ್ನು ರಾಜಾ ರಾಮ್ ರಾಜೇಂದ್ರನ್ ನಿರ್ದೇಶಿಸುವುದರ ಜತೆಗೆ ಛಾಯಾಗ್ರಹಣವನ್ನೂ ಮಾಡಿದ್ದಾರೆ. ಜೋಲ್ಸನ್ ಪಣಿಕರ್ ಸಂಕಲನ ಹಾಗೂ ಗ್ರಾಫಿಕ್ ಜವಾಬ್ದಾರಿ ನಿರ್ವಹಿಸಿದ್ದಾರೆ.
ಇದನ್ನೂ ಓದಿ: OTT ಗೆ ಕಾಲಿಟ್ಟ ಕಾಫಿ ವಿತ್ ಕರಣ್ ಸೀಸನ್ 7
ಕಳೆದ 19 ವರ್ಷಗಳಿಂದ ಕನ್ನಡ ರಾಪ್ ಜಗತ್ತಿನಲ್ಲಿ ದುನಿಯಾದಲ್ಲಿ ತಮ್ಮದೇ ಹೊಸ ಶೈಲಿಯನ್ನು ಹುಟ್ಟುಹಾಕಿರುವ ಅಲೋಕ್ ಈಗ ಜನಪದ ಸಾಹಿತ್ಯದ ಉಳಿವಿಗಾಗಿ ಹೊಸ ಪ್ರಯೋಗ ಮಾಡಿದ್ದಾರೆ. ಈ ಹಾಡು ಇದೀಗ ಯೂಟ್ಯೂಬ್ನ ಆಲ್ ಓಕೆ ಚಾನಲ್ನಲ್ಲಿ ಬಿಡುಗಡೆಯಾಗಿದೆ.