ಸಿನಿವಾಣಿ

ಟ್ರಾಫಿಕ್​ನಿಂದ ತಪ್ಪಿಸಿಕೊಳ್ಳಲು ಅಕ್ಷಯ್​ ಮಾಡಿದ ಐಡಿಯಾ ಹೇಗಿದೆ ನೋಡಿ...

ಮುಂಬೈ: ಬಾಲಿವುಡ್​ನಲ್ಲಿ ಅಕ್ಷಯ್​ ಕುಮಾರ್ ತುಂಬ ವೃತ್ತಿಪರತೆ ಹೊಂದಿರುವಂತಹ ನಟ. ಅಂದುಕೊಂಡ ಸಮಯಕ್ಕೆ ಹಿಡಿದ ಕೆಲಸವನ್ನು ಮುಗಿಸಿ, ಮುಂದಿನ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರವರು. ಇತ್ತೀಚೆಗಷ್ಟೇ ಸ್ಕಾಟ್​ಲೆಂಡ್​ಗೆ ಹೋಗಿ ಬೆಲ್​ಬಾಟಂ ಸಿನಿಮಾ ಶೂಟಿಂಗ್​ ಮುಗಿಸಿಕೊಂಡು, ಬಿಡುಗಡೆ ದಿನಾಂಕವನ್ನೂ ಘೋಷಣೆ ಮಾಡಿಕೊಂಡಿದ್ದಾರವರು. ಇದೀಗ ಸಮಯ ಉಳಿಸಲು ಹೊಸ ದಾರಿಯನ್ನು ಹಿಡಿದಿದ್ದಾರೆ.

ಹೌದು, ಕರೊನಾ ಹಾವಳಿ ಮೊದಲಿನಂತಿಲ್ಲ. ಎಲ್ಲವೂ ಯಥಾಸ್ಥಿತಿಗೆ ಮರಳುತ್ತಿರುವುದರಿಂದ ಮುಂಬೈನಲ್ಲಿ ಟ್ರಾಫಿಕ್​ ಸಮಸ್ಯೆ ಹೆಚ್ಚಾಗಿದೆ. ಆ ಟ್ರಾಫಿಕ್​ನಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಅಕ್ಷಯ್​ ಕುಮಾರ್, ಕಾರ್​ ಬದಲಿಗೆ ಬೋಟ್​ ಏರಿದ್ದಾರೆ.

ಸಿನಿಮಾ ಸಂಬಂಧಿ ಕೆಲಸದ ನಿಮಿತ್ತ ಮೊದಲಿಗೆ ಕಾರ್​ ಏರಿದ್ದ ಅಕ್ಷಯ್​, ಬಳಿಕ ಟ್ರಾಫಿಕ್​ ಸಮಸ್ಯೆ ನೋಡಿ, ಬೀಚ್​ ಬಳಿಯೇ ಕಾರ್​ ಬದಲಿಸಿ, ಬೋಟ್ ಏರಿದ್ದಾರೆ. ಮಧ್​ ಐಸ್​ಲೆಂಡ್​ನಿಂದ ತೆರಳಿದ್ದಾರೆ. ಹಾಗೆ ಬೋಟ್​ನಲ್ಲಿ ಹೋಗುವ ಅವರ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಅಕ್ಷಯ್ ಅವರ ವೃತ್ತಿಪರತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.