ಸಿನಿವಾಣಿ

ಟೀಮ್ '777 ಚಾರ್ಲಿ' ಚಿತ್ರತಂಡದ ಕಡೆಯಿಂದ ಬಿಗ್​ ಸರ್ಪ್ರೈಸ್​

ಬೆಂಗಳೂರು: ಈಗಾಗಲೇ ಬಹುತೇಕ ಸಿನಿಮಾ ಕೆಲಸಗಳನ್ನು ಮುಗಿಸಿಕೊಂಡಿರುವ 777 ಚಾರ್ಲಿ ತಂಡ ಇದೀಗ ಸಿನಿಮಾಭಿಮಾನಿಗಳಿಗೆ ವಿಶೇಷ ಉಡುಗೊರೆ ಕೊಡಲು ನಿರ್ಧರಿಸಿದೆ. ಅದರಂತೆ ನ. 6ಕ್ಕೆ ಚಿತ್ರತಂಡ ದೊಡ್ಡ ಅನೌನ್ಸ್​ಮೆಂಟ್​ವೊಂದನ್ನು ಮಾಡಲಿದೆ.

ಈ ವಿಚಾರವನ್ನು ಚಿತ್ರದ ನಾಯಕ ರಕ್ಷಿತ್​ ಶೆಟ್ಟಿ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದು, ಶುಕ್ರವಾರ ಬೆಳಗ್ಗೆ 7.30ಕ್ಕೆ ನಿಮಗೆಲ್ಲ ಸರ್ಪ್ರೈಸ್ ಕಾದಿದೆ ಎಂದಿದ್ದಾರೆ.

ಪರಮ್ವಾ ಸ್ಟುಡಿಯೋಸ್ ಮತ್ತು ಪುಷ್ಕರ್​ ಫಿಲಂಸ್​ ಬ್ಯಾನರ್​ನಲ್ಲಿ ಸಿದ್ಧವಾಗಿರುವ 777 ಚಾರ್ಲಿ ಚಿತ್ರವನ್ನು ರಕ್ಷಿತ್​ ಶೆಟ್ಟಿ ಮತ್ತು ಪುಷ್ಕರ್​ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಕಿರಣ್​ ರಾಜ್​ ಆ್ಯಕ್ಷನ್​ ಕಟ್​ ಹೇಳಿದ್ದು, ಚಿತ್ರದ ಶೇ. 90 ಭಾಗದ ಶೂಟಿಂಗ್​ ಮುಗಿದಿದೆ.

ಈಗಾಗಲೇ ಲುಕ್​ಗಳ ಮೂಲಕವೇ ಪ್ರೇಕ್ಷಕರೆದುರು ಬಂದಿದ್ದ ತಂಡ, ಈ ಬಾರಿ ಟೀಸರ್ ಅಥವಾ ಹಾಡಿನ ಮೂಲಕ ಆಗಮಿಸಲಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಆ ಎಲ್ಲ ಕೌತುಕಕ್ಕೆ ಶುಕ್ರವಾರ ಬೆಳಗ್ಗೆ 7.30ಕ್ಕೆ ಗೊತ್ತಾಗಲಿದೆ.