ಗೋವಾ ಬೀಚ್​ನಲ್ಲಿ ಅರೆಬೆತ್ತಲೆ ನೃತ್ಯ ಮಾಡಿದ್ದಕ್ಕೆ ಪೂನಂ ಪಾಂಡೆ ವಿರುದ್ಧ ದೂರು

discover
Published on

ಪಣಜಿ: ಬಾಲಿವುಡ್ ನಟಿ ಪೂನಂ ಪಾಂಡೆ ಇತ್ತೀಚೆಗಷ್ಟೇ ಮದುವೆ ವಿಚಾರದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದರು. ಅದಾದ ಬಳಿಕ ಪತಿ ಜತೆಗೆ ಕಿರಿಕ್​ ಮಾಡಿಕೊಂಡು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು. ಇದೀಗ ಗೋವಾ ಬೀಚ್​ನಲ್ಲಿ ನೃತ್ಯ ಮಾಡಿದ್ದ ಹಿನ್ನೆಲೆಯಲ್ಲಿ ಪೂನಂ ಪಾಂಡೆ ವಿರುದ್ಧ ದೂರು ದಾಖಲಾಗಿದೆ.

ಗೋವಾದ ಚಪೋಲಿ ಧಾಮ್​ನಲ್ಲಿ ಅಶ್ಲೀಲವಾಗಿ ಅರೆಬೆತ್ತಲೆಯಲ್ಲಿ ಪೂನಂ ನೃತ್ಯ ಮಾಡಿದ್ದರು. ಹಾಗೆ ನೃತ್ಯ ಮಾಡಿದ್ದನ್ನು ಖಂಡಿಸಿದ ಸ್ಥಳೀಯರೊಬ್ಬರು ಕಾನಕೋಡ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಇತ್ತ ಗೋವಾದ ಮಹಿಳಾ ವಿಂಗ್​ ಪಡೆ ಸಹ ಪೂನಂ ವಿರುದ್ಧ ಸ್ವಯಂ ದೂರು ದಾಖಲಿಸಿಕೊಂಡಿದೆ.

ಈ ಮೊದಲು ಪತಿ ನನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಗೋವಾದ ಪೊಲೀಸ್​ ಠಾಣೆಯಲ್ಲಿ ಪತಿ ಸ್ಯಾಮ್​ ಬಾಂಬೆ ವಿರುದ್ಧ ದೂರು ನೀಡಿದ್ದರು. ಇದೀಗ ಅಶ್ಲೀಲ ನೃತ್ಯ ಮಾಡಿದ್ದಕ್ಕೆ ದೂರು ದಾಖಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net