ಬಾಲಿವುಡ್​ ಹಿರಿಯ ನಟ ಬೆಂಗಳೂರು ಆಸ್ಪತ್ರೆಯಲ್ಲಿ ನಿಧನ

Faraz Khan
Published on

ಮುಂಬೈ: 90ರ ದಶಕದಲ್ಲಿ ತೆರೆಕಂಡ ಮೆಹಂದಿ, ಫರೇಬ್​​ನಂತಹ ಹಲವು ಜನಪ್ರಿಯ ಸಿನಿಮಾಗಳಲ್ಲಿ ನಾಯಕರಾಗಿದ್ದ ಫರಾಜ್ ಖಾನ್​ ಇಂದು ನಿಧನರಾದರು. ಅವರಿಗೆ 50 ವರ್ಷ ವಯಸ್ಸಾಗಿತ್ತು.

ಫರಾಜ್​ ಖಾನ್​ ಮೃತಪಟ್ಟ ವಿಷಯವನ್ನು ನಟಿ ಪೂಜಾ ಭಟ್​ ತಮ್ಮ ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫರಾಜ್ ಖಾನ್​ ನಮ್ಮನ್ನೆಲ್ಲ ಅಗಲಿದ್ದಾರೆ ಎಂಬ ಸುದ್ದಿಯನ್ನು ಅತ್ಯಂತ ಭಾರವಾದ ಹೃದಯದಿಂದ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಹೇಳಿರುವ ನಟಿ, ಅವರ ಹಲವು ಫೋಟೋಗಳನ್ನೂ ಶೇರ್ ಮಾಡಿಕೊಂಡಿದ್ದಾರೆ.

ಫರಾಜ್​ಖಾನ್​ಗೆ ಸರ್ಪಸುತ್ತು ಆಗಿತ್ತು. ಅದು ಹೃದಯದಿಂದ ಮಿದುಳಿನವರೆಗೆ ಪಸರಿಸಿತ್ತು. ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಫರಾಜ್​ಖಾನ್ ಚಿಕಿತ್ಸೆಗಾಗಿ ದೇಣಿಗೆಗಳನ್ನೂ ಸಂಗ್ರಹಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net