ಸೌಂದರ್ಯಪ್ರಜ್ಞೆ (ಕಾಸ್ಮೆಟಿಕ್) ಎಂಬುದು ಸಾಮಾನ್ಯವಾಗಿ ಹುಡುಗಿಯರಲ್ಲೇ ಹೆಚ್ಚು ಎನ್ನುವ ಮಾತಿದೆ. ಆದರೆ ಈಗ ಅದು ಹುಡುಗರಲ್ಲೂ ಹೆಚ್ಚಾಗಿ ಕಾಣಿಸಲಾರಂಭಿಸಿದೆ. ಅದರಲ್ಲೂ ಹುಡುಗಿಯರಂತೆ ಹುಡುಗರೂ ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗುತ್ತಿದ್ದು, ಕೃತಕವಾಗಿ ಅಂದ ಹೆಚ್ಚಿಸಿಕೊಳ್ಳಲಾರಂಭಿಸಿದ್ದಾರೆ. ಆ ಕುರಿತ ಕಿರು ಲೇಖನ ಇಲ್ಲಿದೆ - ಮರಿದೇವ ಹೂಗಾರ, ಹುಬ್ಬಳ್ಳಿ
ತುಂಟ ಕೆನ್ನೆಯ ಮೇಲೆ ಗುಳಿ ಬಿದ್ದರೆ ಎಷ್ಟು ಚೆನ್ನ ಅಲ್ವಾ?, ತಂಬಿಟ್ಟಿನಂಥ ಗದ್ದ ಇದ್ದರೆ?, ಅಯ್ಯೋ ನಿನ್ನ ಮುದ್ದು ಮುಖಕ್ಕೆ ಗಿಣಿಯಂಥ ಮೂಗಿರಲಿ, ನೀ ನಕ್ಕರೆ ವಸಡು ಕಾಣದಿರಲಿ.. ಹೀಗೆ ಹುಡುಗಿಯರಿಗೆ ಹುಡುಗರು ಸಂಭೋದಿಸುವುದು ವಾಡಿಕೆ. ಆದರೆ, ಕಾಲ ಬದಲಾಗಿದೆ. ಈಗ ಪ್ರೀತಿಯಿಂದ ಹುಡುಗಿಯರೇ ಹುಡುಗರಿಗೆ ಕೇಳುವ ಕಾಲ ಬಂದಾಗಿದೆ! ಆಧುನಿಕ ಕಾಲದ ಜತೆಗೆ ಹೊಂದಿಕೊಳ್ಳಲು ಯತ್ನಿಸುತ್ತಿರುವ ದಿನಗಳಿವು. ಹುಡುಗರಿಗೆ ಹುಡುಗಿಯರು ಸಿಗುವುದೂ ದುರ್ಲಭ. ಇಂಥದ್ದರಲ್ಲಿ ಹುಡುಗಿಯರ ಪ್ರೀತಿಯ ಮಾತಿಗೆ ಮನಸೋತು, ಹುಡುಗರು ಕಾಸ್ಮೆಟಿಕ್ ಸರ್ಜರಿಗೆ (ಸೌಂದರ್ಯ ವರ್ಧಕ ಶಸ್ತ್ರಚಿಕಿತ್ಸೆ) ಒಳಗಾಗುತ್ತಿರುವ ಟ್ರೆಂಡ್ ಹೆಚ್ಚುತ್ತಿದೆ. ಈ ಮೊದಲೆಲ್ಲ ಬೃಹತ್ ಮಹಾನಗರಗಳಲ್ಲಿ ಹುಡುಗಿಯರು ಕಾಸ್ಮೆಟಿಕ್ ಸರ್ಜರಿಗೆ ಒಳಗಾಗುತ್ತಿದ್ದರು.
ಬಾಯ್ಫ್ರೆಂಡ್, ಭಾವಿ ಪತಿ, ಪತಿಯ ಓಲೈಕೆಗೆ ಕಾಸ್ಮೆಟಿಕ್ ಸರ್ಜರಿ ನಂಟು ಬೆಳೆಸಿಕೊಂಡಿದ್ದರು. ಇವರ ಅನುಪಾತ ಶೇ. 75ರಷ್ಟಿತ್ತು. ತುಟಿ, ಮುಖ, ಸ್ತನ, ಮೂಗು, ದೇಹದ ಮರು ಸೌಂದರ್ಯವೃದ್ಧಿಗೆ ಅಧಿಕ ಒತ್ತು ಕೊಡುತ್ತಿದ್ದರು. ಈಗ ಕಾಸ್ಮೆಟಿಕ್ ಸರ್ಜರಿಗೆ ಒಳಗಾಗುತ್ತಿರುವ ಹುಡುಗರ ಸಂಖ್ಯೆ ಶೇ. 60 ದಾಟಿದೆ. ಅದರಲ್ಲೂ ಮೇಲ್ವರ್ಗ ಮತ್ತು ಮಧ್ಯಮ ವರ್ಗದವರು ಹೆಚ್ಚೆಂಬುದು ನಿಮ್ಮ ಊಹೆ ಆಗಿದ್ದರೆ ಅದು ಸುಳ್ಳು. ಕೆಳ ಮಧ್ಯಮ ವರ್ಗದವರ ಸಂಖ್ಯೆ ಹೆಚ್ಚುತ್ತಿರುವುದನ್ನು ಪ್ಲ್ಯಾಸ್ಟಿಕ್ ಸರ್ಜರಿ ವಿಭಾಗದ ವೈದ್ಯರೇ ಅಚ್ಚರಿಯಿಂದ ಹೇಳುತ್ತಿದ್ದಾರೆ.
ಈಗೀಗ ಸೋಷಿಯಲ್ ಮೀಡಿಯಾ ಟ್ರೆಂಡ್ ಶುರುವಾಗಿದೆ. ನಟರಾದ ಶಾರುಖ್ ಖಾನ್, ಹೃತಿಕ್ ರೋಷನ್, ರಣಬೀರ್ ಕಪೂರ್, ಸಿದ್ಧಾರ್ಥ, ವರುಣ್ ಧವನ್ನಂತೆ ಕಾಣಬೇಕೆಂದು ಹುಡುಗಿಯರು ಬಯಸುತ್ತಿದ್ದಾರೆ. ಪ್ರಿ-ವೆಡ್ಡಿಂಗ್ ಶೂಟ್, ಸೆಲ್ಪಿ ಕ್ರೇಜ್ಗಳೂ ಅಂದವನ್ನು ಪರಿಗಣಿಸುವಂತೆ ಮಾಡುತ್ತಿವೆೆ. ಮೊದಲೆಲ್ಲ ಹುಡುಗಿಯರು ಹೀಗೇ ಇರಬೇಕು ಎಂದು ಹುಡುಗರೇ ಅಪೇಕ್ಷೆ ಪಡುತ್ತಿದ್ದರು. ಈಗ ಹಾಗಿಲ್ಲ.. ಹುಡುಗಿಯರೇ ಹುಡುಗರನ್ನು ಸೆಲೆಕ್ಟ್ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಈ ಟ್ರೆಂಡ್ ಜೋರಾಗಿ ಶುರುವಾಗಿದೆ.
ಗುಳಿ ಕೆನ್ನೆ, ಸ್ತನ ಗಾತ್ರ ಸಣ್ಣ ಮಾಡುವುದು, ಅಂಚೆಬೊಟ್ಟು ತೆಗೆಯುವುದು, ಮೂಗಿನ ಸೌಂದರ್ಯ, ದಪ್ಪ ತುಟಿ ತೆಳ್ಳಗಾಗಿಸುವುದು, ವಸಡು ಕಾಣದಂತೆ ಮಾಡುವುದು, ಹೊಟ್ಟೆ ಕರಗಿಸುವುದು. ಇವು ಹುಡುಗಿಯರ ಮೊದಲ ಆದ್ಯತೆ. ಯುವತಿಯರ ಮನಸ್ಸಿಗೆ ಒಪ್ಪುವಂತೆ ಅಂದರೆ ಸುಲಕ್ಷಣವಾಗಿ ಇರಲು ಹುಡುಗರು ಬಯಸುತ್ತಿದ್ದಾರೆ. ಸಾಲ ಮಾಡಿಯಾದರೂ ಸೈ, ಸರ್ಜರಿ ಮಾಡಿಸಿಕೊಂಡು ಸಂಗಾತಿಯ ಮನ ಮೆಚ್ಚಿಸುತ್ತಿದ್ದಾರೆ ಯುವಕರು.
ಕಥೆ1:
ಕಥೆ2:
ಕಥೆ3:
ಹುಡುಗರು ಹೀಗೆ ಇರಬೇಕೆಂದು ಬಹಳಷ್ಟು ಯುವತಿಯರು ಇಚ್ಛೆ ಪಡುವುದು ಸಾಮಾನ್ಯವಾಗಿದೆ. ಹಾಗಾಗಿ ಬಹಳಷ್ಟು ಯುವಕರು, ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳುತ್ತಿದ್ದಾರೆ. ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಹಾಗೂ ಕೆಳ ಮಧ್ಯಮ ವರ್ಗದ ಜನರೂ ಸೌಂದರ್ಯಪ್ರಜ್ಞೆ ಬೆಳೆಸಿಕೊಳ್ಳುತ್ತಿದ್ದಾರೆ.
| ಡಾ.ಎಸ್.ಎಸ್. ಶಿರೋಳ ಸಹ ಪ್ರಾಧ್ಯಾಪಕರು, ಕಿಮ್ಸ್ ಪ್ಲ್ಯಾಸ್ಟಿಕ್ ಸರ್ಜರಿ ವಿಭಾಗ ಹುಬ್ಬಳ್ಳಿ
ಇನ್ನು ಹೆಚ್ಚಿನ ಮಾಹಿತಿಗಾಗ