ಜಾಹೀರಾತು ನಟನೆ ಧಿಕ್ಕರಿಸಿದ್ದ Amitabh Bachchan .. ನಾನು ನಟನಾಗದಿದ್ರೆ ಕ್ಯಾಬ್​ ಓಡಿಸುತ್ತಿದ್ದೆ: ಸಿನಿ ದಿಗ್ಗಜ​ ಹೀಗೆನ್ನಲು ಕಾರಣವೇನು?

blank

Amitabh Bachchan : ಬಾಲಿವುಡ್​ ದಿಗ್ಗಜ ನಟ ಅಮಿತಾಬ್​ ಬಚ್ಚನ್​ ಭಾರತೀಯ ಚಿತ್ರರಂಗದ ಅತ್ಯಂತ ಡೊಡ್ಡ ಮತ್ತು ಯಶಸ್ವಿ ನಟರಲ್ಲಿ ಒಬ್ಬರಾಗಿದ್ದಾರೆ. ಅವರ ಯಶಸ್ವಿಗೆ ಕಾರಣ ಎಂದರೆ ಅವರೇ ಹೇಳಿಕೊಳ್ಳುವಂತ ಕಾಲಕ್ಕೆ ತಕ್ಕಂತೆ ಬದಲಾವಣೆ ಮತ್ತು ಪರಿಶ್ರಮ. ಅವರು ಚಿಕ್ಕದಿನಲ್ಲಿ ಹಲವಷ್ಟು ತೊಂದರೆಗಳನ್ನುಎದುರಿಸಿದ್ದಾರೆ. ಈ ಸ್ವತ ಅಮಿತಾಬ್​ ಅವರೇ ಬಹಿರಂಗಪಡಿಸಿದ್ದಾರೆ.

blank

ಇದನ್ನೂ ಓದಿ:ಭಯೋತ್ಪಾದನೆ ನಿಲ್ಲುವವರೆಗೂ ಸಿಂಧೂ ಜಲ ಒಪ್ಪಂದ ಅಮಾನತಿನಲ್ಲಿರಲಿದೆ; ಎಸ್ ಜೈಶಂಕರ್| Indus Waters

ಹೌದು, ತಮ್ಮ ವೃತ್ತಿಯ ಜೀವನದ ಆರಂಭದಲ್ಲಿ ನಟ ಅಮಿತಾಬ್​ ಬ್ರ್ಯಾಂಡ್​ ಜಾಹೀರಾತುವಿನ ಕಲ್ಪನೆಯನ್ನು ಒಪ್ಪುತ್ತಿರಲಿಲ್ಲ. 1960ರ ದಶಕದಲ್ಲಿ ರೆಡಿಯೋ ಕಾರ್ಯಕ್ರಮಗಳಿಗೆ 50 ರೂ. ಸಂಪಾದಿಸುತ್ತಿದ್ದರು. ಆದರೆ, ಕೆಲ ಜಾಹೀರಾತು ಕಡೆಯವರು 10,000 ರೂ. ಕೊಡಲು ಮುಂದಾದರು. ಅದು ಮಾಡಲಿಂಗ್​ ಜಾಹೀರಾತು. ಅದು ನನಗೆ ಮಾಡೆಲಿಂಗ್​ ಸರಿಯಾಗುವುದಿಲ್ಲ ಎಂದು ಭಾವಿಸಿದ್ದೆ. ಹೀಗಾಗಿ, ನಾನು 10 ಸಾವಿರ ರೂ. ಜಾಹೀರಾತುವಿನಿಂದ ಹಿಂದೆ ಸರಿದೆ ಎಂದು ಹೇಳಿದ್ದರು.

ಇದನ್ನೂ ಓದಿ:ರಾಜಧಾನಿಗೆ ‘ಗ್ರೇಟರ್ ಬೆಂಗಳೂರು’ ಆಡಳಿತ: ಇತಿಹಾಸದ ಪುಟ ಸೇರಿದ ಬಿಬಿಎಂಪಿ

1999ರ ವೀರ್​ ಸಾಂಘ್ವಿಯ ಹಳೆ ಸಂದರ್ಶನಲ್ಲಿ ಮಾತನಾಡಿರುವ ಅಮಿತಾಬ್, ಅಂದು ರೇಡಿಯೋ ಕಾರ್ಯಕ್ರಮದಲ್ಲಿ 50 ರೂ. ಗಳಿಸುತ್ತಿದ್ದೆ. ಆದರೆ, ಕೆಲ ಜಾಹೀರಾತುಗಳು ನನಗೆ 10 ಸಾವಿರ ಕೊಡಲು ಮುಂದಾಗಿದ್ದರು. ಆದರೆ, ಅದನ್ನು ನಾನು ತಿರಸ್ಕರಿಸಿದ್ದೆ. ಏಕೆಂದ್ರೆ ಜಾಹೀರಾತು ಬಗ್ಗೆ ವಿಭಿನ್ನ ದೃಷ್ಠಿಕೋನ ಹೊಂದಿದ್ದರು.

ನಾನು ನಟನಾಗದಿದ್ರೆ ಕ್ಯಾಬ್​ ಓಡಿಸುತ್ತಿದ್ದೆ

ಇದೇ ಸಂದರ್ಶನದಲ್ಲಿ ಮಾತನಾಡಿದ ಅಮಿತಾಬ್​, ” ಬಚ್ಚನ್​ ಅವರ ಕಂಪನಿ ಅಮಿತಾಬ್​ ಬಚ್ಚನ್​ ಕಾರ್ಪೋರೇಷನ್​ ಲಿಮಿಟೆಡ್​ (ABCL) ಕಠಿಣ ಹಂತಗಳನ್ನು ಎದುರಿಸುತ್ತಿದ್ದ ಸಮಯದಲ್ಲಿ ಕೆಲ ಬ್ರ್ಯಾಂಡ್​ಗಳನ್ನು ಪ್ರಚಾರ ಮಾಡುವ ಮೂಲಕ ತನ್ನ ಕಂಪನಿಗೆ ಹಣ ಸಂಪಾದಿಸುತ್ತಿದ್ದೆ. ಜಾಹೀರಾತುಗಳಲ್ಲಿ ನಟಿಸುವ ಬದಲು, ನಗರದಲ್ಲಿ ಕ್ಯಾಬ್ ಓಡಿಸಲು ಸಿದ್ಧನಿದ್ದೇನೆ” ಎಂದು ಬಚ್ಚನ್ ಹೇಳಿದರು.

‘ನಾನು ಚಾಲನಾ ಪರವಾನಗಿಯೊಂದಿಗೆ ಬಾಂಬೆಗೆ ಬಂದಿದ್ದೇನೆ ಮತ್ತು ನಾನು ನಟನಾಗದಿದ್ದರೆ, ನಾನು ಕ್ಯಾಬ್ ಓಡಿಸುತ್ತೇನೆ’. ನನ್ನ ಸಂಪೂರ್ಣ ಉದ್ದೇಶ ನಟನೆ ಮಾಡುವುದು. ಆದರೆ ಸಮಯ ಕಳೆದಂತೆ ಪರಿಸ್ಥಿತಿ ಗಂಭೀರವಾಯಿತು. ಬೀದಿಗಳಲ್ಲಿ ಮಲಗಬೇಕಾದ ಕಾಲವಿತ್ತು ಆದರೆ ಆಗಲೂ ನಾನು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಅಮಿತಾಬ್ ಬಚ್ಚನ್ ಹೇಳಿದರು.

ಆದಾಗ್ಯೂ, ಅಮಿತಾಬ್ ಬಚ್ಚನ್ ಸೂಪರ್ ಸ್ಟಾರ್ ಆದಾಗ, ಅವರು ಅನೇಕ ದೊಡ್ಡ ಬ್ರ್ಯಾಂಡ್‌ಗಳೊಂದಿಗೆ ಜಾಹೀರಾತುಗಳಲ್ಲಿ ಕೆಲಸ ಮಾಡಿದರು. ಮಾಧ್ಯಮ ವರದಿಗಳ ಪ್ರಕಾರ, ಇಂದು ಅಮಿತಾಬ್ ಬಚ್ಚನ್ ಜಾಹೀರಾತುಗಳ ಮೂಲಕ ಕೋಟ್ಯಾಂತರ ರೂ. ಗಳಿಸುತ್ತಿದ್ದಾರೆ.(ಏಜೆನ್ಸೀಸ್​)

ನಟನೆ ಬಿಟ್ಟು ಇಡ್ಲಿ-ವಡಾ ಮಾರಾಟ ಮಾಡು ಎಂದಿದ್ದ ವಿಮರ್ಶಕ!: ಇವತ್ತು ಅದು ನನ್ನ ಬ್ಯುಸಿನೆಸ್​: ನಟ ಸುನೀಲ್ ಶೆಟ್ಟಿ | Suniel Shetty

ರಾಜಮೌಳಿ ಪುತ್ರನ ‘ದಾದಾಸಾಹೇಬ್ ಫಾಲ್ಕೆ’ ಬಯೋಪಿಕ್​ನಲ್ಲಿ ಜೂ.ಎನ್​ಟಿಆರ್| NTR

Share This Article
blank

ನಿಮ್ಮ ಬೆಳಿಗ್ಗೆಯನ್ನು ಹೀಗೆ ಆರಂಭಿಸಿ.. ಈ ಅಭ್ಯಾಸಗಳು ನಿಮ್ಮ ಜೀವನವನ್ನು ಬದಲಾಯಿಸುತ್ತವೆ..! healthy morning

healthy morning: ನಾವು ನಮ್ಮ ಬೆಳಿಗ್ಗೆಯನ್ನು ಹೇಗೆ ಪ್ರಾರಂಭಿಸುತ್ತೇವೆ ಎಂಬುದು ದಿನವಿಡೀ ನಮ್ಮ ಆಲೋಚನೆಗಳು ಮತ್ತು…

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

blank