

ಮುಂಬೈ: ಬಾಲಿವುಡ್ನಲ್ಲಿ ಬಿಗ್ ಬಿ ಎಂದೇ ಖ್ಯಾತಿಯಾಗಿರುವ ಅಮಿತಾಬ್ ಬಚ್ಚನ್ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲದೇ ನಿಜಜೀವನದಲ್ಲೂ ನಾಯಕರಾಗಿರುವ ಇವರು ಹಲವರಿಗೆ ಪ್ರೇರಣೆಯೂ ಆಗಿದ್ದಾರೆ.
ಇಂತಹ ಮಹಾನ್ ನಟನನ್ನೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಅಪಹಾಸ್ಯ ಮಾಡಲಾಗಿದೆ. ಇದಕ್ಕೆ ಕಾರಣ ಅಮಿತಾಬ್ ಬಚ್ಚನ್ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಮಾಡಿದ ಒಂದು ಪೋಸ್ಟ್.
ಅಭಿಮಾನಿಗಳಿಗೆ ಗುಡ್ ಮಾರ್ನಿಂಗ್ ಎಂದು ಹೇಳಿದ್ದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಹೀಗೆಂದು ಬೆಳಗ್ಗೆ 1.45ರ ಸುಮಾರಿಗೆ ಈ ಪೋಸ್ಟ್ಅನ್ನು ಬಿಗ್ ಹಾಕಿಕೊಂಡಿದ್ದರು. ಕೆಲವರು ಒಳ್ಳೆಯ ಕಾಮೆಂಟ್ಸ್ ನೀಡಿದರೆ, ಮತ್ತೆ ಕೆಲವರು ಗುಡ್ಮಾರ್ನಿಂಗ್ ಅಂತ ಹೇಳೋದು ಯಾವಾಗ ಮುದುಕ, ನೀನು ಕುಡಿದಿದ್ದೀಯಾ, ಗುಡ್ ಮಾರ್ನಿಂಗ್ ಎಂದು ಹೇಳುವುದು ಮದ್ಯಾಹ್ನನಾ ಎಂದು ಅಪಹಾಸ್ಯ ಮಾಡಿದ್ದಾರೆ.
ಇದಕ್ಕೆ ಕೋಪಗೊಳ್ಳದೇ ಪ್ರತಿಕ್ರಿಯಿಸಿದ ಅಮಿತಾಬ್, ದೇವರು ನಿಮಗೆ ಧೀರ್ಘಾಯುಷ್ಯ ನೀಡಲಿ, ಆದರೆ ನಿಮ್ಮ ವೃದ್ಧಾಪ್ಯದಲ್ಲಿ ಯಾರೂ ನಿಮ್ಮನ್ನು ಅವಮಾನಿಸದಿರುವಂತೆ ನಾನು ಪ್ರಾರ್ಥಿಸುತ್ತೇನೆ ಎಂದು ತಾಳ್ಮೆಯಾಗಿಯೇ ಹೇಳಿದ್ದಾರೆ.
ಆದರೆ ಅಮಿತಾಬ್ ಅವರನ್ನು ಈ ರೀತಿ ಕರೆದ ವ್ಯಕ್ತಿಯನ್ನು ಅವರ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೂ ಪ್ರತಿಕ್ರಿಯಿಸಿರುವ ಅಮಿತಾಬ್, ಹೋಗಲಿ ಬಿಡಿ ಅವರು ನಿಜ ಹೇಳುತ್ತಿದ್ದಾರೆ. ನಾನು ರಾತ್ರಿಯಿಡೀ ಕೆಲಸ ಮಾಡಿ ತಡವಾಗಿ ಎದ್ದೇನೆ ಎಂದು ಅಭಿಮಾನಿಗಳನ್ನು ಸಂತೈಸಿದ್ದಾರೆ. (ಏಜೆನ್ಸೀಸ್)