ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ಜಾಗವನ್ನು ಸೀಲ್ ಮಾಡಿ ಎಂದ ಕೋರ್ಟ್​

gyanavapi
Published on

ಬನಾರಸ್‌ (ಉತ್ತರ ಪ್ರದೇಶ): ಜ್ಞಾನವಾಪಿ ಮಸೀದಿಯೊಳಗೆ ಕೋರ್ಟ್‌ ಆದೇಶದಂತೆ ಮಾಡಲಾದ ಸಮೀಕ್ಷೆ ಸಮಯದಲ್ಲಿ ಶಿವಲಿಂಗ ಪತ್ತೆಯಾದ ಜಾಗವನ್ನು ಸೀಲ್​ ಮಾಡುವಂತೆ ವಾರಾಣಸಿ ನ್ಯಾಯಾಲಯ ಸೋಮವಾರ ಆದೇಶಿಸಿದೆ.

ಜಿಲ್ಲಾ ಮ್ಯಾಜಿಸ್ಟ್ರೇಟ್​​ ನ್ಯಾಯಾಧೀಶ ರವಿಕುಮಾರ್​ ದಿವಾಕರ್​, ಶಿವಲಿಂಗ ಪತ್ತೆಯಾದ ಜಾಗವನ್ನು ಸೀಲ್​ ಮಾಡಿ ಹಾಗೂ ಯಾರಿಗೂ ಒಳಪ್ರವೇಶಕ್ಕೆ ಅನುಮತಿ ನೀಡಬಾರದೆಂದು ಆದೇಶ ನೀಡಿದ್ದಾರೆ.

ಸಮೀಕ್ಷೆ ಸಮಯದಲ್ಲಿ ಮಸೀದಿಯಲ್ಲಿ ಶಿವಲಿಂಗ ಹಾಗೂ ನಂದಿ ಕಂಡುಬಂದಿತ್ತು.ನಂದಿಯ ಎದುರಿನಲ್ಲಿರುವ ಬಾವಿಯಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದೆ ಎಂದು ಸಮೀಕ್ಷೆ ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

ಸದ್ಯ ಇದರ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದಿರುವ ನ್ಯಾಯಾಲಯ ಪ್ರಕರಣ ಪೂರ್ಣಗೊಂಡ ಬಳಿಕವೇ ಬಹಿರಂಗಗೊಳಿಸಲಾಗುವುದು ಎಂದು ಕೋರ್ಟ್​ ಹೇಳಿದೆ.

ಮಸೀದಿಯು ಈ ಮುಂಚೆ ಮಂದಿರವಾಗಿತ್ತು ಎಂಬ ಬಗ್ಗೆ ಇದು ಇನ್ನಷ್ಟು ಪುಷ್ಟಿ ನೀಡುತ್ತಿದೆ ಎಂದು ಹೇಳಲಾಗುತ್ತಿದೆ. ಮೊಘಲ್‌ ದೊರೆ ಔರಂಗಜೇಬ್‌ ಕಾಶಿ ವಿಶ್ವನಾಥ ಮಂದಿರದ ಭಾಗವೊಂದನ್ನು ಕೆಡವಿ ಇದನ್ನು ನಿರ್ಮಿಸಿದ್ದ ಎಂಬ ವಾದವಿದೆ. ಇದೀಗ ಇಲ್ಲಿ ಸಿಗುತ್ತಿರುವ ಕುರುಹುಗಳು ಈ ವಾದವನ್ನು ಪುಷ್ಟೀಕರಿಸುತ್ತಿವೆ ಎನ್ನಲಾಗುತ್ತಿದೆ.

ಪ್ರಸ್ತುತ ಕೋರ್ಟ್‌ ಆದೇಶದ ಮೇರೆಗೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net