2029ರ ಚುನಾವಣೆಯಲ್ಲೂ ಗೆದ್ದು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ; ಅಮಿತ್​ ಷಾ

Untitled-design-15
Published on

ಚಂಡೀಗಢ: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 2029ರ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್​ ಷಾ ಭವಿಷ್ಯ ನುಡಿದಿದ್ದಾರೆ.

ಚಂಡೀಗಢದಲ್ಲಿ ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ನಿರ್ಮಿಸಲಾದ 24×7 ನೀರು ಸರಬರಾಜು ಯೋಜನೆ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ವಿಪಕ್ಷಗಳು ಏನು ಬೇಕಾದರೂ ಹೇಳಲಿ 2029ರಲ್ಲಿ ಮತ್ತೆ ಎನ್‌ಡಿಎ ಸರ್ಕಾರ ಬರಲಿದೆ. ಮೋದಿ ಸರ್ಕಾರ ಬರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇನೆ. ಅವರಿಗೆ (ವಿಪಕ್ಷಗಳಿಗೆ) ಗೊತ್ತಿಲ್ಲ. ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ ಪಡೆದ ಸ್ಥಾನಗಳಿಗಿಂತ ಹೆಚ್ಚು ಸ್ಥಾನಗಳನ್ನು ಈ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ ಎಂದು ಹೇಳಿದರು.

ಅಸ್ಥಿರತೆಯನ್ನು ಹರಡಲು ಬಯಸುವ ಈ ಜನರು ಈ ಸರ್ಕಾರ ಉಳಿಯುವುದಿಲ್ಲ ಎಂದು ಪದೇ ಪದೆ ಹೇಳುತ್ತಾರೆ. ಐದು ವರ್ಷ ಸರ್ಕಾರ ಉಳಿಯುವುದಿಲ್ಲ ಎಂದು ಹೇಳುವ ಪ್ರತಿಪಕ್ಷಗಳಿಗೆ ನಾನು ಹೇಳಲು ಬಯಸುತ್ತೇನೆ ಮೋದಿ ಸರ್ಕಾರ ಈ 5 ವರ್ಷವನ್ನು ಪೂರ್ಣಗೊಳಿಸುತ್ತದೆ ಮಾತ್ರವಲ್ಲದೆ ಮುಂದಿನ ಸರ್ಕಾರವು ಎನ್‌ಡಿಎ ಆಗಿರುತ್ತದೆ ಎಂದರು.

2029ರಲ್ಲೂ ವಿರೋಧ ಪಕ್ಷದಲ್ಲಿ ಕೂರಲು ಪ್ರತಿಪಕ್ಷಗಳ ಮೈತ್ರಿಕೂಟ ತಯಾರಾಗಬೇಕು. ಮತ್ತು ಪ್ರತಿಪಕ್ಷದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಿದ್ಧರಾಗಿರಿ ಎಂದು ತಿಳಿಸಿದರು.2024ರ ಲೋಕಸಭಾ ಚುನಾವಣೆಯಲ್ಲಿ 543 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ 293 ಸ್ಥಾನಗಳನ್ನು ಪಡೆದು ಗೆಲ್ಲುವ ಮೂಲಕ ಬಹುಮತದ ಗಡಿ ದಾಟಿ ಬಿಜೆಪಿ ಸರ್ಕಾರ ರಚಿಸಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net