ಭೋಪಾಲ್: ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ದೇವಸ್ಥಾನದ ಗೋಡೆ ಕುಸಿದು ಒಂಬತ್ತು ಮಕ್ಕಳು ಮೃತಪಟ್ಟಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ. ಶಹಪುರದ ಹರ್ದೌಲ್ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಈ ದುರ್ಘಟನೆ ನಡೆದಿದೆ. ಗಾಯಗೊಂಡ ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನು ಓದಿ: ಆ್ಯಪಲ್ ಕಂಪನಿಯ ಪ್ರಾಡಕ್ಟ್ಗಳನ್ನು ಬಳಸುತ್ತಿದ್ದೀರಾ; ಹಾಗಿದ್ರೆ ಈ ಸುದ್ದಿ ಓದಿ
ಘಟನೆ ಬಳಿಕ ಸ್ಥಳೀಯರ ನೆರವಿನೊಂದಿಗೆ ಪೊಲೀಸರು ರಕ್ಷಣಾ ಕಾರ್ಯ ನಡೆಸಿದರು. ಅವಶೇಷಗಳಿಂದ 8 ಮಕ್ಕಳನ್ನು ಹೊರ ತೆಗೆಯಲಾಗಿದೆ. ಉಳಿದ ಮಕ್ಕಳನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. ಮೃತಪಟ್ಟಿರುವ ಮಕ್ಕಳು 10-15 ವರ್ಷ ವಯಸ್ಸಿನವರು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ದೇವಾಲಯದಲ್ಲಿ ಶಿವಲಿಂಗ ನಿರ್ಮಾಣ ಮತ್ತು ಭಗವತ್ ಕಥಾ ಆಯೋಜನೆ ನಡೆಯುತ್ತಿದೆ. ಸಾವನ ಮಾಸದಲ್ಲಿ ಬೆಳಗಿನಿಂದಲೇ ಇಲ್ಲಿ ಮಣ್ಣಿನಿಂದ ಶಿವಲಿಂಗಗಳನ್ನು ಮಾಡಲಾಗುತ್ತದೆ. ಭಾನುವಾರವೂ ಶಿವಲಿಂಗ ನಿರ್ಮಿಸುವ ಕಾರ್ಯ ಆರಂಭವಾಗಿದ್ದು, ಎಂಟರಿಂದ ಹದಿನಾಲ್ಕು ವರ್ಷದ ಮಕ್ಕಳು ಕೂಡ ಮಣ್ಣಿನ ಶಿವಲಿಂಗವನ್ನು ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಬೆಳಗ್ಗೆ ಶಿವಲಿಂಗ ನಿರ್ಮಾಣದ ವೇಳೆ ದೇವಸ್ಥಾನದ ಸಮುಚ್ಚಯದ ಪಕ್ಕದಲ್ಲಿದ್ದ ಐವತ್ತು ವರ್ಷಗಳಷ್ಟು ಹಳೆಯದಾದ ಮಣ್ಣಿನ ಗೋಡೆ ಕುಸಿದಿದೆ ಎಂದು ವರದಿಯಾಗಿದೆ.
ಘಟನೆಯಿಂದ ನೋವಾಗಿದೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದರು. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳಿಗೆ ಸಾಂತ್ವನ ತಿಳಿಸಿದರು. ಸರ್ಕಾರವು ಪ್ರತಿ ಕುಟುಂಬಕ್ಕೆ 4 ಲಕ್ಷ ರೂಪಾಯಿ ನೆರವು ನೀಡಲಿದೆ ಎಂದು ಅವರು ಹೇಳಿದರು.
ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಗೋಡೆ ಕುಸಿದ ಘಟನೆಯಲ್ಲಿ ನಾಲ್ಕು ಮಕ್ಕಳು ಮೃತಪಟ್ಟ ಒಂದು ದಿನದ ನಂತರ ಈ ಘಟನೆ ನಡೆದಿದೆ. ಭಾರೀ ಮಳೆಯಾಗುತ್ತಿರುವುದರಿಂದ ಗೋಡೆ ಕುಸಿತದ ಘಟನೆಗಳು ವರದಿಯಾಗುತ್ತಿವೆ. (ಏಜೆನ್ಸೀಸ್)
VIDEO| ಸದನದಲ್ಲಿನ ಪ್ರತಿಯೊಬ್ಬರ ನಗುವಿಗೆ ಕಾರಣವಾಯ್ತು ಜಯಾ ಬಚ್ಚನ್ ಪರಿಚಯಿಸಿಕೊಂಡ ರೀತಿ..