ಗಾಂಧಿನಗರ: ಅಮಿತ್ ಷಾಗೆ 7 ಲಕ್ಷಕ್ಕೂ ಹೆಚ್ಚು ಮತಗಳಿಂದ ಭರ್ಜರಿ ಗೆಲುವು!

sha
Published on

ನವದೆಹಲಿ: ಲೋಕಸಭೆ ಚುನಾವಣೆಯ ಮತಎಣಿಕೆಯಲ್ಲಿ ಗುಜರಾತ್​ ಗಾಂಧಿನಗರದ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮಿತ್ ಷಾ ಅವರು 7.44 ಲಕ್ಷ ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್​​​​​ ಅಭ್ಯರ್ಥಿ ಸೋನಾಲ್ ಪಟೇಲ್ ಅವರು ಅಮಿತ್​​​ ಷಾ ಮುಂದೆ ಸ್ಪರ್ಧಿಸಿದರು.

ಈ ಕುರಿತು ಚುನಾವಣೆ ಆಯೋಗದಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. ಕಾಂಗ್ರೆಸ್‌ನ ಸೋನಲ್‌ ರಮಣ್‌ಭಾಯಿ ಪಟೇಲ್‌ ವಿರುದ್ಧ ಅಮಿತ್‌ ಶಾ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. 2019ರಲ್ಲಿಯೂ ಅಮಿತ್‌ ಶಾ ಅವರು ಗಾಂಧಿನಗರದಲ್ಲಿ 5.57 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈಗಲೂ ಅವರ ಗೆಲುವಿನ ಅಂತರ ಜಾಸ್ತಿಯಾಗಿದೆ.

ಕಳೆದ ಬಾರಿ ಅಮಿತ್ ಷಾ ಅವರು 5.57 ಲಕ್ಷ ಅಧಿಕ ಮತಗಳ ಅಂತದಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿಅಮಿತ್ ಷಾ ಅವರು ತಮ್ಮ ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಬಾರಿ 10,10,972 ಮತಗಳನ್ನು ಷಾ ಪಡೆದುಕೊಂಡಿದ್ದಾರೆ. ಈ ಮೂಲಕ ಪ್ರತಿಸ್ಪರ್ಧಿಗಿಂತ 7,44,716 ಹೆಚ್ಚು ಮತ ಗಳಿಸಿದ್ದಾರೆ.

ಅಮಿತ್ ಷಾ ಅವರು ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸೋನಲ್‌ ರಮಣ್‌ಭಾಯಿ ಪಟೇಲ್‌ ಅವರಿಗೆ 2,66,256 ಮತಗಳು ಲಭಿಸಿವೆ. ಗುಜರಾತ್‌ನ ಗಾಂಧಿನಗರ ನಗರ ಕ್ಷೇತ್ರದಿಂದ ಅಮಿತ್​​ ಷಾ ಎರಡನೇ ಭಾರೀ ಗೆಲುವು ಸಾಧಿಸಿದ್ದಾರೆ. ಇನ್ನು ಈ ಕ್ಷೇತ್ರದಿಂದ ಬೇರೆ ಬೇರೆ ಪಕ್ಷ ನಾಯಕರು ಈ ಕ್ಷೇತ್ರದಿಂದ ತಮ್ಮ ನಾಮಪತ್ರವನ್ನು ವಾಪಸ್ಸು ಪಡೆದಿದ್ದರು.

ಮೇ 7 ರಂದು ಮೂರನೇ ಹಂತದ ಚುನಾವಣೆ ನಡೆಯಿತು. ಗುಜರಾತ್‌ನಲ್ಲಿ ಬಿಜೆಪಿ ಸುಮಾರು 25-26 ಸ್ಥಾನಗಳನ್ನು ಗೆಲ್ಲಲಿದೆ ಎಂದು ಮತಗಟ್ಟೆ ಸಮೀಕ್ಷೆ ಹೇಳಿದೆ. ಕಾಂಗ್ರೆಸ್​​​ ಗುಜರಾತ್​​​ನಲ್ಲಿ ತನ್ನ ಖಾತೆ ತೆರೆಯಲು ಹೆಣಗಾಡುತ್ತಿದೆ. 2014ರಲ್ಲಿ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರು ಈ ಕ್ಷೇತ್ರದಿಂದ ಸ್ವರ್ಧಿಸಿದರು. ಇದಕ್ಕೂ ಮೊದಲು 1996ರಲ್ಲಿ ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಕೂಡ ಈ ಕ್ಷೇತ್ರದಿಂದ ಸ್ವರ್ಧಿಸಿ ಗೆಲುವು ಸಾಧಿಸಿದರು. ಗಾಂಧಿನಗರ ಬಿಜೆಪಿ ಭದ್ರಕೋಟೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net