ಭಾರತದಲ್ಲಿರುವ ಅಮೆರಿಕನ್ನರಿಗೆ 'ಈಗಲೇ ವಾಪಸ್ ಬನ್ನಿ' ಎಂದ ಅಮೆರಿಕ ಸರ್ಕಾರ

americ
Published on

ನವದೆಹಲಿ/ನ್ಯೂಯಾರ್ಕ್: ಭಾರತದಲ್ಲಿ ಕರೊನಾ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ತನ್ನ ನಾಗರೀಕರಿಗೆ ಭಾರತಕ್ಕೆ ಪ್ರವಾಸ ಕೈಗೊಳ್ಳದಂತೆ ಮತ್ತು ಭಾರತದಲ್ಲಿದ್ದರೆ ಆದಷ್ಟು ಬೇಗ ಹಿಂತಿರುಗುವಂತೆ ಹೇಳಿದೆ. ಈ ನಿಟ್ಟಿನಲ್ಲಿ ಅತ್ಯಂತ ವಿಪರೀತ ಸ್ಥಿತಿಯಲ್ಲಿ ಜಾರಿಗೊಳಿಸುವ ಲೆವೆಲ್ 4 ಟ್ರಾವೆಲ್ ಅಡ್ವೈಸರಿಯನ್ನು ಅಮೆರಿಕ ಸರ್ಕಾರ ಜಾರಿಗೊಳಿಸಿದೆ. ಇದರಿಂದ, ಮುಂಬರುವ ದಿನಗಳಲ್ಲಿ ಅಮೆರಿಕ ಭಾರತದಿಂದ ಹೋಗುವ ವಿಮಾನಗಳಿಗೆ ತಡೆ ವಿಧಿಸಬಹುದೇ ಎಂಬ ಪ್ರಶ್ನೆ ಮೂಡಿದೆ.

"ಕೋವಿಡ್ 19 ಪ್ರಕರಣಗಳಿಂದಾಗಿ ಭಾರತದಲ್ಲಿ ವೈದ್ಯಕೀಯ ಆರೈಕೆಯ ಲಭ್ಯತೆ ತುಂಬಾ ನಿಯಮಿತವಾಗಿದೆ. ಭಾರತವನ್ನು ಬಿಟ್ಟು ವಾಪಸಾಗಲು ಇಚ್ಛಿಸುವವರು ಲಭ್ಯ ವಾಣಿಜ್ಯ ವಿಮಾನ ಸೇವೆಗಳನ್ನು ಈಗಲೇ ಬಳಸಬೇಕು" ಎಂದು ಪ್ರಯಾಣ ಸಂಬಂಧಿತ ಸರ್ಕಾರಿ ಟ್ವಿಟರ್ ಖಾತೆಯಲ್ಲಿ ​​ತಿಳಿಸಲಾಗಿದೆ. ಪ್ರತಿನಿತ್ಯ ಭಾರತದಿಂದ ಅಮೆರಿಕಕ್ಕೆ 14 ನೇರ ವಿಮಾನಗಳ ಸೇವೆ ಲಭ್ಯವಿದ್ದು, ಪ್ಯಾರಿಸ್​ ಮತ್ತು ಫ್ರಾಂಕ್​​ಫರ್ಟ್​ ಮೂಲಕ ಮತ್ತಷ್ಟು ವಿಮಾನಗಳು ಲಭ್ಯವಿದೆ ಎಂದು ಮಾಹಿತಿ ನೀಡಲಾಗಿದೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3,60,960 ಹೊಸ ಕರೊನಾ ಸೋಂಕಿನ ಪ್ರಕರಣಗಳು ಮತ್ತು 3,293 ಕರೊನಾ ಸಾವುಗಳು ವರದಿಯಾಗಿವೆ. ರಾಷ್ಟ್ರದ ರಾಜಧಾನಿ ದೆಹಲಿ ಸೇರಿ ಹಲವು ರಾಜ್ಯಗಳಲ್ಲಿ ವೈದ್ಯಕೀಯ ಸೌಲಭ್ಯಗಳ ಮೇಲೆ ಒತ್ತಡ ಹೆಚ್ಚಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net